ಕರ್ನಾಟಕ

karnataka

ETV Bharat / entertainment

ಚಂದ್ರಬಾಬು ಅವರ ದೃಷ್ಟಿಕೋನ ಅಳವಡಿಸಿದರೆ, ಹೈದರಾಬಾದ್​ ದೇಶದಲ್ಲಿಯೇ ಉನ್ನತ ಸ್ಥಾನಕ್ಕೆರಲಿದೆ; ರಜಿನಿಕಾಂತ್​​ - ನ್ಯೂಯಾರ್ಕ್​ ನಗರ ಹೋಲುವಂತೆ ಹೈದ್ರಾಬಾದ್​

ಎನ್​ಟಿಆರ್​ ಅವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿರುವ ನಟ ರಜನೀಕಾಂತ್​ ಅವರು, ಚಂದ್ರಬಾಬು ಅವರ ದೃಷ್ಟಿಕೋನದ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

if-chandrababus-vision-is-implemented-hyderabad-will-be-at-the-top-of-the-country-rajinikanth
if-chandrababus-vision-is-implemented-hyderabad-will-be-at-the-top-of-the-country-rajinikanth

By

Published : Apr 29, 2023, 2:28 PM IST

ಅವರಾವತಿ: ಹೈದರಾಬಾದ್​ ನಗರ ನಿರ್ಮಾಣದಲ್ಲಿ ಚಂದ್ರಬಾಬು ನಾಯ್ಡು ಅವರ ದೃಷ್ಟಿಕೋನದ ಕುರಿತು ಸೂಪರ್​​ಸ್ಟಾರ್​ ನಟ ರಜನೀಕಾಂತ್​​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎನ್​ಟಿಆರ್​ ಅವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ನಟ, ನ್ಯೂಯಾರ್ಕ್​ ನಗರ ಹೋಲುವಂತೆ ಹೈದರಾಬಾದ್​ ನಿರ್ಮಾಣ ಮಾಡಲು ಅವರು ಸಾಕಷ್ಟು ಶ್ರಮವಹಿಸಿದ್ದಾರೆ. ಇಂದು ಲಕ್ಷಾಂತರ ತೆಲುಗು ಜನರು ಐಟಿ ವಲಯದಲ್ಲಿ ಕೆಲಸ ಮಾಡಿ, ಐಷಾರಾಮಿಯಾಗಿ ಜೀವನ ನಿರ್ವಹಣೆ ಮಾಡಲು ಕಾರಣ ಚಂದ್ರಬಾಬು ಅವರು. ಚಂದ್ರಬಾಬು ಅವರು ವಿಷನ್​ 2047 ಜಾರಿಗೆ ಬಂದರೆ ರಾಜ್ಯ ದೇಶದಲ್ಲಿಯೇ ಅಗ್ರಸ್ಥಾನದಲ್ಲಿರಲಿದೆ. ಅವರ ಯೋಜನೆಗಳು ಜಾರಿಗೆ ತರಲು ದೇವರು ಕೂಡ ಬಯಸಿದ್ದಾನೆ ಎಂದಿದ್ದಾರೆ.

ನಾನು ಭಾರತದಲ್ಲಿ ಇದ್ದೇನಾ, ನ್ಯೂಯಾರ್ಕ್​​ನಲ್ಲಾ?:ಇತ್ತೀಚಿಗೆ ನಾನು ಜೈಲರ್​ ಶೂಟಿಂಗ್​ ಹಿನ್ನೆಲೆ ಜ್ಯೂಬ್ಲಿ ಹಿಲ್ಸ್​ ಮತ್ತು ಬಂಜರಾ ಹಿಲ್ಸ್​​ಗೆ ಹೋಗಿದ್ದೆ. 20-22 ವರ್ಷಗಳ ಬಳಿಕ ನಾನು ಅಲ್ಲಿಗೆ ಹೋದಾಗ ನಾನು ಭಾರತದಲ್ಲಿದ್ದೇನಾ ಅಥವಾ ನ್ಯೂಯಾರ್ಕ್​ನಲ್ಲಿದ್ದೇನಾ ಎಂಬುದು ತಿಳಿಯದಂತೆ ಆಯಿತು. ಭಾರತದಲ್ಲೇ ಹೈದರಾಬಾದ್​ ಟಾಪ್​ನಲ್ಲಿದೆ. ಆರ್ಥಿಕವಾಗಿ ಶಕ್ತಿಯುತವಾಗಿ ರಾಜ್ಯವಿದೆ ಎಂದರು.

