ಭಾರತೀಯ ಚಿತ್ರರಂಗದ ಬಹುಬೇಡಿಯ ತಾರೆ ಕೃತಿ ಸನೋನ್. 2014 ರಲ್ಲಿ ಇಂಡಸ್ಟ್ರಿಗೆ ಕಾಲಿಟ್ಟ ಈ ಚೆಲುವೆ ಈವರೆಗೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ 'ಮಿಮಿ' ಚಿತ್ರದಲ್ಲಿನ ತಮ್ಮ ಪಾತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು. ಬಾಲಿವುಡ್ನಿಂದ ಜನರಿಗೆ ಪರಿಚಯವಾದ ನಟಿ ಸೌತ್ ಇಂಡಸ್ಟ್ರಿಯಲ್ಲೂ ಛಾಪು ಮೂಡಿಸಿ ಪ್ರೇಕ್ಷಕರಿಂದ ಮೆಚ್ಚುಗೆ ಸ್ವೀಕರಿಸಿದ್ದಾರೆ. ಇವರ ಒಂಬತ್ತು ವರ್ಷಗಳ ಈ ಸಿನಿ ವೃತ್ತಿಯಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದಾರೆ. ಅದೆಲ್ಲವನ್ನೂ ಮೆಟ್ಟಿ ನಿಂತು ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ.
ಚಿತ್ರರಂಗ ಅಂತ ಬಂದಾಗ ಅಲ್ಲಿ ಸ್ವಜನ ಪಕ್ಷಪಾತ (Nepotism) ಎಂಬ ವಿಷಯವು ಹೆಚ್ಚಾಗಿ ವಿವಾದವನ್ನು ಸೃಷ್ಟಿಸುತ್ತದೆ. ಕೃತಿ ಸನೋನ್ಗೆ ತಮ್ಮ 9 ವರ್ಷಗಳ ಸಿನಿ ಜರ್ನಿಯಲ್ಲಿ ಈ ವಿಚಾರದ ಬಗ್ಗೆ ಅನೇಕ ಬಾರಿ ಪ್ರಶ್ನೆಗಳು ಎದುರಾಗಿದೆ. ಅವರು ತಮ್ಮ ಪ್ರತಿಭೆಯಿಂದಲೇ ಅವಕಾಶಗಳನ್ನು ಪಡೆದುಕೊಂಡು, ಚಿತ್ರರಂಗಕ್ಕೆ ಎಂಟ್ರಿಯಾದವರು. ಹೀಗಾಗಿ ಬಾಲಿವುಡ್ ಇಂಡಸ್ಟ್ರಿಯಲ್ಲಿ ನೆಪೋಟಿಸಮ್ ಎಂಬುದು ಎಷ್ಟು ಪ್ರಾಬಲ್ಯ ಸಾಧಿಸುತ್ತಿದೆ ಎಂಬ ಬಗ್ಗೆ ಅವರಿಗೆ ಮತ್ತೊಮ್ಮೆ ಪ್ರಶ್ನೆ ಎದುರಾಯಿತು.
ಸಂದರ್ಶನವೊಂದರಲ್ಲಿ ಹಿಂದಿ ಚಿತ್ರೋದ್ಯಮದಲ್ಲಿ ಸ್ವಜನ ಪಕ್ಷಪಾತದ ಬಗ್ಗೆ ಉತ್ತರಿಸಿದ ಅವರು, "ಬಾಲಿವುಡ್ನಲ್ಲಿ ನಿರ್ದೇಶಕರು ಯಾರಿಗಾದರೂ ಬೆಂಬಲಿಸಿದರೆ, ಅದು ಪ್ರತಿಭಾವಂತರಿಗೆ ಮಾತ್ರ. ಮತ್ಯಾರಿಗೂ ಅಲ್ಲ" ಎಂದಿದ್ದಾರೆ. "ಜಗತ್ತು ದೊಡ್ಡ ಸ್ಟಾರ್ ಅಥವಾ ಹೆಸರಿಗಿಂತ ಇತ್ತೀಚಿನ ದಿನಗಳಲ್ಲಿ ಪ್ರತಿಭೆ ಮತ್ತು ಉತ್ತಮ ಸ್ಕ್ರಿಪ್ಸ್ಟ್ ಹಿಂದೆ ವಾಲುತ್ತಿದೆ" ಎಂದು ಅಭಿಪ್ರಾಯ ಪಟ್ಟಿದ್ದಾರೆ. ಜನರು ಸಿನಿಮಾದಲ್ಲಿ ಯಾವ ಸ್ಟಾರ್ ನಟಿಸುತ್ತಿದ್ದಾನೆ ಎಂದು ನೋಡುವ ಬದಲಾಗಿ ಕಥೆ ಮೆಚ್ಚಿಕೊಳ್ಳುತ್ತಾರೆ. ಹೀಗಾಗಿ ನಿರ್ದೇಶಕರೂ ಕೂಡ ಪ್ರತಿಭಾವಂತರಿಗೆ ಅವಕಾಶ ನೀಡುತ್ತಿದ್ದಾರೆ. ಇಲ್ಲಿ ಸ್ಟಾರ್ ಮತ್ತು ಹೆಸರು ಎರಡೂ ಪ್ರಾಮುಖ್ಯತೆ ವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ಮಿನುಗುವ ಉಡುಗೆಯಲ್ಲಿ ಚೆಂದುಳ್ಳಿ ಚೆಲುವೆಯರು: ಕಣ್ಮನ ಸೆಳೆದ ಸಾರಾ, ಕಿಯಾರಾ, ಕೃತಿ ಕಾಂತಿ