ಭಾರತೀಯ ಚಿತ್ರರಂಗದ ಲೆಂಜಂಡರಿ ಆ್ಯಕ್ಟರ್ ಮತ್ತು ಬಹುಭಾಷಾ ನಟ ಕಮಲ್ ಹಾಸನ್, ವಿಶ್ವರೂಪಂ 2 ಸಿನಿಮಾ ನಂತರ 'ವಿಕ್ರಮ್'ನಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರ ನಾಳೆ ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರಕ್ಕಾಗಿ ಕಮಲ್ ಹಾಸನ್ ಬೆಂಗಳೂರಿಗೆ ಬಂದಿದ್ದಾರೆ. ಸದ್ಯ ವಿಕ್ರಮ್ ಸಿನಿಮಾದ ಭರ್ಜರಿ ಪ್ರಚಾರ ಮಾಡುತ್ತಿರುವ ಕಮಲ್ ಹಾಸನ್, ಬೆಂಗಳೂರು ಹಾಗೂ ಕನ್ನಡ ಚಿತ್ರರಂಗದ ಬಗ್ಗೆ ಕೆಲ ಇಂಟ್ರಸ್ಟ್ರಿಂಗ್ ವಿಚಾರಗಳನ್ನ ಹಂಚಿಕೊಂಡಿದ್ದಾರೆ.
ನನಗೆ ಬೆಂಗಳೂರು ಹಾಗೂ ಕನ್ನಡ ಚಿತ್ರರಂಗದ ಜೊತೆ ಒಳ್ಳೆ ನಂಟು ಇದೆ. ಜೊತೆಗೆ ಕರ್ನಾಟಕದಲ್ಲಿ ಸಾಕಷ್ಟು ಗುರುಗಳು ಇದ್ದಾರೆ. ನಾನು ಪುಟ್ಟಣ್ಣ ಕಣಗಾಲ್ ಸಿನಿಮಾ ರಿಲೀಸ್ ಆದಾಗ, ಫಸ್ಟ್ ಡೇ ಫಸ್ಟ್ ಶೋ ನೋಡೋಕೆ ಚೆನ್ನೈನಿಂದ ಬೆಂಗಳೂರಿಗೆ ಬಾಲಚಂದರ್ ಸಾರ್ ಜೊತೆ ಬರುತ್ತಿದ್ದೆ. ಹಾಗೆ ನಾನು ಗಿರೀಶ್ ಕಾರ್ನಾಡ್ ಅವರ ಫ್ಯಾನ್. ಬಿ.ವಿ. ಕಾರಂತ್ ಅವರನ್ನು ಮಾತನಾಡಿಸಲು ಬೆಂಗಳೂರಿಗೆ ಬರುತ್ತಿದ್ದೆ ಎಂದು ಕಮಲ್ ಹಾಸನ್ ಹೇಳಿದ್ದಾರೆ.
ಇದರ ಜೊತೆ ವರನಟ ಡಾ.ರಾಜ್ ಕುಮಾರ್ ಕುಟುಂಬ ಜೊತೆ ಕಮಲ್ ಹಾಸನ್ಗೆ ಇರುವ ಒಡನಾಟವನ್ನ, ಈ ಸುಂದರ ವೇದಿಕೆಯಲ್ಲಿ ಹಂಚಿಕೊಂಡರು. ನಾನು ರಾಜ್ ಕುಮಾರ್ ಅವ್ರಿಂದ ಸರಳತೆ ಹಾಗೂ ಬೇರಯವರಿಗೆ ಅವರು ಕೊಡುತ್ತಿದ್ದ ಗೌರವವನ್ನ ನೋಡಿ ಕಲಿತ್ತೀದ್ದೇನೆ. ರಾಜ್ ಕುಮಾರ್ ಅವರದ್ದು, ಎಷ್ಟು ದೊಡ್ಡ ಗುಣ ಎಂದರೆ, ನಾನು 21ನೇ ವಯಸ್ಸಿನಲ್ಲಿ ಇದ್ದಾಗ, ರಾಜ್‌ಕುಮಾರ್ ಅವರು ನನ್ನ ನಟನೆ ಬಗ್ಗೆ ಮೆಚ್ಚುಗೆಯ ಮಾತನ್ನು ಆಡಿದ್ದರು. ಹಾಗೆಯೇ ಪುಷ್ಪಕ ವಿಮಾನ ಸಿನಿಮಾದ ಶೂಟಿಂಗ್ ವೇಳೆ ಅವರು ಬಂದು ನನ್ನನ್ನ ಬೆನ್ನು ತಟ್ಟಿದರು.