ಕನ್ನಡ ಚಿತ್ರರಂಗದಲ್ಲಿ ಕಮರ್ಷಿಯಲ್ ಹಾಗೂ ಅದ್ಧೂರಿ ಮೇಕಿಂಗ್ ಸಿನಿಮಾಗಳ ಮಧ್ಯೆ ಪ್ರಯೋಗಾತ್ಮಕ ಚಿತ್ರಗಳು ಆಗಾಗ ಸದ್ದು ಮಾಡುತ್ತವೆ. ಇದೀಗ ನಟಿ ಅಕ್ಷತಾ ಪಾಂಡವಪುರ ಅಭಿನಯದ ಖ್ಯಾತ ಕಥೆಗಾರ ಕಾ.ತಾ ಚಿಕ್ಕಣ್ಣನವರ ಕಥೆಯಾಧಾರಿತ ಚಂಪಾ ಪಿ ಶೆಟ್ಟಿಯವರ ನಿರ್ದೇಶನದ 'ಕೋಳಿ ಎಸ್ರು' ಸಿನಿಮಾಗೆ ಪ್ರಶಸ್ತಿಗಳ ಸುರಿಮಳೆ ಆಗಿದೆ. ಇದೇ ಆಗಸ್ಟ್ನಲ್ಲಿ ಆಸ್ಟ್ರೇಲಿಯಾದ 'ಮೆಲ್ಬೋರ್ನ್ ಇಂಡಿಯನ್ ಚಿತ್ರೋತ್ಸವ'ದಲ್ಲಿ ನಮ್ಮ ಏಪ್ರಾನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಿಸಿರುವ, 'ಕೋಳಿ ಎಸ್ರು' ಸಿನೆಮಾ ಆಯ್ಕೆಗೊಂಡಿದೆ.
ಇದರ ಜೊತೆಗೆ ನಟಿ ಅಕ್ಷತಾ ಪಾಂಡವಪುರ ಅವರು ಅತ್ಯುತ್ತಮ ನಟಿ ಪ್ರಶಸ್ತಿಗೆ ನಾಮಿನೆಟ್ ಆಗಿದ್ದಾರೆ. ಐಶ್ವರ್ಯಾ ರೈ, ಆಲಿಯಾ ಭಟ್, ಕಾಜಲ್ ಅಗರ್ವಾಲ್, ಸಾಯಿಪಲ್ಲವಿ, ನೀನಾಗುಪ್ತ, ರಾಣಿಮುಖರ್ಜಿ ಮುಂತಾದ ಖ್ಯಾತ ನಟಿಯರ ಜೊತೆಗೆ ಅಕ್ಷತಾ ಪಾಂಡವಪುರ ಕೂಡ ಆಯ್ಕೆಯಾಗಿರುವುದು ನಿಜಕ್ಕೂ ಕನ್ನಡಿಗರಿಗೆ ಹೆಮ್ಮೆ.
ಇತ್ತೀಚೆಗೆ ಕೆನಡಾದ 'ಒಟ್ಟಾವ ಇಂಡಿಯನ್ ಫಿಲ್ಮ್ ಫೆಸ್ಟಿವಲ್'ನಲ್ಲಿ ಕೂಡ 'ಕೋಳಿ ಎಸ್ರು' ಸಿನಿಮಾ ಪ್ರದರ್ಶನಗೊಂಡು, ಚಿತ್ರದ ನಿರ್ದೇಶಕಿ ಚಂಪಾಶೆಟ್ಟಿ ಅವರಿಗೆ 'ಅತ್ಯುತ್ತಮ ನಿರ್ದೇಶಕಿ' ಪ್ರಶಸ್ತಿ ಮತ್ತು ಅಕ್ಷತಾ ಪಾಂಡವಪುರ ಅವರಿಗೆ 'ಅತ್ಯುತ್ತಮ ನಟಿ' ಪ್ರಶಸ್ತಿ ಲಭಿಸಿತ್ತು. ವಿದೇಶದಲ್ಲಿ ಭಾರತದ, ಅದರಲ್ಲೂ ಕನ್ನಡದ ಸಿನಿಮಾ ಗಮನ ಸೆಳೆದದ್ದು ವಿಶೇಷ. ಇದು ಕನ್ನಡಿಗರಿಗೆ ಹಾಗೂ ಕನ್ನಡ ಚಿತ್ರರಂಗಕ್ಕೆ ಸಂತಸದ ವಿಚಾರ.
