ಕರ್ನಾಟಕ

karnataka

ETV Bharat / entertainment

'ಭಾರತೀಯ ಮಹಿಳೆಯರೇ ಬೆಸ್ಟ್'​​: ನಟಿ ದೀಪಿಕಾ ಅವರನ್ನು ಮನಸಾರೆ ಹೊಗಳಿದ ಕಂಗನಾ - ದೀಪಿಕಾ ಪಡುಕೋಣೆ ಮಿಂಚು ಹರಿಸಿ

ಬಹಿರಂಗವಾಗಿ ನಟಿ ದೀಪಿಕಾ ಪಡುಕೋಣೆ ಟೀಕಿಸಿದ್ದ ಕಂಗನಾ, ಇದೀಗ ಆಸ್ಕರ್​ ಅಂಗಳದಲ್ಲಿ ನಿರೂಪಣೆ ಮಾಡಿದ್ದ ಪಠಾಣ್​ ನಟಿಯನ್ನು ಹಾಡಿ ಹೊಗಳಿದ್ದಾರೆ.

Indian women are the best: Kangana praised actress Deepika
Indian women are the best: Kangana praised actress Deepika

By

Published : Mar 13, 2023, 5:09 PM IST

ಮುಂಬೈ: ಆಸ್ಕರ್​ ಅಂಗಳದಲ್ಲಿ ಮೊದಲ ಬಾರಿಗೆ ಭಾರತೀಯ ಸಿನಿಮಾ ನಟಿಯೊಬ್ಬರು ನಿರೂಪಣೆ ಮಾಡಿದ ಕೀರ್ತಿಯನ್ನು ಇದೀಗ ನಟಿ ದೀಪಿಕಾ ಪಡುಕೋಣೆ ಹೊಂದಿದ್ದಾರೆ. 2023ರ ಆಸ್ಕರ್​ ಪ್ರಶಸ್ತಿ ಸಮಾರಂಭದಲ್ಲಿ ನಟಿ ದೀಪಿಕಾ ಪಡುಕೋಣೆ ನಿರೂಪಣೆ ಮೂಲಕ ಮಿಂಚು ಹರಿಸಿ, ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ವಿಶ್ವದ ಸಿನಿ ದಿಗ್ಗಜರ ಎದುರು ಕಾರ್ಯಕ್ರಮ ನಿರೂಪಣೆ ಮಾಡಿದ ನಟಿ ದೀಪಿಕಾ ಸ್ಟೈಲ್​ಗೆ ಎಲ್ಲೆಡೆ ಮೆಚ್ಚುಗೆ ಜೊತೆ ಅಭಿನಂದನೆಗಳು ವ್ಯಕ್ತವಾಗುತ್ತಿದೆ.

ಈ ವೇಳೆ ನಟಿ ಕಂಗನಾ ಕೂಡ ತಮ್ಮ ಸಿನಿ ಉದ್ಯಮದ ಸಮಕಾಲೀನ ನಟಿಯ ಈ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಮನಸಾರೆ ಹೊಗಳಿದ್ದಾರೆ. ದೀಪಿಕಾ 'ಆರ್​ಆರ್​ಆರ್'​ ಚಿತ್ರದ ಆಸ್ಕರ್​ ಪ್ರಶಸ್ತಿ ಬಾಚಿಕೊಂಡ 'ನಾಟು ನಾಟು' ಹಾಡು ಲೈವ್​ ಪ್ರದರ್ಶನದ ಮುಂಚೆ ತಮ್ಮ ಮಾತುಗಳ ಮೂಲಕ ಎಲ್ಲರಿಗೆ ಅದರ ಪರಿಚಯವನ್ನು ಮಾಡಿಸಿದರು.

ಆಸ್ಕರ್​ ವೇದಿಕೆ ಮೇಲೆ ನಟಿ ದೀಪಿಕಾ ಮಾತುಗಳು ವೈರಲ್​ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಈ ಸಂಬಂಧ ಪ್ರಶಂಸೆ ವ್ಯಕ್ತ ಪಡಿಸಿದ ನಟಿ ಕಂಗನಾ, ಎಷ್ಟು ಅಂದವಾಗಿ ಆಕೆ ಕಾಣುತ್ತಿದ್ದಾಳೆ ಎಂದು ಹೊಗಳಿದ್ದಾರೆ. 'ಇಂತಹ ಪ್ರತಿಷ್ಟಿತ ವೇದಿಕೆಯಲ್ಲಿ ಎಲ್ಲಾ ದೇಶಗಳನ್ನು ಒಂದು ಮಾಡುವುದು ಸುಲಭವಲ್ಲ. ಆ ಜವಾಬ್ದಾರಿಯನ್ನು ಹೆಗಲ ಮೇಲೆ ಹಾಕಿಕೊಂಡು, ಆಕೆ ಎಷ್ಟು ಸೌಮ್ಯವಾಗಿ ಮತ್ತು ಭಯಮುಕ್ತವಾಗಿ ಮಾತನಾಡಿದಳು ನೋಡಿ. ಭಾರತೀಯ ಮಹಿಳೆಯರು ಅತ್ಯುತ್ತಮರು. ಅದಕ್ಕೆ ದೀಪಿಕಾ ಉದಾಹರಣೆ' ಎಂದಿದ್ದಾರೆ.

