ಕನ್ನಡ ಚಿತ್ರರಂಗ ಅಲ್ಲದೇ ಭಾರತೀಯ ಚಿತ್ರರಂಗ ಎದುರು ನೋಡುತ್ತಿದ್ದ ಬಹು ನಿರೀಕ್ಷಿತ ಕಬ್ಜ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಹಾಗೂ ನಿರ್ದೇಶಕ ಆರ್ ಚಂದ್ರು ನಿರ್ದೇಶನದ ಕಬ್ಜ ಚಿತ್ರದ ಟೀಸರ್ ಕಾರ್ಯಕ್ರಮ ಬೆಂಗಳೂರಿನ ಒರಾಯನ್ ಮಾಲ್ ನಲ್ಲಿ ನಡೆಯಿತು.
ಈ ಚಿತ್ರದ ಟೀಸರ್ ನ್ನು ಬಿಡುಗಡೆ ಮಾಡಲು ಟಾಲಿವುಡ್ ನಟ ರಾಣಾ ದಗ್ಗುಬಾಟಿ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ರಾಣಾ ಜೊತೆಗೆ ಶ್ರೇಯಾ ಶರಣ್, ನಿರ್ಮಾಪಕ ಕೆ.ಪಿ ಶ್ರೀಕಾಂತ್, ದುಬೈ ಉದ್ಯಮಿ ಬಿ.ಆರ್ ಶೆಟ್ಟಿ, ನಟ ಉಪೇಂದ್ರ, ನಿರ್ದೇಶಕ ಆರ್ ಚಂದ್ರು ಸೇರಿದಂತೆ ಹಲವರು ಇಡೀ ಕಬ್ಜ ಸಿನಿಮಾದ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
90ರ ದಶಕದಲ್ಲಿ ನಾನು ಉಪ್ಪಿ ಸಾರ್ ಸಿನಿಮಾ ನೋಡುತ್ತಿದ್ದೆ.. ನಟ ರಾಣಾ ದಗ್ಗುಬಾಟಿ ಕಬ್ಜ ಟೀಸರ್ ಬಿಡುಗಡೆ ಮಾಡಿ ಮಾತನಾಡಿದ ತೆಲುಗು ನಟ ರಾಣಾ ದಗ್ಗುಬಾಟಿ, ಕನ್ನಡ ಚಿತ್ರರಂಗ ಸಿನಿಮಾಗಳ ಗುಣಮಟ್ಟ ಹಾಗೂ ಬೆಳವಣಿಗೆಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಮಯದಲ್ಲಿ ಉಪೇಂದ್ರ ಬಗ್ಗೆ ರಾಣಾ ದಗ್ಗುಬಾಟಿ ಒಂದು ಅಚ್ಚರಿ ವಿಷ್ಯವೊಂದನ್ನು ಬಿಚ್ಚಿಟ್ಟರು. ನಾನು 90ರ ದಶಕದಲ್ಲಿಯೇ ಉಪೇಂದ್ರ ಸಿನಿಮಾಗಳನ್ನು ತೆಲುಗು ರಿಮೇಕ್ ನಲ್ಲಿ ನೋಡುತ್ತಿದ್ದೆ ಎಂದು ಹೇಳಿದರು. ಕಬ್ಜ ಸಿನಿಮಾ ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತದೆ ಎಂದು ಹೇಳಿದರು.
ಇದರ ಜೊತೆಗೆ ಉಪೇಂದ್ರ ರಾಣಾ ದಗ್ಗುಬಾಟಿಗೆ ರಕ್ತ ಕಣ್ಣೀರು ಚಿತ್ರದ ಡೈಲಾಗ್ ಹೇಳಿ ಕೊಟ್ಟರು. ಆ ಡೈಲಾಗ್ ರಾಣಾ ತೆಲುಗಿನಲ್ಲಿ ಹೇಳುವ ಮೂಲಕ ಅಚ್ಚರಿ ಮೂಡಿಸಿದರು.
ನಟ ರಾಣಾ ದಗ್ಗುಬಾಟಿಗೆ ಸಿನೆಮಾ ಡೈಲಾಗ್ ಹೇಳಿಕೊಟ್ಟ ರಿಯಲ್ ಸ್ಟಾರ್ ಚಂದ್ರ ಸಿನಿಮಾ ಬಳಿಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಆಗಮಿಸಿರುವ ಸೌತ್ ನಟಿ ಶ್ರೇಯಾ ಶರಣ್ ಈ ಚಿತ್ರದಲ್ಲಿ ಉಪ್ಪಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಪಾತ್ರಕ್ಕೆ ನಿರ್ದೇಶಕ ಚಂದ್ರು ಸಾರ್ ನನ್ನನ್ನು ಆಯ್ಕೆ ಮಾಡಿದಕ್ಕೆ ಥ್ಯಾಂಕ್ ಯು. ಇನ್ನು ಉಪೇಂದ್ರ ಸಾರ್ ದೊಡ್ಡ ಸ್ಟಾರ್ ಆಗಿದ್ದರೂ ಸರಳವಾಗಿ ಇರುತ್ತಾರೆ. ಅವರ ಜೊತೆ ನಟಿಸಿದ್ದು ಸದಾ ನೆನಪಿನಲ್ಲಿ ಉಳಿಯುತ್ತದೆ ಎಂದು ಹೇಳಿದರ. ಇನ್ನು ನನಗೆ ಬೆಂಗಳೂರು ಅಂದರೆ ಇಷ್ಟ.ಬೆಂಗಳೂರಿನಲ್ಲಿ ಸಿಗುವ ವಿವಿಧ ಊಟ ಹಾಗೂ ಶಾಪಿಂಗ್ ಮಾಲ್ ಗಳು ಎಂದರೆ ನನಗೆ ಇಷ್ಟ ಎಂದು ಹೇಳಿದರು.
ಇನ್ನು ನಾಳೆ ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬ. 53ನೇ ವಸಂತಕ್ಕೆ ಕಾಲಿಡುತ್ತಿರೋ ಉಪೇಂದ್ರ ಅವರಿಗೆ ಕಬ್ಜ ಸಿನಿಮಾ ಚಿತ್ರತಂಡದಿಂದ ಮುಂಗಡವಾಗಿ ಕೇಕ್ ಕಟ್ ಮಾಡುವ ಮೂಲಕ ಹುಟ್ಟು ಹಬ್ಬದ ಶುಭಾಶಯ ಹೇಳಲಾಯಿತು. ನಿರ್ದೇಶಕ ಆರ್ ಚಂದ್ರು ಕೇಕ್ ಕಟ್ ಮಾಡುವ ಮೂಲಕ ತಮ್ಮ ಹೀರೋಗೆ ಹುಟ್ಟುಹಬ್ಬಕ್ಕೆ ಕಬ್ಜ ಟೀಸರ್ ನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದು ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಈ ವರ್ಷದ ಸ್ಪೆಷಲ್ ಗಿಫ್ಟ್ ಕೂಡಾ ಹೌದು.
ಇದನ್ನೂ ಓದಿ :ಕನ್ನಡ ಚಿತ್ರರಂಗದ ಬೆಳವಣಿಗೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ನಟ ರಾಣಾ ದಗ್ಗುಬಾಟಿ