ನವದೆಹಲಿ:ತಮ್ಮ ಮೊಮ್ಮಗಳು ನವ್ಯಾ ನಂದಾ ಮದುವೆಯಾಗದೆ ಮಗುವನ್ನು ಹೊಂದಿದ್ದರೆ ತನಗೆ ಯಾವುದೇ ತೊಂದರೆ ಇಲ್ಲವೆಂದು ಬಾಲಿವುಡ್ನ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಪತ್ನಿ ರಾಜಕಾರಣಿ ಮತ್ತು ನಟಿಯೂ ಆಗಿರುವ ಜಯಾ ಬಚ್ಚನ್ ಹೇಳಿಕೊಂಡಿದ್ದಾರೆ.
'ವಾಟ್ ದಿ ಹೆಲ್ ನವ್ಯಾ' ಪಾಡ್‌ಕ್ಯಾಸ್ಟ್‌ನಲ್ಲಿ ತನ್ನ ಮೊಮ್ಮಗಳ ಜೊತೆ ಮಾತನಾಡಿದ ಅವರು, ನಮ್ಮ ಕಾಲದಲ್ಲಿ ನಮಗೆ ಯಾವುದೇ ಪ್ರಯೋಗಗಳನ್ನು ಮಾಡಲು ಸಾಧ್ಯವಾಗಲಿಲ್ಲ. ದೈಹಿಕ ಆಕರ್ಷಣೆ ಎಂಬ ಅಂಶವು ಈಗ ಬಹಳ ಮುಖ್ಯ. ಆದರೆ, ಒಂದು ಸಂಬಂಧವು ಕೇವಲ ಪ್ರೀತಿ ಮತ್ತು ಹೊಂದಾಣಿಕೆಯ ಮೇಲೆ ಬದುಕುಳಿಯುತ್ತದೆ ಅನ್ನೋದನ್ನು ನಾನು ನಂಬುವುದಿಲ್ಲ. ನವ್ಯಾ ನವೇಲಿ ನಂದಾಗೆ ಮುಂದೆ ಮದುವೆಯಿಲ್ಲದ ಮಗು ಆದರೆ ತನಗೆ ಯಾವುದೇ ಸಮಸ್ಯೆಯಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ನನ್ನ ಹೇಳಿಕೆ ಕೆಲವರಿಗೆ ಆಕ್ಷೇಪಾರ್ಹವೆಂದು ಅನ್ನಿಸಬಹುದು. ಆದರೆ, ದೈಹಿಕ ಆಕರ್ಷಣೆ ಮತ್ತು ಹೊಂದಾಣಿಕೆ ಕೂಡ ಬಹಳ ಮುಖ್ಯ ಅನ್ನೋದನ್ನು ನಾವು ಅರ್ಥೈಸಿಕೊಳ್ಳಬೇಕು. ನಮ್ಮ ಕಾಲದಲ್ಲಿ ನಾಮಗೆ ಈ ರೀತಿಯ ಯಾವುದೇ ಪ್ರಯೋಗ ಮಾಡಲು ಸಾಧ್ಯವಾಗಲಿಲ್ಲ. ಆದರೆ, ಇಂದಿನ ಪೀಳಿಗೆಯವರು ಮಾಡುತ್ತಾರೆ. ಅವರು ಈ ರೀತಿಯ ಹೊಸ ಪ್ರಯೋಗ ಏಕೆ ಮಾಡಬಾರದು ಅಂತ ಕೇಳುವುದು ತಪ್ಪು. ಏಕೆಂದರೆ ಅದು ದೀರ್ಘಕಾಲೀನ ಸಂಬಂಧಕ್ಕೆ ಕಾರಣವಾಗಿದೆ. ದೈಹಿಕ ಆಕರ್ಷಣೆ ಇಲ್ಲದಿದ್ದರೆ ನಮ್ಮ ಸಂಬಂಧ ಹೆಚ್ಚು ಕಾಲ ಉಳಿಯುವುದಿಲ್ಲ. ನೀವು ಪ್ರೀತಿ ಮತ್ತು ಹೊಂದಾಣಿಕೆಯ ಮೇಲೆ ಶಾಶ್ವತವಾಗಿ ಜೊತೆಗಿರಲು ಸಾಧ್ಯವಿಲ್ಲ ಎಂದು ಜಯಾ ಬಚ್ಚನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೆಲವೊಮ್ಮೆ ಇದು ಕರುಣಾಜನಕ ಅಂತ ಅನ್ನಿಸಬಹುದು. ನಮಗೆ ಅದರ ಬಗ್ಗೆ ಯೋಚಿಸಲು ಸಹ ಸಾಧ್ಯವಾಗಲಿಲ್ಲ. ಆದರೆ, ನನ್ನ ನಂತರದ ಯುವ ಪೀಳಿಗೆ, ಶ್ವೇತಾ ಅವರ ಪೀಳಿಗೆ, ನವ್ಯಾ ಅವರದು ವಿಭಿನ್ನವಾದ ಪೀಳಿಗೆಯಾಗಿದೆ. ಇವರು ಆ ಅನುಭವವನ್ನು ಪಡೆಯುವುದು ಅಪರಾಧ ಎಂದು ಭಾವಿಸುತ್ತಾರೆ. ಆದರೆ, ಇದು ತುಂಬಾ ತಪ್ಪು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.