ದಿನದ 24 ಗಂಟೆ ಜನರಿಗೆ ಒಳ್ಳೆಯದನ್ನೇ ಮಾಡುವ ಆಲೋಚನೆ ಅವರಿಗೆ ಇದೆ. ಅವರಿಗೆ ಕೇವಲ ರಾಷ್ಟ್ರ ಅಲ್ಲ, ಅಂತಾರಾಷ್ಟ್ರೀಯ ರಾಜಕೀಯದ ಅರಿವಿದೆ. ಅವರು ದೂರದೃಷ್ಟಿಕರ್ತ. ಇದನ್ನು ನಾನು ಹೇಳುತ್ತಿಲ್ಲ. ದೇಶದ ದೊಡ್ಡ ದೊಡ್ಡ ರಾಜಕೀಯ ನಾಯಕರು ಅವರ ಪ್ರತಿಭೆ ಮತ್ತು ಶ್ರೇಷ್ಟತೆ ಬಗ್ಗೆ ತಿಳಿಸಿದ್ದಾರೆ. ಇಲ್ಲಿಯವರಿಗಿಂತ ಹೊರಗಿನವರಿಗೆ ಚಂದ್ರಬಾಬು ಅವರ ದೊಡ್ಡ ಗುಣಗಳು ತಿಳಿದಿದೆ ಎಂದರು.

1996-97ರಲ್ಲಿ ಅವರು 2020 ವಿಷನ್​ ಕುರಿತು ತಿಳಿಸಿದರು. ಅವರು ಐಟಿ ಉದ್ಯಮದ ಭವಿಷ್ಯವನ್ನು ಅಂದಾಜಿಸಿದ್ದರು. ಅಂದು ಅವರು ಹೇಳಿದ ಡಿಜಿಟಲ್​ ಜಗತ್ತಿನ ಬಗ್ಗೆ ಯಾರಿಗೂ ಗಮನವೂ ಇರಲಿಲ್ಲ. ಬಳಿಕ ಹೈದರಾಬಾದ್​ ಹೈ-ಟೆಕ್​ ಸಿಟಿಯಾಗಿ ಮಾರ್ಪಟ್ಟಿತು. ಬಿಲ್​ಗೇಟ್ಸ್​ನಂತಹ ಐಟಿ ದಿಗ್ಗಜರು ಇಲ್ಲಿಗೆ ಆಗಮಿಸಿ, ಕಂಪನಿಯನ್ನು ಶುರು ಮಾಡಿದರು ಎಂದು ರಜಿನಿಕಾಂತ್ ಬಣ್ಣಿಸಿದ್ದಾರೆ.