ಇದನ್ನೂ ಓದಿ:Project K: ಲಕೋಟೆಯಲ್ಲಿದೆ 'ಪ್ರಾಜೆಕ್ಟ್ ಕೆ' ಹೆಸರು: ಶೀರ್ಷಿಕೆ ಇದಾಗಿರಬಹುದೆಂದು ಊಹಿಸಿದ ಸಿನಿ ಪ್ರೇಮಿಗಳು
ಈಗಾಗಲೇ ಕೋಳಿ ಎಸ್ರು ಸಿನಿಮಾ ಹಲವಾರು ಹೊರದೇಶಗಳ ಮತ್ತು ಭಾರತೀಯ ಚಲನಚಿತ್ರೋತ್ಸವಗಳಲ್ಲಿ ಆಯ್ಕೆಗೊಂಡು ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಕನ್ನಡ ಚಿತ್ರರಂಗದ ಹಿರಿಮೆಯನ್ನು ವಿದೇಶದಲ್ಲಿ ಪಸರಿಸಿದೆ. ಕನ್ನಡತಿ ಅಕ್ಷತಾ ಪಾಂಡವಪುರ ವಿದೇಶದಲ್ಲೂ ಕೀರ್ತಿ ಗಳಿಸಿದ್ದಾರೆ. ಇದುವರೆಗೂ ಈ ಚಿತ್ರ ಆಯ್ಕೆಯಾದ ಚಿತ್ರೋತ್ಸವಗಳು ಹಾಗೂ ಪ್ರಶಸ್ತಿಗಳ ವಿವರ ಈ ಕೆಳಗಿನಂತಿದೆ..
'ಕೋಳಿ ಎಸ್ರು' ಚಿತ್ರ ಆಯ್ಕೆಯಾದ ಚಿತ್ರೋತ್ಸವಗಳು
- ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ (ಯು.ಎಸ್ ಎ)
- ಇಂಡೋ ಜರ್ಮನ್ ಫಿಲ್ಮ್ ವೀಕ್ (ಜರ್ಮನಿ)
- ಒಟ್ಟಾವ ಇಂಡಿಯನ್ ಫಿಲ್ಮ್ ಫೆಸ್ಟಿವಲ್ (ಕೆನಡಾ)
- ಮೆಲ್ಬೋರ್ನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ (ಆಸ್ಟ್ರೇಲಿಯಾ)
- ಅಜಂತಾ ಎಲ್ಲೋರ ಅಂತಾರಾಷ್ಟ್ರೀಯ ಚಿತ್ರೋತ್ಸವ (ಔರಂಗಾಬಾದ್)
- ಅಂತಾರಾಷ್ಟ್ರೀಯ ಚಿತ್ರೋತ್ಸವ ತ್ರಿಶೂರ್ (ಕೇರಳ)
- ಅಂತಾರಾಷ್ಟ್ರೀಯ ಚಿತ್ರೋತ್ಸವ ಇರಿಂಜ್ಯಾಲಗುಡ (ಕೇರಳ)
- ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ (ಬೆಂಗಳೂರು)
- ನಿಟ್ಟೆ ಅಂತಾರಾಷ್ಟ್ರೀಯ ಚಿತ್ರೋತ್ಸವ (ಮಂಗಳೂರು)
'ಕೋಳಿ ಎಸ್ರು' ಸಿನಿಮಾಗೆ ಸಿಕ್ಕಿರುವ ಪ್ರಶಸ್ತಿಗಳು
- ಅತ್ಯುತ್ತಮ ಭಾರತೀಯ ಚಿತ್ರ 'ಕೋಳಿ ಎಸ್ರು' (ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ)
- ಅತ್ಯುತ್ತಮ ನಿರ್ದೇಶಕಿ, ಚಂಪಾ ಪಿ ಶೆಟ್ಟಿ (ಒಟ್ಟಾವ ಇಂಡಿಯನ್ ಫಿಲ್ಮ್ ಫೆಸ್ಟಿವಲ್)
- ಅತ್ಯುತ್ತಮ ನಟಿ ಅಕ್ಷತಾ ಪಾಂಡವಪುರ (ಒಟ್ಟಾವ ಇಂಡಿಯನ್ ಫಿಲ್ಮ್ ಫೆಸ್ಟಿವಲ್)
- ಅತ್ಯುತ್ತಮ ನಟಿ, ಅಕ್ಷತಾ ಪಾಂಡವಪುರ (ಅಜಂತಾ ಎಲ್ಲೋರ ಅಂತರಾಷ್ಟ್ರೀಯ ಚಿತ್ರೋತ್ಸವ)
- ಅತ್ಯುತ್ತಮ ಬಾಲನಟಿ, ತೀರ್ಪುಗಾರರ ವಿಶೇಷ ಪ್ರಶಸ್ತಿ ಅಪೇಕ್ಷಾ ಚೋರನಹಳ್ಳಿ (ಅಜಂತಾ ಎಲ್ಲೋರ ಅಂತಾರಾಷ್ಟ್ರೀಯ ಚಿತ್ರೋತ್ಸವ)
ಇದನ್ನೂ ಓದಿ:ವಿಜಯ್ - ಸಮಂತಾ ಸಿನಿಮಾ ಶೂಟಿಂಗ್ ಕಂಪ್ಲೀಟ್: ಕೇಕ್ ಕತ್ತರಿಸಿ 'ಖುಷಿ' ಪಟ್ಟ ಚಿತ್ರತಂಡ