ನಟಿ ಪ್ರಿಯಾಂಕಾ ಚೋಪ್ರಾ ತಂದೆಯಂದಿರ ದಿನದ ನಿಮಿತ್ತ ತಮ್ಮ ತಂದೆ, ಗಂಡ ನಿಕ್ ಜೋನಸ್ ಮತ್ತು ನಿಕ್ ತಂದೆ ಕೆವಿನ್ ಜೋನಸ್ ಅವರನ್ನು ಸ್ಮರಿಸಿದ್ದಾರೆ. ತಮ್ಮ ಜೀವನದಲ್ಲಿ ಬಹುದೊಡ್ಡ ಪಾತ್ರ ವಹಿಸಿದ ಹಿನ್ನೆಲೆ ಅವರ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಶುಭ ಕೋರಿದ್ದಾರೆ.
ತಂದೆಯಂದಿರ ದಿನದ ಹಿನ್ನೆಲೆ ತಮ್ಮ ಬದುಕಿನ ಪ್ರಮುಖ ಮೂರು ವ್ಯಕ್ತಿಗಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ನಿಕ್ ಮುದ್ದು ಮಗಳು ಮಾಲ್ತಿ ಮೇರಿ ನಿಕ್ ಜೋನಸ್ ಜೊತೆಗೆ ಇರುವ ಚಿತ್ರ ಹಂಚಿಕೊಂಡಿದ್ದಾರೆ. ಇಬ್ಬರು ಬಿಳಿ ಬಣ್ಣದ ಬಟ್ಟೆ ತೊಟ್ಟು ಕಂಗೊಳಿಸಿದ್ದು, ಮಗಳಿಗೆ ನಿಕ್ ಪುಸ್ತಕ ತೋರಿಸುವ ಚಿತ್ರ ಇದಾಗಿದೆ.
ಎರಡನೇ ಫೋಟೋದಲ್ಲಿ ನಿಕ್ ತಂದೆ ಕೆವಿನ್ ಜೋನಸ್, ಮಾಲ್ತಿ ಮೇರಿಯನ್ನು ಹಿಡಿದಿರುವ ಚಿತ್ರ ಇದಾಗಿದೆ. ಅಮೆರಿಕದ ಬೀದಿಯಲ್ಲಿ ಮೊಮ್ಮಗಳ ಜೊತೆ ಆಡುತ್ತಿರುವ ಈ ಚಿತ್ರ ಅನೇಕರ ಮನ ಗೆದ್ದಿದೆ. ಕಡೆಯ ಚಿತ್ರದಲ್ಲಿ ಪ್ರಿಯಾಂಕಾ ತಂದೆ- ತಾಯಂದಿರ ಚಿತ್ರವಾಗಿದೆ. ತಂದೆ ಅಶೋಕ್ ಚೋಪ್ರಾ ಜೊತೆಗೆ ತಾಯಿ ಮಧು ಚೋಪ್ರಾ ಇದ್ದಾರೆ. ಈ ಮೂರು ಫೋಟೋಗಳನ್ನು ಹಂಚಿಕೊಂಡಿರುವ ಅವರು ಈ ಕುರಿತು ಸುದೀರ್ಘ ಬರಹವನ್ನು ಕೂಡ ಕೂಡ ಬರೆದಿದ್ದಾರೆ.