ಕಪ್ಪು ಬಣ್ಣದ ಗೌನ್​ನಲ್ಲಿ ವಜ್ರದ ಆಭರಣ ತೊಟ್ಟು, ನಾಟು ನಾಟು ಹಾಡಿನ ಕುರಿತು ನಟಿ ದೀಪಿಕಾ ಪಡುಕೋಣೆ ಜಗತ್ತಿನ ಸಿನಿಮಾ ಮಂದಿಗೆ ಪರಿಚಯ ನೀಡಿದರು . ಇದು ಆರ್​ಆರ್​ಆರ್​ ಚಿತ್ರಕ್ಕೆ ನಿರ್ಣಯಕ ಸಂದರ್ಭ. ಈ ಚಿತ್ರ ಭಾರತೀಯ ಹೋರಾಟಗಾರರಾದ ಕೊಮರಾಂ ಭೀಮ ಮತ್ತು ಅಲ್ಲೂರಿ ಸೀತಾರಾಮ ರಾಜು ಅವರ ಸ್ನೇಹ ಕಥೆಯನ್ನು ಹೊಂದಿದೆ. ನಾಟು ನಾಟು ಅದ್ಬುತ ಹಾಡಾಗಿದ್ದು, ಸಿನಿಮಾ ವಸಾಹತುಶಾಹಿ ವಿರೋಧಿ ಭಾವನೆಗಳನ್ನು ವಿವರಿಸುತ್ತದೆ ಎಂದು ವೇದಿಕೆ ಮೇಲೆ ತಿಳಿಸಿದರು.

ಈ ಹಿಂದೆ ಡಿಂಪಿಯನ್ನು ಟೀಕಿಸಿದ್ದ ನಟಿ:ಆಸ್ಕರ್​ ಅಂಗಳದಲ್ಲಿ ತಮ್ಮ ಚೆಲುವು, ಮಾತು, ನಿರ್ಭೀತ ನಡೆ ಮೂಲಕ ಇದೀಗ ಎಲ್ಲರ ಗಮನ ಸೆಳೆದಿರುವ ನಟಿ ದೀಪಿಕಾಗೆ ಪ್ರಶಂಸೆ ಹೊಳೆ ಸುರಿಸಿರುವ ನಟಿ ಕಂಗನಾ ಈ ಹಿಂದೆ ಆಕೆಯನ್ನು ಸಾಕಷ್ಟು ಟೀಕೆ ಕೂಡ ಮಾಡಿದ್ದರು. ದೀಪಿಕಾ ಪಡುಕೋಣೆ ಅವರ ಗೆಹರಾಯಿಯನ್​ ಚಿತ್ರದ ಕುರಿತು ಆಕ್ರೋಶ ವ್ಯಕ್ತಪಡಿಸಿದ, ನಟಿ ಈ ರೀತಿ ಮೈ ತೋರಿಸಿದರೆ ಜನರು ಮೆಚ್ಚುವುದಿಲ್ಲ. ಇದೊಂದು ಕೆಟ್ಟ ಸಿನಿಮಾ ಎಂದು ಟೀಕಿಸಿದ್ದರು.

ಆಕೆಯನ್ನು ರಕ್ಷಿಸಲು ನಾನಿಲ್ಲ: ಇದೇ ವೇಳೆ ಪತ್ರಿಕಾ ಗೋಷ್ಟಿಯಲ್ಲಿ ನಟಿ ದೀಪಿಕಾ ಅವರ ಗೆಹರಾಯಿಯನ್​ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ನಟಿ ಕಂಗನಾ, ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಾಗದವರನ್ನು ರಕ್ಷಿಸಲು, ಅವರ ಸಿನಿಮಾ ಇಲ್ಲಿ ಪ್ರಚಾರಕ್ಕೆ ಬಂದಿಲ್ಲ. ಆಕೆಗೆ ವೇದಿಕೆ ಇದೆ. ಸವಲತ್ತು ಇದೆ ಎಂದು ಪತ್ರಕರ್ತರ ಬಾಯಿ ಮುಚ್ಚಿಸಿದ್ದರು.

ಇದನ್ನೂ ಓದಿ: ಆಸ್ಕರ್ ಗೆದ್ದ ಆರ್​ಆರ್​ಆರ್​: ಜೂ.ಎನ್‌ಟಿಆರ್‌​, ರಾಮ್​ಚರಣ್​ ಹರ್ಷೋದ್ಗಾರ ಹೀಗಿತ್ತು..

ABOUT THE AUTHOR

...view details