ಕರ್ನಾಟಕ

karnataka

ETV Bharat / entertainment

'ವೇಶ್ಯಾವಾಟಿಕೆ ಜಾಲದಲ್ಲಿ ನಾನಿಲ್ಲ': ನ್ಯೂರಾನ್ ಚಿತ್ರದ ನಟ ಯುವ ಸ್ಪಷ್ಟನೆ - ನಟನ ತಪ್ಪು ಸುದ್ದಿ ಪ್ರಸಾರ

ಡೇಟಿಂಗ್ ಆ್ಯಪ್‌ನಲ್ಲಿ ಮಹಿಳೆಯರ ನಕಲಿ‌ ಫೋಟೊ ಸೃಷ್ಟಿಸಿ ಗ್ರಾಹಕರನ್ನು ವೇಶ್ಯಾವಾಟಿಕೆ ದಂಧೆಗೆ ಸೆಳೆದು ಅಕ್ರಮ ಹಣ‌ ಸಂಪಾದನೆ‌ ಪ್ರಕರಣದಲ್ಲಿ ಇತ್ತೀಚೆಗೆ ಸ್ಯಾಂಡಲ್​ವುಡ್​ ನಟರೊಬ್ಬರ ಹೆಸರು ಕೇಳಿಬಂದಿತ್ತು. ಇದೀಗ ನಟ ಮಾಧ್ಯಮಗೋಷ್ಟಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.

Neuron actor Yuva clarifies
Neuron actor Yuva clarifies

By

Published : Jan 18, 2023, 1:42 PM IST

Updated : Jan 18, 2023, 2:59 PM IST

ನ್ಯೂರಾನ್ ಚಿತ್ರದ ನಟ ಯುವ ಸ್ಪಷ್ಟನೆ

ಬೆಂಗಳೂರು:ನ್ಯೂರಾನ್ ಚಿತ್ರದ ನಾಯಕ ನಟ ಯುವ ಎನ್ನುವವರು ವೇಶ್ಯಾವಾಟಿಕೆ ಜಾಲದಲ್ಲಿ ತೊಡಗಿಸಿಕೊಂಡಿರುವ ಆರೋಪ ಇತ್ತೀಚೆಗೆ ಕೇಳಿಬಂದಿತ್ತು. ಈ ಬಗ್ಗೆ ಇಂದು ಸ್ಪಷ್ಟನೆ ನೀಡಿರುವ ಅವರು, "ನನ್ನನ್ನೇ ಹೋಲುವ ಮಂಜುನಾಥ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.‌ ನಾನು ಯಾವುದೇ ಪ್ರಕರಣದಲ್ಲಿ ಭಾಗಿಯಾಗಿಲ್ಲ" ಎಂದು ತಿಳಿಸಿದ್ದಾರೆ. ಖಾಸಗಿ ಆ್ಯಪ್​​ನಲ್ಲಿ ಯುವ ನಟ ವೇಶ್ಯಾವಾಟಿಕೆ ಜಾಲದಲ್ಲಿ ತೊಡಗಿಕೊಂಡು ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ ಆರೋಪದಡಿ ಅವರನ್ನು ಸುದ್ದುಗುಂಟೆಪಾಳ್ಯ‌ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿತ್ತು. ಈ ಸಂಬಂಧ ಇಂದು ಖಾಸಗಿ ಹೊಟೇಲ್​​ನಲ್ಲಿ‌ ನಟ ಮಾಧ್ಯಮಗೋಷ್ಠಿ ನಡೆಸಿದರು.

"ನನ್ನ ಹಾಗೇ ಇರುವ ಮಂಜುನಾಥ್ ಅಲಿಯಾಸ್ ಸಂಜು ಎಂಬಾತನನ್ನ‌ು ವೇಶ್ಯಾವಾಟಿಕೆ ಆರೋಪದಡಿ ಬಂಧಿಸಿದ್ದಾರೆ. ಆದರೆ, ಮಾಧ್ಯಮಗಳಲ್ಲಿ‌ ನನ್ನ ಹೆಸರು ಪ್ರಸ್ತಾಪಿಸಲಾಗಿತ್ತು. ಈ ಸುದ್ದಿ ನೋಡಿದಾಕ್ಷಣ ನಾನೇ‌ ಆತಂಕಕ್ಕೆ‌ ಒಳಗಾದೆ. ಕೂಡಲೇ‌‌ ಸ್ನೇಹಿತರು, ಸಂಬಂಧಿಕರೆಲ್ಲರೂ ಫೋನ್ ಮಾಡಿ ವಿಚಾರಿಸಿದ್ದರು. ನಾನು ಮನೆಯಲ್ಲೇ‌ ಇದ್ದೇನೆ. ನನ್ನನ್ನು ಪೊಲೀಸರು ಬಂಧಿಸಿಲ್ಲ" ಎಂದು ಹೇಳಿದರು.

