ಕನ್ನಡ ಚಿತ್ರರಂಗದ ನಗುಮುಖದ ರಾಜಕುಮಾರ ಅಭಿಮಾನಿಗಳ ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸ್ಟಾರ್ ಡಮ್ ಪಕ್ಕಕ್ಕೆ ಇಟ್ಟು ನಟಿಸಿರುವ ಚಿತ್ರ ಗಂಧದ ಗುಡಿ. ಡಾ ರಾಜ್ ಕುಮಾರ್, ಡಾ ಶಿವರಾಜ್ ಕುಮಾರ್ ಬಳಿಕ ಡಾ ಪುನೀತ್ ರಾಜ್‍ಕುಮಾರ್ ಅಭಿನಯಿಸಿರೋ ಗಂಧದ ಗುಡಿ ಚಿತ್ರ ಬಿಡುಗಡೆಗೆ ಒಂದು ದಿನ ಬಾಕಿ ಇದೆ. ಈ ಸಿನಿಮಾ ಬಗ್ಗೆ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಮೊದಲ ಬಾರಿಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಪುನೀತ್ ರಾಜ್‍ಕುಮಾರ್ ಅಗಲಿಕೆಯಿಂದ ಅಶ್ವಿನಿ ಪುನೀತ್ ರಾಜ್‍ಕುಮಾರ್ ಎಲ್ಲಿಯೂ ಕ್ಯಾಮರಾ ಮುಂದೆ ಮಾತನಾಡಿರಲಿಲ್ಲ. ಆದರೆ, ಅಪ್ಪು ಡ್ರೀಮ್ ಪ್ರಾಜೆಕ್ಟ್ ಗಂಧದ ಗುಡಿ ಬಗ್ಗೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಮಾತನಾಡಿದ್ದಾರೆ. ನಿರ್ದೇಶಕ ಸಂತೋಷ್ ಆನಂದ ರಾಮ್ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರನ್ನು ಸಂದರ್ಶನ ಮಾಡಿದ್ದಾರೆ. ಸಂತೋಷ್ ಕೇಳಿದ ಪ್ರಶ್ನೆಗಳಿಗೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಉತ್ತರಿಸಿದ್ದಾರೆ. ಪುನೀತ ಪರ್ವ ಎಂಬ ಕಾರ್ಯಕ್ರಮ ಮಾಡಿದ್ದು ಅಭಿಮಾನಿಗಳಿಗಾಗಿ, ಈ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯ ಸ್ಟಾರ್ಗಳು ಬಂದಿದ್ದು, ಸ್ವತಃ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರಿಗೆ ಬಹಳ ತೃಪ್ತಿ ತಂದಿದೆ ಎಂದರು.
ಗಂಧದ ಗುಡಿ ಚಿತ್ರದ ಸಮಯದಲ್ಲಿ ಕಾಳಿನದಿಯಲ್ಲಿ ಚಿತ್ರೀಕರಣ ಮಾಡುವಾಗ, ಅಪ್ಪು ಈ ಜಾಗಕ್ಕೆ ನೀನು ಬರಬೇಕು ಅಂತಾ ಹೇಳಿ ಬಲವಂತ ಮಾಡಿ ಕರೆಯಿಸಿಕೊಂಡರು. ಆಗ ನಾನು ಅವರು ಮತ್ತು ಅಮೋಘ ವರ್ಷ ಸೇರಿದಂತೆ ನಾವು ಬೆಟ್ಟ ಹತ್ತುವ ಟ್ರಕ್ಕಿಂಗ್ ಮಾಡಿದ್ದೆವು ಎಂದು ನೆನಪುಗಳನ್ನು ಹಂಚಿಕೊಂಡರು.