ಕರ್ನಾಟಕ

karnataka

ETV Bharat / entertainment

ಕನ್ನಡ ಚಿತ್ರರಂಗಕ್ಕೆ ಯುವ ನಟ ಎಂಟ್ರಿ.. ಬೆಳ್ಳಿ ತೆರೆಮೇಲೆ ಮಿಂಚಲು ರೆಡಿಯಾದ ಪಿ ಲಂಕೇಶ್ ಕುಟುಂಬದ ಕುಡಿ - ಕನ್ನಡ ಚಿತ್ರರಂಗ

ಕನ್ನಡ ಚಿತ್ರರಂಗಕ್ಕೆ ಯುವ ನಟರೊಬ್ಬರು ಎಂಟ್ರಿ ಕೊಡುತ್ತಿದ್ದಾರೆ. ಸಿನಿ ಜಗತ್ತಿಗೆ ಕಾಲಿಡಲು ಸಾಕಷ್ಟು ತಯಾರಿ ನಡೆಸಿರೋ ಪಿ. ಲಂಕೇಶ್ ಕುಟುಂಬದ ಕುಡಿ ಯಾರು ಎಂಬೆಲ್ಲ ಮಾಹಿತಿ ಇಲ್ಲಿದೆ ನೋಡಿ..

indrajit-lankesh-son-samarjeet-lankesh-to-enter-kannada-film-industry
ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ಮಗ ಸಮರ್ಜಿತ್ ಲಂಕೇಶ್

By

Published : Aug 6, 2023, 7:27 AM IST

ಚಿತ್ರರಂಗ ಎಂಬ ಗ್ಲಾಮರ್ ಲೋಕಕ್ಕೆ ಸ್ಟಾರ್ ಮಕ್ಕಳು, ನಿರ್ದೇಶಕರ ಮಕ್ಕಳು ಹಾಗೂ ಪ್ರಸಿದ್ಧ ನಿರ್ಮಾಪಕರ ಮಕ್ಕಳು ಬರೋದು ಟ್ರೆಂಡ್ ಆಗಿದೆ. ಕನ್ನಡ ಚಿತ್ರರಂಗದಕ್ಕೆ ದೊಡ್ಡ ಮಟ್ಟದ ಕೊಡುಗೆ ನೀಡಿರುವ ಪಿ. ಲಂಕೇಶ್ ಕುಟುಂಬದ ಕುಡಿ ಬೆಳ್ಳಿ ತೆರೆಮೇಲೆ ವಿಜೃಂಭಿಸಲು ಸಿದ್ಧರಾಗಿದ್ದಾರೆ.

ಈಗಾಗಲೇ ಕವಿತಾ ಲಂಕೇಶ್ ಮಗಳು ಇಶಾ ಅವರು ತಾಯಿಯ ನಿರ್ದೇಶನದ 'ಸಮ್ಮರ್ ಹಾಲಿಡೇಸ್' ಎಂಬ ಮಕ್ಕಳ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹಾಗಾದ್ರೆ ಈಗ ಯಾರಪ್ಪ ಲಂಕೇಶ್ ಫ್ಯಾಮಿಲಿಯಿಂದ ಚಿತ್ರರಂಗಕ್ಕೆ ಬರುತ್ತಿರುವ ಕುಡಿ ಅಂತೀರಾ.. ಅವರೇ ಸ್ಟೈಲಿಷ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ಮಗ ಸಮರ್ಜಿತ್ ಲಂಕೇಶ್.

ಸಮರ್ಜಿತ್ ಲಂಕೇಶ್

ಅದ್ಧೂರಿ ಮೇಕಿಂಗ್ ಜೊತೆಗೆ ಪರಭಾಷೆಯ ಬ್ಯೂಟಿಫುಲ್ ಹೀರೋಯಿನ್​ಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುವ ನಿರ್ದೇಶಕ ಅಂತಾನೇ ಬ್ರಾಂಡ್ ಆಗಿರುವ ಇಂದ್ರಜಿತ್ ಲಂಕೇಶ್ ಸುಪುತ್ರ ಸಮರ್ಜಿತ್ ಹೀರೋ ಆಗಿ‌‌ ಪಾದಾರ್ಪಣೆ ಮಾಡಲು ರೆಡಿಯಾಗಿದ್ದಾರೆ‌. ಇಂದ್ರಜಿತ್ ಅಂದಾಕ್ಷಣ ಎಲ್ಲರಿಗೂ ನೆನಪಾಗೋದು ನಿಷ್ಕಲ್ಮಶ ನಗು. ಸದಾ ನಗುತ್ತಾ ಮಾತನಾಡುವ ಇಂದ್ರಜಿತ್ ಲಂಕೇಶ್​​ ಮಗ ಹೀರೋ ಆಗುವ ಮಟ್ಟಕ್ಕೆ ಬೆಳೆದಿದ್ದಾನೆ ಅನ್ನೋದು ಹಲವರಿಗೆ ಗೊತ್ತಿರಲಿಕ್ಕಿಲ್ಲ. ಈಗಾಗಲೇ ಫ್ಯಾಷನ್ ಲೋಕದಲ್ಲಿ ತನ್ನದೇ ಬ್ರಾಂಡ್ ಕ್ರಿಯೇಟ್ ಮಾಡಿಕೊಂಡಿರುವ ಸಮರ್ಜಿತ್, ಈಗ ಚಿತ್ರರಂಗದಲ್ಲಿ ಮಿನುಗಲು ರೆಡಿಯಾಗಿದ್ದಾರೆ‌.

