ಕರ್ನಾಟಕ

karnataka

ETV Bharat / entertainment

ಪುನೀತ್ ಪರ್ವ ಕಾರ್ಯಕ್ರಮದಲ್ಲಿ ಸೂಪರ್ ಸ್ಟಾರ್​ಗಳ ಸಂಗಮ - Puneeth rajkumar

ಅಕ್ಟೋಬರ್ 21ರಂದು ಗಂಧದ ಗುಡಿ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಬಹಳ ಅದ್ಧೂರಿಯಾಗಿ ಮಾಡಲು, ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಹಾಗೂ ರಾಜ್​ ವಂಶದ ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ.

Indian super stars will join Puneeth Parva program
ಪುನೀತ್ ಪರ್ವ ಕಾರ್ಯಕ್ರಮದಲ್ಲಿ ಸೂಪರ್ ಸ್ಟಾರ್​ಗಳ ಸಂಗಮ

By

Published : Oct 19, 2022, 5:15 PM IST

Updated : Oct 19, 2022, 5:55 PM IST

ದಿವಗಂತ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಬಹಳ ಇಷ್ಟ ಪಟ್ಟು ಮಾಡಿದ ಸಿನಿಮಾ ಗಂಧದ ಗುಡಿ. ನ್ಯಾಷನಲ್ ಆವಾರ್ಡ್ ವಿನ್ನರ್ ವೈಲ್ಡ್ ಲೈಫ್ ಫೋಟೋಗ್ರಾಫರ್ ಅಮೋಘವರ್ಷ ನಿರ್ದೇಶನದಲ್ಲಿ ಮೂಡಿ ಬಂದಿರುವ ಗಂಧದ ಗುಡಿ ಯುವರತ್ನನ ಕೊನೆಯ ಚಿತ್ರ. ಇದೇ ಅಕ್ಟೋಬರ್​ 28ರಂದು ಗಂಧದ ಗುಡಿ ಸಿನಿಮಾ ವಿಶ್ವಾದ್ಯಂತ ಬಿಡುಗಡೆ ಆಗಲಿದೆ.

ಈ ಹಿನ್ನೆಲೆಯಲ್ಲಿ ಪುನೀತ್ ಪರ್ವ ಹೆಸರಿನಲ್ಲಿ ಅಕ್ಟೋಬರ್ 21ರಂದು ಗಂಧದ ಗುಡಿ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಬಹಳ ಅದ್ಧೂರಿ ಆಗಿ ಮಾಡಲು, ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಹಾಗೂ ರಾಜ್​ ವಂಶದ ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ.

ಪುನೀತ್ ಪರ್ವ ಕಾರ್ಯಕ್ರಮಕ್ಕೆ ಬೆಂಗಳೂರಿನ ಅರಮನೆ ಮೈದಾನದ ಕೃಷ್ಣ ವಿಹಾರ ಸಜ್ಜಾಗುತ್ತಿದೆ. ಈ ಅದ್ಧೂರಿ ಕಾರ್ಯಕ್ರಮದ ಹೈಲೆಟ್ಸ್ ಏನು, ಯಾವೆಲ್ಲ ವ್ಯವಸ್ಥೆಗಳು ಆಗಿವೆ ಎಂಬುದರ ಬಗ್ಗೆ ದೊಡ್ಮನೆಯ ನಟ ರಾಘವೇಂದ್ರ ರಾಜ್ ಕುಮಾರ್ ಬೆಂಗಳೂರಿನಲ್ಲಿ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಗಂಧದ ಗುಡಿ ನಿರ್ದೇಶಕ ಅಮೋಘ ವರ್ಷ ಕೂಡ ಇದ್ದರು.

ನಟ ರಾಘವೇಂದ್ರ ರಾಜ್​ಕುಮಾರ್

ನಟ ರಾಘವೇಂದ್ರ ರಾಜ್​ಕುಮಾರ್ ಮಾತು ಶುರು ಮಾಡಿ, ನಮ್ಮ ಕುಟುಂಬದಿಂದ ಮಾಡುತ್ತಿರುವ ಕಾರ್ಯಕ್ರಮ ಇದು. ಕೋಟ್ಯಂತರ ಅಭಿಮಾನಿಗಳಿಗಾಗಿ ಪುನೀತ್ ಪರ್ವ ಕಾರ್ಯಕ್ರಮವನ್ನು ಅರ್ಪಿಸುತ್ತಿದ್ದೇವೆ. ಈ ಕಾರ್ಯಕ್ರಮ ಅಶ್ವಿನಿ ಪುನೀತ್ ರಾಜ್​ಕುಮಾರ್ ಸಾರಥ್ಯದಲ್ಲಿ ನಡೆಯುತ್ತಿದೆ ಎಂದರು. ಇನ್ನು ನಿರ್ದೇಶಕ ಅಮೋಘ ವರ್ಷ ಮಾತನಾಡಿ ಇದು 1.30 ಗಂಟೆಯ ಸಿನಿಮಾ. ನೋಡುಗರಿಗೆ ಗಂಧದ ಗುಡಿ ಸಿನಿಮಾ ಹೊಸ ಅನುಭವ ಕೊಡುತ್ತದೆ ಎಂದು ಹೇಳಿದರು.

