ಹೈದರಾಬಾದ್:ನಟಿ ಕರೀನಾ ಕಪೂರ್ ವಿಮಾನ ಪ್ರಯಾಣದ ವೇಳೆ ತಮ್ಮ ಅಭಿಮಾನಿಗಳನ್ನು ಕಡೆಗಣಿಸಿದ ಘಟನೆಯ ಕುರಿತು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಚರ್ಚಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ನಟಿ ತನ್ನ ಅಭಿಮಾನಿಯನ್ನು ಮಾತನಾಡಿಸದಿದ್ದಕ್ಕೆ ಮಿಲಿಯನೇರ್ ಉದ್ಯಮಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವರ್ಷದ ಆರಂಭದಲ್ಲಿ ಐಐಟಿ - ಕಾನ್ಪುರದಲ್ಲಿ ನಡೆದ ಚರ್ಚೆಗೆ ಅತಿಥಿ ಉಪನ್ಯಾಸಕರಾಗಿ ಬಿಲಿಯನೇರ್ ಉದ್ಯಮಿಯನ್ನು ಆಹ್ವಾನಿಸಲಾಗಿತ್ತು. ಅಲ್ಲಿ ಅವರು ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಳ್ಳುವಾಗ ನಾರಾಯಣ ಮೂರ್ತಿ ಅವರು ಲಂಡನ್‌ನಿಂದ ಭಾರತಕ್ಕೆ ಕೈಗೊಂಡ ತಮ್ಮ ವಿಮಾನ ಪ್ರಯಾಣದಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾರೆ.
ಅಭಿಮಾನಿಗಳಿಗೆ ಪ್ರತಿಕ್ರಿಯಿಸಲು ಮುಂದಾಗದ ನಟಿ: ನಾನು ಲಂಡನ್‌ನಿಂದ ಭಾರತಕ್ಕೆ ಬರುತ್ತಿದ್ದೆ. ನನ್ನ ಪಕ್ಕದಲ್ಲಿ ಕರೀನಾ ಕಪೂರ್ ಕುಳಿತಿದ್ದರು. ಈ ವೇಳೆ ತುಂಬಾ ಜನ ಅಭಿಮಾನಿಗಳು ನಟಿಯ ಬಳಿಗೆ ಬಂದರು ಮತ್ತು ಅವರು ನಟಿ ಕರೀನಾ ಕಪೂರ್ಗೆ ಅಭಿಮಾನದಿಂದ ಹಲೋ ಎಂದು ಹೇಳಿದರು. ಆದರೆ, ಈ ವೇಳೆ ನಟಿ ಕನಿಷ್ಠಪಕ್ಷ ಪ್ರತಿಕ್ರಿಯಿಸಲು ಸಹ ಚಿಂತಿಸಲಿಲ್ಲ. ಈ ವೇಳೆ ಅಲ್ಲಿಯೇ ಕುಳಿತ್ತಿದ್ದ ನಾನು ಒಂದು ಕ್ಷಣ ದಿಗ್ಭ್ರಮೆಗೊಂಡೆ. "ನನ್ನ ಹತ್ತಿರ ಯಾರೇ ಬಂದರೂ, ನಾನು ಎದ್ದುನಿಂತು, ಒಂದು ನಿಮಿಷ ಅಥವಾ ಅರ್ಧ ನಿಮಿಷ ಮಾತನಾಡಿ ಕಳುಹಿಸುತ್ತೇನೆ'' ಎಂದು ತಿಳಿಸಿದ ಅವರು ನಟಿಯ ವರ್ತನೆಯ ಕುರಿತು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:'ಲಾಲ್ ಸಿಂಗ್ ಚಡ್ಡಾ' : ಮಗ 'ಜೇ' ಅನ್ನು ಹೊತ್ತು ರೊಮ್ಯಾಂಟಿಕ್ ಸಾಂಗ್ ಮುಗಿಸಿದ್ದ ಕರೀನಾ..!