ಬಾಲಿವುಡ್ನ ಹ್ಯಾಡ್ಸಂ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರ ಮುಂದಿನ ಬಹುನಿರೀಕ್ಷಿತ ಪ್ರೊಜೆಕ್ಟ್ 'ಇಂಡಿಯನ್ ಪೊಲೀಸ್ ಫೋರ್ಸ್'. ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಆಗಲು ಸಜ್ಜಾಗಿರುವ ಈ ವೆಬ್ ಸೀರಿಸ್ನ ಟೀಸರ್ ಅನಾವರಣಗೊಂಡಿದೆ. ಮುಂದಿನ ತಿಂಗಳು ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಪ್ರಸಾರ ಪ್ರಾರಂಭಿಸಲು ಸಜ್ಜಾಗಿರುವ ಈ ಸೀರಿಸ್ನ ಟೀಸರ್ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.
ನಟ ಸಿದ್ಧಾರ್ಥ್ ಮಲ್ಹೋತ್ರಾ ಸೂಪರ್ ಹಿಟ್ ಶೇರ್ಷಾ ಸಿನಿಮಾದ ಯಶಸ್ಸಿನ ನಂತರ ಖಾಕಿ ತೊಟ್ಟ ಮತ್ತೊಂದು ಪಾತ್ರ ಚಿತ್ರಿಸಲು ಸಜ್ಜಾಗಿದ್ದಾರೆ. ಈ ಬಾರಿ, ರೋಹಿತ್ ಶೆಟ್ಟಿ ನಿರ್ದೇಶನದ ವೆಬ್ ಸರಣಿ 'ಇಂಡಿಯನ್ ಪೊಲೀಸ್ ಫೋರ್ಸ್'ನಲ್ಲಿ ಖಡಕ್ ಕುಕ್ನೊಂದಿಗೆ ಬರಲಿದ್ದಾರೆ. ಖ್ಯಾತ ಕಲಾವಿದರಾದ ಶಿಲ್ಪಾ ಶೆಟ್ಟಿ ಮತ್ತು ವಿವೇಕ್ ಒಬೆರಾಯ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.
ಸೀರಿಸ್ ನಿರ್ಮಾಪಕರು ಇಂದು ತಮ್ಮ ಇಂಡಿಯನ್ ಪೊಲೀಸ್ ಫೋರ್ಸ್‌ನ ಆ್ಯಕ್ಷನ್ ಪ್ಯಾಕ್ಡ್ ಟೀಸರ್ ಅನ್ನು ಅನಾವರಣಗೊಳಿಸಿ ಸಿನಿಪ್ರಿಯರ ಉತ್ಸಾಹ ಹೆಚ್ಚಿಸಿದ್ದಾರೆ. SWAT ತಂಡದ ನಾಯಕ, ಎಸ್‌ಪಿ ಕಬೀರ್ ಮಲಿಕ್ ಪಾತ್ರವನ್ನು ಸಿದ್ಧಾರ್ಥ್ ಮಲ್ಹೋತ್ರಾ ನಿರ್ವಹಿಸಿದ್ದಾರೆ.