ಡೈರೆಕ್ಟರ್ ಇಂದ್ರಜಿತ್ ಲಂಕೇಶ್

ಈಗ ಕಳೆದ ವರ್ಷದಿಂದ ರಂಗಶಂಕರದ ನಾಟಕಗಳಲ್ಲಿ ಬಣ್ಣ ಹಚ್ಚುತ್ತ ನಟನೆ ಬಗ್ಗೆ ಹೆಚ್ಚು ಒತ್ತು ಕೊಟ್ಟಿದ್ದಾರಂತೆ ಸಮರ್ಜಿತ್. ಸಿನಿಮಾರಂಗಕ್ಕೆ ಕಾಲಿಡುವ ಮುನ್ನವೇ ಫ್ಯಾಷನ್ ಇಂಡಸ್ಟ್ರಿಯಲ್ಲಿ ಸಾಕಷ್ಟು ಹೆಸರು ಮಾಡಿರುವ ಸಮರ್ಜಿತ್, ಹಲವು ಜಾಹೀರಾತುಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಇಂಗ್ಲಿಷ್ ಲಿಟರೇಚರ್ ಮುಗಿಸಿರೋ ಅವರು ಸಿನಿಮಾ ರಂಗಕ್ಕೆ ಎಂಟ್ರಿಕೊಡಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಸಮರ್ಜಿತ್ ತನ್ನ ತಂದೆ ಲಂಕೇಶ್ ಸಲಹೆಯಂತೆ ಡ್ಯಾನ್ಸ್, ಫೈಟ್ಸ್, ಆ್ಯಕ್ಟಿಂಗ್ ತರಬೇತಿ ಪಡೆದು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಮಗ ಸಮರ್ಜಿತ್ ಸಿನಿಮಾ ವ್ಯಾಮೋಹದ ಬಗ್ಗೆ ಮಾತನಾಡಿರುವ ಇಂದ್ರಜಿತ್ ಲಂಕೇಶ್, 'ಸಿನಿಮಾ ಇಂಡಸ್ಟ್ರಿಗೆ ಬರ್ತಾನೆ ಅಂತಾ ಅಂದುಕೊಂಡಿರಲಿಲ್ಲ. ಅವನ ಆಸೆಯಂತೆ ಫ್ಯಾಷನ್ ಕ್ಷೇತ್ರದಲ್ಲಿ ಮಾಡೆಲ್ ಆಗಿ ಸಾಕಷ್ಟು ಶೋಗಳನ್ನ ಮಾಡಿದ್ದಾನೆ. ಆದರೆ ಸಿನಿಮಾಗೆ ಬರ್ತೀನಿ ಅಂತಾ ಕೇಳಿದಾಗ ನಾನು ಸಾಕಷ್ಟು ಸಿದ್ಧತೆ ಜೊತೆಗೆ ತಯಾರಿ ಬೇಕು ಅಂತಾ ಹೇಳಿದೆ. ಅದಕ್ಕೆ ಅವನು ನ್ಯೂಯಾರ್ಕ್ ಆಕ್ಟಿಂಗ್ ಅಕಾಡೆಮಿಯಲ್ಲಿ ಅಭಿನಯದ ಬಗ್ಗೆ ಒಂದು ವರ್ಷದ ಕಾಲ ತರಬೇತಿ ಪಡೆದಿದ್ದಾನೆ' ಎಂದು ತಿಳಿಸಿದರು.

ಸಮರ್ಜಿತ್ ಲಂಕೇಶ್

ಬಾಲಿವುಡ್ ಸ್ಟಾರ್​​ಗಳಾದ ಶಾರುಖ್ ಖಾನ್ ಮಗ ಹಾಗೂ ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಕೂಡ ಇದೇ ನ್ಯೂಯಾರ್ಕ್ ಆಕ್ಟಿಂಗ್ ಅಕಾಡೆಮಿಯಲ್ಲಿ ನಟನೆ ಬಗ್ಗೆ ಟ್ರೈನಿಂಗ್ ಪಡೆದಿದ್ದಾರಂತೆ. ಇದಾದ ಬಳಿಕ ನಮ್ಮ ರಂಗಶಂಕರದಲ್ಲಿ ಸಾಕಷ್ಟು ನಾಟಕಗಳಲ್ಲಿ ಅಭಿನಯ, ಎಕ್ಸ್​ಪ್ರೆಶನ್ ಕಲಿತುಕೊಂಡು ಸಮರ್ಜಿತ್ ಲಂಕೇಶ್ ಇಂಡಸ್ಟ್ರಿಗೆ ಬರ್ತಾ ಇದ್ದಾರೆ. ಡ್ಯಾನ್ಸಿಂಗ್ ಜೊತೆಗೆ ಸಾಹಸದಲ್ಲೂ ಸಮರ್ಜಿತ್ ತರಬೇತಿ ಪಡೆದಿದ್ದಾರೆ.

ಇದನ್ನೂ ಓದಿ:ರಾಜ್ ಬಿ ಶೆಟ್ಟಿ ಸಿನಿಮಾ ಪ್ರೇಮದ ಬಗ್ಗೆ ಸಿಂಪಲ್‌ ಮತ್ತು ಡಿವೈನ್ ಸ್ಟಾರ್ ಹೇಳಿದ್ದೇನು?

ABOUT THE AUTHOR

...view details