ಬಾಲಿವುಡ್ ಹಾಟ್ ಬ್ಯೂಟಿ ದಿಶಾ ಪಟಾನಿ ಸದಾ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಟೈಗರ್ ಶ್ರಾಫ್ ಜೊತೆಗಿನ ಬ್ರೇಕಪ್ ವದಂತಿಯ ನಂತರ ಅಲೆಕ್ಸಾಂಡರ್ ಅಲೆಕ್ಸ್ ಇಲಿಕ್ ಜೊತೆ ನಟಿ ಡೇಟಿಂಗ್ನಲ್ಲಿರುವ ಬಗ್ಗೆ ಕೆಲವು ಊಹಾಪೋಹಗಳು ಹರಿದಾಡುತ್ತಿವೆ. ಈ ವದಂತಿಗಳು ನಿಜವೆಂಬುಕ್ಕೆ ಇದೀಗ ಅಲೆಕ್ಸಾಂಡರ್ ಕೈಯಲ್ಲಿ ದಿಶಾಳ ಟ್ಯಾಟೂ ಮೂಡಿದೆ. ಅವರು ತಮ್ಮ ಕೈಯಲ್ಲಿ ದಿಶಾಳ ಮುಖವನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ. ಇದು ಡೇಟಿಂಗ್ ವದಂತಿಗಳಿಗೆ ಮತ್ತಷ್ಟು ತುಪ್ಪ ಸುರಿದಂತಿದೆ.
ದಿಶಾ ಇನ್ಸ್ಟಾ ಸ್ಟೋರಿ: ಅಲೆಕ್ಸಾಂಡರ್ ಅಲೆಕ್ಸ್ ಇಲಿಕ್ ಹಚ್ಚೆ ಹಾಕಿಸಿಕೊಂಡಿರುವ ಫೋಟೋವನ್ನು ದಿಶಾ ಪಟಾನಿ ಇನ್ಸ್ಟಾಗ್ರಾಮ್ ಸ್ಟೋರಿ ಹಾಕಿಕೊಂಡಿದ್ದಾರೆ. "ಇದು ನನಗೆ ತುಂಬಾ ಇಷ್ಟವಾಯಿತು ಅಲೆಕ್ಸಿ. ನಿಮ್ಮನ್ನು ಸ್ನೇಹಿತನಾಗಿ ಪಡೆಯಲು ನಾನು ತುಂಬಾ ಲಕ್ಕಿ #BFF" ಎಂದು ಫೋಟೋ ಕ್ಯಾಪ್ಶನ್ ನೀಡಿದ್ದಾರೆ. ನಟಿಯ ಸ್ಟೋರಿಯಲ್ಲಿ ಅಲೆಕ್ಸಾಂಡರ್ ಅಲೆಕ್ಸ್ ಇಲಿಕ್ ಕೈಯಲ್ಲಿ ದಿಶಾ ಅವರ ಪೋಟೋವನ್ನು ಹಚ್ಚೆ ಹಾಕಿಕೊಂಡಿರುವುದನ್ನು ಕಾಣಬಹುದು.
ದಿಶಾ ಪಟಾನಿ ಮತ್ತು ಅಲೆಕ್ಸಾಂಡರ್ ಅಲೆಕ್ಸ್ ಇಲಿಕ್ ಬಹಿರಂಗವಾಗಿ ತಾವಿಬ್ಬರು ಪ್ರೀತಿಸುತ್ತಿರುವುದಾಗಿ ಎಲ್ಲಿಯೂ ಹೇಳಿಕೊಂಡಿಲ್ಲ. ಕಳೆದ ಡಿಸೆಂಬರ್ ತಿಂಗಳಿನಿಂದ ಇವರಿಬ್ಬರ ನಡುವಿನ ಸಂಬಂಧದ ಬಗ್ಗೆ ವದಂತಿಗಳು ಪ್ರಾರಂಭವಾದವು. ಆದರೆ ತಾವಿಬ್ಬರು ಸ್ನೇಹಿತರು ಎಂಬುದಾಗಿ ಎಲ್ಲಾ ಕಡೆಯೂ ಹೇಳಿಕೊಂಡಿದ್ದಾರೆ.
