ಕರ್ನಾಟಕ

karnataka

ETV Bharat / entertainment

ಇಂದ್ರಜಿತ್ ಲಂಕೇಶ್ ಪುತ್ರನ ಸಿನಿಮಾಕ್ಕೆ ‘ಗೌರಿ’ ಟೈಟಲ್: ತೆರೆ ಮೇಲೆ ಬರಲಿದೆಯಾ ಗೌರಿ ಲಂಕೇಶ್ ಕಥೆ? - etv bharat kannada

ಡೈರೆಕ್ಟರ್ ಇಂದ್ರಜಿತ್ ಲಂಕೇಶ್​​​ ಹೊಸ ಸಿನಿಮಾಕ್ಕೆ ತಮ್ಮ ಅಕ್ಕನ ಹೆಸರು ಗೌರಿ ಎಂದು ಟೈಟಲ್‌ ಇಟ್ಟು ಈ ಚಿತ್ರದ ಮೂಲಕ ಪುತ್ರ ಸಮರ್ಜಿತ್‌ ಲಂಕೇಶ್​ರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ.

indrajit-lankesh-sons-new-film-titled-gauri
ಇಂದ್ರಜಿತ್ ಲಂಕೇಶ್ ಪುತ್ರನ ಸಿನಿಮಾಕ್ಕೆ ‘ಗೌರಿ’ ಟೈಟಲ್: ತೆರೆ ಮೇಲೆ ಬರುತ್ತಾ ಗೌರಿ ಲಂಕೇಶ್ ಕಥೆ?

By ETV Bharat Karnataka Team

Published : Aug 29, 2023, 11:00 PM IST

ಈ ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಸಕ್ಸಸ್ ಆಗಬೇಕು ಅಂತಾ ಸ್ಟಾರ್ ನಟರ, ನಿರ್ದೇಶಕರ, ನಿರ್ಮಾಪಕರ, ರಾಜಕಾರಣಿ ಮಕ್ಕಳು ಈ ಗ್ಲ್ಯಾಮರ್ ಪ್ರಪಂಚಕ್ಕೆ ಬರೋದು ಟ್ರೆಂಡ್ ಆಗಿದೆ. ಇದೀಗ ಹಿರಿಯ ಪತ್ರಕರ್ತ ಮತ್ತು ಸಾಹಿತಿ ಪಿ ಲಂಕೇಶ್ ಅವರ ಮೊಮ್ಮಗ, ಇಂದ್ರಜಿತ್ ಲಂಕೇಶ್ ಅವರ ಮಗ ಸಮರ್ಜಿತ್ ಲಂಕೇಶ್ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಹೀರೋ ಆಗಿ ಪದಾರ್ಪಣೆ ಮಾಡುತ್ತಿದ್ದಾರೆ ಅಂತಾ ಕೆಲವು ದಿನಗಳ ಹಿಂದೆ ಈಟಿವಿ ಭಾರತದಲ್ಲಿ ಸುದ್ದಿ ಪ್ರಕಟವಾಗಿತ್ತು.

ನಿರ್ದೇಶಕ ಇಂದ್ರಜಿತ್ ಲಂಕೇಶ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹಾಗದ್ರೆ ಈ ಸಿನಿಮಾದ ಟೈಟಲ್ ಏನು? ಯಾವಾಗ ಈ ಚಿತ್ರ ಶುರುವಾಗುತ್ತೆ? ಯಾರೆಲ್ಲ ತಂತ್ರಜ್ಞಾನರು ಇರ್ತಾರೆ ಎಂಬ ಮಾಹಿತಿ ಈಗ ಹೊರಬಿದ್ದಿದೆ. ಸ್ಯಾಂಡಲ್ ವುಡ್​ನಲ್ಲಿ ಸ್ಟೈಲಿಶ್​ ಡೈರೆಕ್ಟರ್ ಅಂತಾ ಕರೆಯಿಸಿಕೊಂಡಿರುವ ಇಂದ್ರಜಿತ್‌ ಲಂಕೇಶ್ ಅವರ ಮಗನ ಚಿತ್ರಕ್ಕೆ ಗೌರಿ ಎಂದು ಟೈಟಲ್ ಇಟ್ಟಿದ್ದಾರೆ. ಈ ಟೈಟಲ್ ಕೇಳುತ್ತಿದ್ದಂತೆಯೇ, ಇಂದ್ರಜಿತ್ ಲಂಕೇಶ್ ಅವರ ಸಹೋದರಿ ಪತ್ರಕರ್ತೆ ಗೌರಿ ಲಂಕೇಶ್ ಅವರು ನೆನಪಾಗುವುದು ಸಹಜ. ಈ ಬಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರನ್ನ ಸಂಪರ್ಕಿಸಿದಾಗ ಅವರು ಹೇಳಿದ್ದೇ ಬೇರೆ.