ಈಗಾಗಲೇ ಮಗಳು ಮಾಲ್ತಿ ಮೇರಿ ಬಗ್ಗೆ ಪ್ರೀತಿ, ಸಂಬಂಧ ಕುರಿತು ಹಲವು ಸಂದರ್ಶನದಲ್ಲಿ ಮಾತನಾಡಿರುವ ನಟಿ, ಮಗಳು ಮತ್ತು ನಾನು ನಿಕ್ ಅನ್ನು ತಮ್ಮ ಜೀವನದಲ್ಲಿ ಪಡೆಯಲು ಅದೃಷ್ಟಶಾಲಿಗಳಾಗಿದ್ದೇವೆ ಎಂದಿದ್ದಾರೆ. "ಆತ ಚಾಂಪಿಯನ್ ಎಂದಿರುವ ಆಕೆ, ನೀನು ಗೆದ್ದಾಗ ಕೋಣೆಯಲ್ಲಿ ಪ್ರೋತ್ಸಾಹಿಸುವ, ಹುರುದುಂಬಿಸುವ ವ್ಯಕ್ತಿಯಾತ. ಆತನ ಜ್ಞಾನ ನೀನು ನಿಲ್ಲುವುದಕ್ಕೆ ಅಡಿಪಾಯವಾಗುತ್ತದೆ. ನೀನು ಅತ್ತಾಗ ಆತನ ಹೃದಯ ಮುರಿಯುತ್ತದೆ. ಆತ ನೋವಿನಲ್ಲಿದ್ದಾನೆ ಎಂಬುದನ್ನು ಆತನ ನಿನಗೆ ತಿಳಿಸುವುದಿಲ್ಲ. ನಿನ್ನ ಖುಷಿಯಲ್ಲಿ ಆತನ ಖುಷಿ ಇದೆ. ಆತನನ್ನು ದಾದಾ, ಪಾಪಾ ಅಥವಾ ನಿನಗೆ ಇಷ್ಟ ಬಂದಂತೆ ಕರೆಯಬಹುದು. ನಿಕ್ ನಿನನ್ನು ಗೌರವಿಸುತ್ತೇವೆ. ನಮ್ಮ ಜೀವನದ ಭಾಗವಾಗಿದ್ದಕ್ಕೆ ಧನ್ಯವಾದಗಳು. ಮಾಲ್ತಿ ಮೇರಿ ಮತ್ತು ನಾನು ಇಬ್ಬರು ಅದೃಷ್ಟಶಾಲಿಗಳು ಪಾಪಾಜೋನಸ್. ಇಂದು ಮಾತ್ರವಲ್ಲ, ಪ್ರತಿ ದಿನ ನೀವು ಅಸಾಧಾರಣ. ತಂದೆಯಂದಿರ ದಿನದ ಶುಭಾಶಯಗಳು. ಸಾಧ್ಯವಾದರೆ, ಒಂದು ಅಪ್ಪುಗೆ, ಐ ಮಿಸ್ ಯು ಪಾಪಾ" ಎಂದು ಭಾವುಕ ಸಾಲುಗಳನ್ನು ಬರೆದಿದ್ದಾರೆ.
ಪ್ರಿಯಾಂಕಾ ಈ ಪೋಸ್ಟ್ಗೆ ನಿಕ್ ಕೂಡ ಕೆಂಪು ಹೃದಯದ ಎಮೋಜಿಯನ್ನು ಬಳಕೆ ಮಾಡಿ ಪ್ರತಿಕ್ರಿಯಿಸಿದ್ದಾರೆ.
ಸದ್ಯ ಪ್ರಿಯಾಂಕಾ ಬ್ರಿಟನ್ನಲ್ಲಿ ಹೆಡ್ಸ್ ಆಫ್ ಸ್ಟೇಟ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಇದ್ರಿಸ್ ಎಲ್ಬಾ ಮತ್ತು ಜಾನ್ ಸೆನಾ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಇದರ ಜೊತೆಗೆ ಜೀ ಲೇ ಜಾರಾ ಚಿತ್ರದಲ್ಲೂ ನಟಿ ಪ್ರಿಯಾಂಕಾ ನಟಿಸುತ್ತಿದ್ದು, ಈ ಚಿತ್ರದಲ್ಲಿ ನಟಿ ಕತ್ರಿನಾ ಮತ್ತು ಆಲಿಯಾ ಭಟ್ ಕೂಡ ನಟಿಸುತ್ತಿದ್ದಾರೆ.
ಇದನ್ನೂ ಓದಿ:Fathers Day: ಇಂದು ಅಪ್ಪಂದಿರ ದಿನ: ನಿಮ್ಮ ಮೊದಲ ಹೀರೋಗೆ ಕನ್ನಡದ ಯಾವ ಹಾಡನ್ನು ಅರ್ಪಿಸುತ್ತೀರಿ?