ಹೈದರಾಬಾದ್: ನಟಿ ಇಲಿಯಾನಾ ಡಿಕ್ರೂಜ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಲೈನ್ ಡ್ರಿಪ್ ಫೋಟೋವನ್ನು ಪೋಸ್ಟ್ ಮಾಡಿರುವ ನಟಿ, ಯಾವ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬುದನ್ನು ಮಾತ್ರ ಬಹಿರಂಗಪಡಿಸಿಲ್ಲ. ಇದು ಅವರ ಅಭಿಮಾನಿಗಳಿಗೆ ಕಳವಳವನ್ನುಂಟು ಮಾಡಿದೆ. ತಾವು ಬೇಗನೆ ಚೇತರಿಸಿಕೊಳ್ಳಿ ಎಂದು ಹಾರೈಸಿದ ಎಲ್ಲಾ ಹಿತೈಷಿಗಳಿಗೂ ಧನ್ಯವಾದವನ್ನು ಅರ್ಪಿಸುವ ಮತ್ತೊಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅಲ್ಲದೇ, ಸೂಕ್ತ ಸಮಯದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆದಿದ್ದರಿಂದ ತಾನು ಉತ್ತಮವಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಎರಡು ಕೊಲಾಜ್ ಚಿತ್ರಗಳನ್ನು ಹಂಚಿಕೊಂಡ ನಟಿ :ಭಾನುವಾರ ಪೋಕಿರಿ ತಾರೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಎರಡು ಚಿತ್ರಗಳ ಕೊಲಾಜ್ ಅನ್ನು ಹಂಚಿಕೊಳ್ಳಲು ಸ್ಟೋರೀಸ್ಗೆ ಕರೆದೊಯ್ದರು. ಅದರಲ್ಲಿ ಸಲೈನ್ ಡ್ರಿಪ್ ಹಾಕಿರುವ ಫೋಟೋದೊಂದಿಗೆ 'ಒಂದು ದಿನದಲ್ಲಿ ಏನೆಲ್ಲಾ ಬದಲಾವಣೆಯಾಗುತ್ತದೆ' ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಇನ್ನೊಂದು ಫೋಟೋದಲ್ಲಿ 'ಆಲ್ಸೋ ಸಮ್ ಲವ್ಲಿ ಡಾಕ್ಟರ್ಸ್ ಅಂಡ್ ತ್ರಿ ಬ್ಯಾಗ್ಸ್ ಆಫ್ ಐವಿ ಪ್ಲೂಡ್ಸ್' ಎಂದು ಬರೆದುಕೊಂಡಿದ್ದಾರೆ.
ಇಲಿಯಾನಾ ಅವರ ಇನ್ಸ್ಟಾಗ್ರಾಮ್ನಲ್ಲಿನ ಇನ್ಬಾಕ್ಸ್ ಸಂದೇಶವು ಅವರ ಅಭಿಮಾನಿಗಳು ಯೋಗಕ್ಷೇಮದ ಬಗ್ಗೆ ಚಿಂತಿತರಾಗಿದ್ದಾರೆ ಎಂಬುದರ ಕುರಿತು ಮಾಹಿತಿ ನೀಡಿದೆ. ಈ ಕುರಿತು ತನ್ನ ಅಭಿಮಾನಿಗಳಿಗೆ ಮಾಹಿತಿಯನ್ನು ನೀಡಿರುವ ನಟಿ, ನಾನು ಆರೋಗ್ಯವಾಗಿದ್ದೇನೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.
ನಾನು ಈಗ ಸಂಪೂರ್ಣವಾಗಿ ಚೆನ್ನಾಗಿದ್ದೇನೆ :ಮಂದಹಾಸದ ಸೆಲ್ಫಿ ಹಂಚಿಕೊಂಡಿರುವ ಡಿಕ್ರೂಜ್, 'ನನ್ನ ಆರೋಗ್ಯ ವಿಚಾರಿಸಿ ನನಗೆ ಸಂದೇಶ ಕಳುಹಿಸಿರುವ ಎಲ್ಲರಿಗೂ ನನ್ನ ಕಡೆಯಿಂದ ತುಂಬಾ ಧನ್ಯವಾದಗಳು. ನಾನು ಪ್ರೀತಿಯನ್ನು ನಿಜವಾಗಿಯೂ ಪ್ರಶಂಸಿಸುತ್ತೇನೆ ಮತ್ತು ನಾನು ಈಗ ಸಂಪೂರ್ಣವಾಗಿ ಚೆನ್ನಾಗಿದ್ದೇನೆ ಎಂದು ನಿಮಗೆ ಸ್ಪಷ್ಟನೆ ನೀಡುತ್ತೇನೆ. ಸರಿಯಾದ ಸಮಯಕ್ಕೆ ಸ್ವಲ್ಪ ಉತ್ತಮ ವೈದ್ಯಕೀಯ ಆರೈಕೆ ಸಿಕ್ಕಿತು' ಎಂದು ಬರೆದುಕೊಂಡಿದ್ದಾರೆ.