ಗೌರಿ ಸಿನಿಮಾದ ನಾಯಕ ನಟ ಸಮರ್ಜಿತ್‌ ಲಂಕೇಶ್, ನಟಿ ಸಾನ್ಯಾ ಅಯ್ಯರ್

ಈ ಬಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್‌ ಪ್ರತಿಕ್ರಿಯಿಸಿ, ಗೌರಿ ಅಂತಾ ಟೈಟಲ್ ಇಟ್ಟು ತಮ್ಮ ಮಗ ಸಮರ್ಜಿತ್​ನನ್ನು ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದೇನೆ. ಒಬ್ಬ ಹೀರೋಗೆ ಬೇಕಾದ ಸಿದ್ಧತೆಗಳನ್ನ ಸಮರ್ಜಿತ್ ಮಾಡಿಕೊಂಡು ಹೀರೋ ಆಗ್ತಾ ಇದ್ದಾನೆ. ಸಮರ್ಜಿತ್​ಗೆ ಬಿಗ್ ಬಾಸ್ ಸ್ಪರ್ಥಿ ಸಾನ್ಯಾ ಅಯ್ಯರ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ನನ್ನ ಮಗನ ಸಿನಿಮಾಗೆ ನನ್ನ ಅಕ್ಕನ ಹೆಸರು ಗೌರಿ ಅಂತಾ ಟೈಟಲ್ ಯಾಕೇ ಇಟ್ಟಿದ್ದೇನೆ ಅನ್ನೋದು ಸಿನಿಮಾದಲ್ಲೇ ನೋಡಬೇಕು ಅಂದರು.

ಇನ್ನು ಗೌರಿ ಚಿತ್ರಕ್ಕೆ ಜೆಸ್ಸಿಗಿಫ್ಟ್ ಮತ್ತು ಚಂದನ್‌ ಶೆಟ್ಟಿ ಇಬ್ಬರು ಮ್ಯೂಜಿಕ್ ಡೈರೆಕ್ಟರ್ ಸಂಗೀತ ನೀಡುತ್ತಿದ್ದಾರೆ. ಎ ಜೆ ಶೆಟ್ಟಿ ಛಾಯಾಗ್ರಹಣ ಮಾಡುತ್ತಿದ್ದು, ಬಿ ಎ ಮಧು, ರಾಜಶೇಖರ್, ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ. ಹಾಡುಗಳಿಗೆ ಕೆ ಕಲ್ಯಾಣ್, ವಿ ನಾಗೇಂದ್ರ ಪ್ರಸಾದ್, ಕವಿರಾಜ್ ಸಾಹಿತ್ಯ ಬರೆಯುತ್ತಿದ್ದಾರೆ. ಆಗಸ್ಟ್ 31ರಂದು ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಗೌರಿ ಸಿನಿಮಾ ಮುಹೂರ್ತ ಸಮಾರಂಭ ನಡೆಯಲಿದೆ.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಡಾ ನಿರ್ಮಲಾನಂದನಾಥ ಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯ ಅತಿಥಿಗಳಾಗಿವೆ ಆಗಮಿಸಲಿದ್ದಾರೆ. ಗೌರಿ Inspired By A True Story ಎಂಬ ಟ್ಯಾಗ್ ಲೈನ್ ಹೊಂದಿರುವ ಈ ಚಿತ್ರ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಬಗ್ಗೆ ಹೇಳೋದಿಕ್ಕೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೊರಟ್ಟಿದ್ದಾರಾ ಎಂಬ ಸುಳಿವನ್ನು ನೀಡಿದೆ.

ಇದನ್ನೂ ಓದಿ:Kiccha Sudeep 47: ಹೊಂಬಾಳೆ ಫಿಲ್ಮ್ಸ್ ಜೊತೆ ಅಭಿನಯ ಚಕ್ರವರ್ತಿ ಸುದೀಪ್​ ಸಿನಿಮಾ?

ABOUT THE AUTHOR

...view details