ಬಾಲಿವುಡ್ ಸ್ಟಾರ್ ನಟ ಅಮೀರ್ ಖಾನ್ ಬಹುನಿರೀಕ್ಷಿತ ಸಿನೆಮಾ ಲಾಲ್ ಸಿಂಗ್ ಚಡ್ಡಾ. ಈ ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಅಮೀರ್ ಖಾನ್ ಸಿನೆಮಾಗಾಗಿ ತುಂಬಾ ಕಸರತ್ತು ಮಾಡಿದ್ದಾರೆ. ಈ ಸಿನೆಮಾದಲ್ಲಿ ಕರೀನಾ ಕಪೂರ್ ,ನಾಗಚೈತನ್ಯ ಮುಂತಾದ ಸ್ಟಾರ್ ನಟರು ನಟಿಸಿದ್ದು, ಇದೇ ಬರುವ ಆಗಸ್ಟ್ 11 ರಂದು ತೆರೆಮೇಲೆ ಬರಲು ಸಿದ್ಧವಾಗಿದೆ. ಲಾಲ್ ಸಿಂಗ್ ಚಡ್ಡಾದ ತೆಲುಗು ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇಂದು ಹೈದರಾಬಾದ್ ನಲ್ಲಿ ನಡೆಯಿತು. ಈ ಟ್ರೈಲರ್ ಅನ್ನು ತೆಲುಗು ನಟ ಚಿರಂಜೀವಿ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ಅಮೀರ್ ಖಾನ್ ನನ್ನ ಹಳೆಯ ಸ್ನೇಹಿತ. ದೇಶವೇ ಹೆಮ್ಮೆ ಪಡುವ ಮಹಾನ್ ನಟ. ಕಳೆದ 2019 ರಿಂದ ಅಮೀರ್ ಈ ಚಿತ್ರದ ಬಗ್ಗೆ ಹೇಳುತ್ತಿದ್ದಾರೆ. ಮೊನ್ನೆ 'ಲಾಲ್ಸಿಂಗ್ ಚಡ್ಡಾ' ನೋಡಿದ ನಂತರ ನಮಗೆ ಮಾತುಗಳೇ ಹೊರಡಲಿಲ್ಲ. ನಾನು ಅಮೀರ್ ಖಾನ್ ಅವರನ್ನು ಪ್ರೀತಿಸುತ್ತೇನೆ. ಅವರು ಚಿತ್ರಕ್ಕೆ ಸಂಬಂಧಿಸಿದ ಪ್ರತಿಯೊಂದು ವಿಷಯದಲ್ಲೂ ಬಹುವಾಗಿ ತೊಡಗಿಸಿಕೊಳ್ಳುತ್ತಾರೆ ಮತ್ತು ಕಾಳಜಿ ವಹಿಸುತ್ತಾರೆ. ಯಾವುದೇ ಭಾರತೀಯ ನಟ ಇದನ್ನು ಮಾಡಲು ಸಾಧ್ಯವಿಲ್ಲ. ಈ ಚಿತ್ರವನ್ನು ಪ್ರಸ್ತುತಪಡಿಸಲು ನಾನು ಹೆಮ್ಮೆಪಡುತ್ತೇನೆ ಎಂದು ಹೇಳಿದರು.
ಇದುವರೆಗೂ ದಕ್ಷಿಣದ ಸಿನೆಮಾ ಇಂಡಸ್ಟ್ರಿಗಳಿಗೆ ಅಷ್ಟೊಂದು ಮನ್ನಣೆ ಇರಲಿಲ್ಲ. ಈ ಬಗ್ಗೆ ಅಮೀರ್ ಖಾನ್ ಬಳಿ ಚರ್ಚಿಸಿದ್ದೆ. ಆದರೆ ಕೆಲವೇ ಸಮಯದಲ್ಲಿ ರಾಜಮೌಳಿ ಮತ್ತು ಶಂಕರ್ ಅವರ ಸಿನಿಮಾಗಳು ಭಾಷೆಗಳ ನಡುವಿನ ಗಡಿಯನ್ನು ಅಳಿಸಿ ಹಾಕಿದವು. ಇವೆಲ್ಲವೂ ಈಗ ಭಾಷೆಯ ಅಡೆತಡೆಗಳನ್ನು ಮೀರಿದ ಭಾರತೀಯ ಸಿನಿಮಾಗಳು.ಅದಕ್ಕೆ ನನಗೆ ತುಂಬಾ ಹೆಮ್ಮೆಯಾಗುತ್ತಿದೆ ಎಂದು ಚಿರಂಜೀವಿ ಹೇಳಿದರು.