ಕರ್ನಾಟಕ

karnataka

ETV Bharat / entertainment

ಚೆಲೋ ಶೋ ಸಿನಿಮಾ: ಅ.13 ರಂದು 95 ಚಿತ್ರಮಂದಿರಗಳಲ್ಲಿ ಬಿಡುಗಡೆ, ಟಿಕೆಟ್ ಬೆಲೆ 95 ರೂ.

ಅಧಿಕೃತ ಬಿಡುಗಡೆಗೆ ಒಂದು ದಿನ ಬಾಕಿ ಇರುವಾಗಲೇ, ಭಾರತದ ಅಧಿಕೃತ ಆಸ್ಕರ್ ಪ್ರವೇಶ ಕೊನೆಯ ಚಲನಚಿತ್ರ ಪ್ರದರ್ಶನ (ಚೆಲೋ ಶೋ) ಭಾರತದಾದ್ಯಂತ 95 ಥಿಯೇಟರ್‌ಗಳಲ್ಲಿ ಪ್ರದರ್ಶಿಸಲಾಗುವುದು. ಅದು ಕೂಡ 95 ರೂ. ಟಿಕೆಟ್​ ದೊರೆಯಲಿದೆ ಎಂದು ತಯಾರಕರು ಸೋಮವಾರ ಘೋಷಿಸಿದ್ದಾರೆ.

ಚೆಲೋ ಶೋ ಸಿನಿಮಾ
ಚೆಲೋ ಶೋ ಸಿನಿಮಾ

By

Published : Oct 10, 2022, 7:43 PM IST

ಚೆನ್ನೈ (ತಮಿಳುನಾಡು): ಲಾಸ್ಟ್ ಫಿಲ್ಮ್ ಶೋ (ಚೆಲೋ ಶೋ) ಸಿನಿಮಾವು ಆಸ್ಕರ್​ 2023ಕ್ಕೆ ಭಾರತದಿಂದ ಅಧಿಕೃತ ಪ್ರವೇಶವಾಗಿದೆ. ಈ ಸಿನಿಮಾವನ್ನು ತಯಾರಕರು 95 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಅದು ಕೂಡ ಬಿಡುಗಡೆ ಒಂದು ದಿನ ಬಾಕಿ ಇರುವಾಗಲೇ, ಅಲ್ಲದೇ ಸಿನಿಮಾದ ಟಿಕೆಟ್ ​ದರವನ್ನು 95 ರೂ.ಗೆ ನಿಗದಿಪಡಿಸಲಾಗಿದೆ.

ಚೆಲೋ ಶೋ ಸಿನಿಮಾ ತಯಾರಕರು ಅಕ್ಟೋಬರ್ 13 ಅಂದರೆ ಗುರುವಾರದ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. ಆದರೆ, ಗುಜರಾತಿ - ಭಾಷೆಯಲ್ಲಿರುವ ಸಿನಿಮಾ ಶುಕ್ರವಾರ (ಅಕ್ಟೋಬರ್ 14) ಭಾರತದಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.

95ನೇ ಆಸ್ಕರ್​ ಪ್ರಶಸ್ತಿಗೆ ಆಯ್ಕೆಯಾದ ಹಿನ್ನೆಲೆ 95 ಚಿತ್ರಮಂದಿರಗಳಲ್ಲಿ, 95 ರೂಪಾಯಿಗಳ ಟಿಕೆಟ್ ದರದಲ್ಲಿ ಸಿನಿಮಾ ನೋಡಬಹುದಾಗಿದೆ. ಈ ವಿಷಯವನ್ನು ನಿರ್ದೇಶಕ ಪಾನ್ ನಳಿನ್ ಹಂಚಿಕೊಂಡಿದ್ದು, ನಮ್ಮ ಕೊನೆಯ ಚಿತ್ರ ಪ್ರದರ್ಶನ ('ಚೆಲೋ ಶೋ') ಸಿನಿಮಾ ನೋಡಲು ಅಭಿಮಾನಿಗಳು ತುಂಬಾ ಉತ್ಸಾಹದಿಂದ ಕಾಯುತ್ತಿದ್ದಾರೆ. ಹಾಗಾಗಿ ನಾವು ಗುರುವಾರ ಬಿಡುಗಡೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಆಸ್ಕರ್ ರೇಸ್‌ನಲ್ಲಿರುವ 'ಚೆಲೋ ಶೋ' ಚಿತ್ರದ ನಿರ್ದೇಶಕ ಓರ್ವ ವಿಡಿಯೋಗ್ರಾಫರ್‌! ನಿರ್ದೇಶಕ ನಳಿನ್ ಸಿನಿ ಪಯಣ ಇನ್ನೂ ರೋಚಕ

ಪ್ರತಿ ಟಿಕೆಟ್‌ಗೆ 95 ರೂಪಾಯಿ ದರವು ಗುರುವಾರದ ಶೋಗಳಿಗೆ ಮಾತ್ರ ಎಂದು ತಯಾರಕರು ಸ್ಪಷ್ಟಪಡಿಸಿದ್ದಾರೆ. ಕೊನೆಯ ಚಲನಚಿತ್ರ ಪ್ರದರ್ಶನವನ್ನು ರಾಯ್ ಕಪೂರ್ ಫಿಲ್ಮ್ಸ್, ಜುಗಾದ್ ಮೋಷನ್ ಪಿಕ್ಚರ್ಸ್, ಮಾನ್ಸೂನ್ ಫಿಲ್ಮ್ಸ್ ಮತ್ತು ಚೆಲೋ ಶೋ LLP ನಿರ್ಮಿಸಿದೆ. ಪಿವಿಆರ್ ಸಹಭಾಗಿತ್ವದಲ್ಲಿ ರಾಯ್ ಕಪೂರ್ ಫಿಲ್ಮ್ಸ್ ಭಾರತದಲ್ಲಿ ಚಿತ್ರವನ್ನು ವಿತರಿಸುತ್ತಿದೆ.

ಈ ಚಿತ್ರವನ್ನು USA ನಲ್ಲಿ ಸ್ಯಾಮ್ಯುಯೆಲ್ ಗೋಲ್ಡ್‌ವಿನ್ ಫಿಲ್ಮ್ಸ್ ಮತ್ತು ಫ್ರಾನ್ಸ್‌ನ ಆರೆಂಜ್ ಸ್ಟುಡಿಯೋ ಬಿಡುಗಡೆ ಮಾಡಲಿದೆ. ಶೋಚಿಕು ಸ್ಟುಡಿಯೋಸ್ ಮತ್ತು ಮೆಡುಸಾ ಕ್ರಮವಾಗಿ ಜಪಾನೀಸ್ ಮತ್ತು ಇಟಾಲಿಯನ್ ಚಿತ್ರಮಂದಿರಗಳಿಗೆ ಚಿತ್ರವನ್ನು ರಿಲೀಸ್​ ಮಾಡುತ್ತಿದ್ದಾರೆ.


ABOUT THE AUTHOR

...view details