ದಿಶಾ ಪಟಾನಿ ಇನ್ಸ್ಟಾ ಸ್ಟೋರಿ ಇದನ್ನೂ ಓದಿ:3 ಲಕ್ಷದ ದಿರಿಸಿನಲ್ಲಿ ಮಿಂಚಿದ ಬಾಲಿವುಡ್ ಮಿಂಚುಳ್ಳಿ ದಿಶಾ ಪಟಾನಿ
ಇನ್ನೂ ಇದಕ್ಕೂ ಮುನ್ನ ಟೈಗರ್ ಶ್ರಾಫ್ ಜೊತೆ ದಿಶಾ ಪಟಾನಿ ಹೆಸರು ಕೇಳಿಬಂದಿತ್ತು. ಆದರೆ ಬ್ರೇಕಪ್ ವದಂತಿ ಬಗ್ಗೆ ಊಹಾಪೋಹಗಳಿದೆಯೇ ಹೊರತು ಅಧಿಕೃತವಾಗಿ ಯಾವುದೇ ಹೇಳಿಕೆಗಳಿಲ್ಲ. ಈ ಬಗ್ಗೆ ಟೈಗರ್ ಶ್ರಾಫ್ ಆಗಲಿ, ದಿಶಾ ಪಟಾನಿ ಆಗಲಿ ಯಾರೂ ಸ್ಪಷ್ಟಪಡಿಸಿಲ್ಲ. ಇನ್ನು ತಾವು ಡೇಟಿಂಗ್ ನಡೆಸುತ್ತಿರುವುದಾಗಿಯೂ ಈ ತಾರಾ ಜೋಡಿ ಯಾವತ್ತೂ ಹೇಳಿಕೊಂಡಿರಲಿಲ್ಲ. ಹೀಗಾಗಿ ಬ್ರೇಕಪ್ ವದಂತಿ ಎಷ್ಟರ ಮಟ್ಟಿಗೆ ಸರಿ ಅನ್ನುವುದಕ್ಕೆ ಸ್ಪಷ್ಟತೆಯಿಲ್ಲ.
ಕೆಲವು ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಮನದಲ್ಲಿ ಇವರು ಬಾಲಿವುಡ್ನ ದಿ ಬೆಸ್ಟ್ ಜೋಡಿ ಅನ್ನಿಸಿಕೊಂಡಿದ್ದರು. ಕಳೆದ ಆರೇಳು ವರ್ಷದಿಂದ ಎಲ್ಲೇ ಹೋದರೂ ಅವರು ಜೋಡಿಯಾಗಿಯೇ ಓಡಾಡುತ್ತಿದ್ದರು. ಇವರ ಒಡನಾಟ ಕಂಡ ನೆಟಿಜನ್ಗಳು ಇವರನ್ನು ಸೂಪರ್ ಜೋಡಿಗೆ ಹೋಲಿಸತೊಡಗಿದ್ದರು. ಪಾರ್ಟಿ, ಪ್ರವಾಸ, ಡಿನ್ನರ್, ಮೋಜು - ಮಸ್ತಿ ಅಂತ ಬಂದಾಗಲೂ ಅವರು ಜೋಡಿಯಾಗಿಯೇ ಕಾಣಿಸಿಕೊಳ್ಳುತ್ತಿದ್ದರು. ಹಾಗಾಗಿ ಇದೊಂದು ಡೇಟಿಂಗ್ ಆಗಿ ಕಾಣಿಸತೊಡಗಿತ್ತು.
ದಿಶಾ ಪಟಾನಿ ಸಿನಿಮಾಗಳು..ನಟಿ ದಿಶಾ ಪಟಾನಿ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್, ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ ಮತ್ತು ಕಮಲ್ ಹಾಸನ್ ನಟನೆಯ ಪ್ರಾಜೆಕ್ಟ್ ಕೆ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಅಧಿಕೃತವಾಗಿ 'ಕಲ್ಕಿ 2898 ಎಡಿ' (Kalki 2898 AD) ಎಂದು ಹೆಸರಿಡಲಾಗಿದೆ. ಸಿನಿಮಾವನ್ನು ನಾಗ್ ಅಶ್ವಿನ್ ನಿರ್ದೇಶಿಸುತ್ತಿದ್ದಾರೆ. ಇದಲ್ಲದೇ ದಿಶಾ ಅವರು ಸಿದ್ಧಾರ್ಥ್ ಮಲ್ಹೋತ್ರಾ ಜೊತೆ 'ಯೋಧ' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವರ್ಷ ಡಿಸೆಂಬರ್ 15 ರಂದು ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ಇದನ್ನೂ ಓದಿ:Disha Patani: ಸ್ಟೈಲಿಶ್ ಸೀರೆಯುಟ್ಟು ಮೋಡಿ ಮಾಡಿದ ಬಳುಕುವ ಬಳ್ಳಿ ದಿಶಾ ಪಟಾನಿ