ಸದಾ ಆಂಧ್ರಪ್ರದೇಶದ ಅಭಿವೃದ್ಧಿ ಚಿಂತೆ:ಅವರು ಕಚೇರಿಯಲ್ಲಿ ಇರಲಿ ಅಥವಾ ಇಲ್ಲದಿರಲಿ, ಎಂದಿಗೂ ನಾನು ಅವರ ಭೇಟಿಗೆ ಸಮಯ ಕೇಳಿಲ್ಲ. ಅವರು ವಿದೇಶದಲ್ಲಿದ್ದರೂ, ನನಗೆ ಕರೆ ಮಾಡಿ ನನ್ನ ಹುಟ್ಟು ಹಬ್ಬಕ್ಕೆ ಶುಭಾಶಯ ತಿಳಿಸುತ್ತಾರೆ. ನಾಲ್ಕು ತಿಂಗಳ ಹಿಂದೆ ನನಗೆ ಅವರನ್ನು ಮಾತನಾಡಿಸುವ ಅವಕಾಶ ಸಿಕ್ಕಿತು. ವಿಪಕ್ಷದ ನಾಯಕರಾಗಿರುವ ಅವರಿಗೆ ಆಂಧ್ರ ಪ್ರದೇಶ ಮತ್ತು ರಾಜ್ಯದ ಭವಿಷ್ಯದ ಅಭಿವೃದ್ಧಿ ಕುರಿತು ಚಿಂತೆ ಮಾಡುತ್ತಾರೆ. ರಾಜ್ಯದ ಕುರಿತು ಅವರಿಗೆ ದೀರ್ಘಾವಧಿಯ ದೃಷ್ಟಿಕೋನಗಳಿದೆ. ಅವರ 2047 ವಿಷನ್​ ಯೋಜನೆಗಳು ಅಳವಡಿಕೆ ಮಾಡಿದರೆ, ಆಂಧ್ರ ಪ್ರದೇಶ ದೇಶದಲ್ಲೇ ಮೇಲೆ ಏರಲಿದೆ. ಅವರ ಎಲ್ಲಾ ಕನಸುಗಳು ನನಸಾಗಲಿ, ಅವರ ದೃಷ್ಟಿಕೋನ ಸಾಕಾರ ಮಾಡಲು ದೇವರು ಅವರಿಗೆ ಶಕ್ತಿ ನೀಡಲಿ ಎಂದು ರಜಿನಿಕಾಂತ್​ ಹಾರೈಸಿದರು.

ಚಂದ್ರಬಾಬು ಇರುವಾಗ ನಾನೇಕೆ ರಾಜಕೀಯ ಯಾಕೆ ಮಾತನಾಡಲಿ:ಬುದ್ಧಿವಂತಿಕೆ ಮತ್ತು ಬುದ್ಧಿಶಕ್ತಿ ನಿಮಗೆ ಏನು ಮಾತನಾಡಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಹೇಗೆ ಮಾತನಾಡಬೇಕೆಂದು ಸಾಮರ್ಥ್ಯವು ಹೇಳುತ್ತದೆ. ಎಷ್ಟು ಹೊತ್ತು ಮಾತನಾಡಬೇಕು ಎಂದು ಪ್ರೇಕ್ಷಕರು ಹೇಳುತ್ತಾರೆ. ಏನನ್ನು ಹೇಳಬೇಕು, ಏನು ಹೇಳಬಾರದು ಎಂಬುದನ್ನು ಅನುಭವವೇ ಹೇಳುತ್ತದೆ. ಹೀಗಾಗಿ ಇಷ್ಟು ದೊಡ್ಡ ಸಮಾವೇಶದಲ್ಲಿ ರಾಜಕೀಯದ ಬಗ್ಗೆ ಮಾತನಾಡುವುದು ಸರಿಯಲ್ಲ. ನಿಮ್ಮ ಉತ್ತಮ ಸ್ನೇಹಿತ ಇಲ್ಲಿರುವಾಗ ರಾಜಕೀಯದ ಬಗ್ಗೆ ಮಾತನಾಡುವುದು ಸರಿಯಲ್ಲ. ಚಂದ್ರಬಾಬು ನನಗೆ 30 ವರ್ಷದ ಗೆಳೆಯ ಎಂದು ರಜಿನಿಕಾಂತ್ ಹೇಳಿದರು.

ಇದನ್ನೂ ಓದಿ:ಜೂ. 1ರಂದು ಕಿಚ್ಚ ಸುದೀಪ್​​ ಸಿನಿಮಾ ಲಾಂಚ್: ಪ್ರಚಾರದ ನಡುವೆಯೇ ಅಭಿಮಾನಿಗಳಿಗೆ ಗುಡ್​ನ್ಯೂಸ್

ABOUT THE AUTHOR

...view details