ಅಪ್ಪುಗೆ ಮೊದಲಿನಿಂದಲೂ ಪರಿಸರ, ಪ್ರಾಣಿ, ಪಕ್ಷಿಗಳು ಅಂದ್ರೆ ಇಷ್ಟ. ಈ ಕಾರಣಕ್ಕೆ ಗಂಧದ ಗುಡಿ ಚಿತ್ರವನ್ನು ಮಾಡಿ ಹೋಗಿದ್ದಾರೆ. ಈ ಚಿತ್ರದಲ್ಲಿ ಅಪ್ಪು ಪವರ್ ಸ್ಟಾರ್ ಆಗಿ ಕಾಣಿಸಿಕೊಂಡಿಲ್ಲ. ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಕಾರಣಕ್ಕೆ ಈ ಕಾರ್ಯಕ್ರಮಕ್ಕೆ ಎಲ್ಲರಿಗೂ ಮುಕ್ತವಾಗಿ ಆಹ್ವಾನ ಇದೆ. ಸಂಜೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ಪುನೀತ್ ಪರ್ವ ಕಾರ್ಯಕ್ರಮ ಇದೇ 21ರಂದು ನಡೆಯುತ್ತಿದೆ.

ಇದನ್ನೂ ಓದಿ:ಅಪ್ಪು ಕನಸಿನ ಚಿತ್ರಕ್ಕೆ ಧ್ವನಿಯಾದ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್

ಈ ಕಾರ್ಯಕ್ರಮಕ್ಕೆ ದಕ್ಷಿಣ ಚಿತ್ರರಂಗದಿಂದ ಮೆಗಾಸ್ಟಾರ್ ಚಿರಂಜೀವಿ, ನಾಗಾರ್ಜುನ್, ಅಖಿಲ್, ಬಾಲಯ್ಯ, ರಾಣಾ ದಗ್ಗುಬಾಟಿ, ತಮಿಳು ನಟ ಸೂರ್ಯ, ಪ್ರಭುದೇವ ಸೇರಿದಂತೆ ಸಾಕಷ್ಟು ಸೌತ್ ಸಿನಿಮಾ ನಟರು ಈ ಕಾರ್ಯಕ್ರಮಕ್ಕೆ ಬರಲಿದ್ದಾರೆ. ಇದರ ಜೊತೆಗೆ ಕನ್ನಡ ಚಿತ್ರರಂಗದ ಎಲ್ಲ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು, ಸಹ ಕಲಾವಿದರು ಸೇರಿದಂತೆ ಇಡೀ ದೊಡ್ಮನೆ ಕುಟುಂಬದ ಸದಸ್ಯರು ಈ ಪುನೀತ್ ಪರ್ವ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

ಇದನ್ನೂ ಓದಿ:ಧಾರವಾಡ: ಪುನೀತ್ ಸಮಾಧಿವರೆಗೆ ಅಭಿಮಾನಿ ದ್ರಾಕ್ಷಾಯಿಣಿ ಓಟ..

ಇದರ ಜೊತೆಗೆ ಪುನೀತ್ ರಾಜ್​ಕುಮಾರ್ ಅಭಿನಯದ ಎಲ್ಲ ಸಿನಿಮಾದ ಹಾಡುಗಳನ್ನು ಗಾಯಕರಾದ ವಿಜಯ್ ಪ್ರಕಾಶ್, ಆರ್ಮಾನ್ ಮಲಿಕ್ ಹಾಡುಲಿದ್ದಾರೆ. ಇನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪ್ರಭುದೇವ ಹಾಗೂ ನಟಿ ರಮ್ಯಾ ಅವರು ಸ್ಪೆಷಲ್ ಹಾಡಿಗೆ ಡ್ಯಾನ್ಸ್ ಮಾಡಲಿದ್ದಾರೆ. ಜೊತೆಗೆ ಅದ್ಧೂರಿ ವೇದಿಕೆಯಲ್ಲಿ ಒಂದು ಅಚ್ಚರಿ ಸಹ ಇರಲಿದೆಯಂತೆ.

Last Updated : Oct 19, 2022, 5:55 PM IST

ABOUT THE AUTHOR

...view details