ಮಾಧ್ಯಮಗಳಲ್ಲಿ ನನ್ನ ಹೆಸರು ಬಂದಿರುವುದರಿಂದ‌ ನನ್ನ ಇಮೇಜ್​ಗೆ ಧಕ್ಕೆಯಾಗಿದೆ. ಮಾಧ್ಯಮಗಳು ಮಾಹಿತಿಯನ್ನು ಬಿತ್ತರಿಸುವ ಮುನ್ನ ದೃಢೀಕರಿಸಿಕೊಂಡು ಸುದ್ದಿ ಪ್ರಸಾರ ಮಾಡಬೇಕು‌. ನನ್ನ ಸ್ಪಷ್ಟನೆಗೆ ಮಾಧ್ಯಮಗಳಲ್ಲಿ ಪ್ರಚಾರ ನೀಡಿ ಎಂದು ಮನವಿ ಮಾಡಿಕೊಂಡರು.

ಪ್ರಕರಣವೇನು?:ಖಾಸಗಿ ಆ್ಯಪ್‌ನಲ್ಲಿ ಮಹಿಳೆಯರ ನಕಲಿ‌ ಫೋಟೋ ಸೃಷ್ಟಿಸಿ ಗ್ರಾಹಕರನ್ನು ವೇಶ್ಯಾವಾಟಿಕೆ ದಂಧೆಗೆ ಸೆಳೆದು ಅಕ್ರಮವಾಗಿ ಹಣ‌ ಸಂಪಾದನೆ‌ಯಲ್ಲಿ ಮಾಡುತ್ತಿದ್ದ ಆರು ಮಂದಿ‌ ದಂಧೆಕೋರರನ್ನು ಸುದ್ದುಗುಂಟೆಪಾಳ್ಯ ಪೊಲೀಸರು ಕಳೆದ ಎರಡು ದಿನಗಳ ಹಿಂದೆ ಸೆರೆಹಿಡಿದಿದ್ದರು. ಗ್ರಾಹಕರು ನೀಡಿದ‌ ದೂರು ಆಧರಿಸಿ ವೇಶ್ಯಾವಾಟಿಕೆ ಜಾಲದಲ್ಲಿ ತೊಡಗಿದ್ದ ಮಂಜುನಾಥ್, ಮಲ್ಲಿಕಾರ್ಜುನಯ್ಯ, ಮಂಜುನಾಥ್, ಮೋಹನ್, ಹನುಮೇಶ್ ಮತ್ತು ರಾಜೇಶ್ ಎಂಬುವರನ್ನು ಬಂಧಿಸಲಾಗಿತ್ತು. ಆ್ಯಪ್​​ನಲ್ಲಿರುವ ಮಹಿಳೆ ಹಾಗೂ ಯುವತಿಯರ ಪ್ರೊಫೈಲ್​ಗಳಿಗೆ ಹೋಗಿ ಎಡಿಟ್ ಮಾಡಿದ ಸುಂದರವಾದ ಹುಡುಗಿಯರ ಫೋಟೋಗಳನ್ನು ಬಳಸಿ ಗ್ರಾಹಕರಿಗೆ ಕಳುಹಿಸುತ್ತಿದ್ದರು. ನಂತರ ಗ್ರಾಹಕರು‌ ಹಾಗೂ ಆರೋಪಿಗಳು ಹಣಕಾಸು ವ್ಯವಹಾರ ಮಾಡುತ್ತಿದ್ದರು.

''ಸಾರ್ವಜನಿಕರಿಗೆ ವಿಶಯ ತಲುಪಿಸಲು ಮಾಧ್ಯಮಗಳು ಅನಿವಾರ್ಯ. ಆದರೆ, ವಾಸ್ತವ ತಿಳಿಯದೇ ಸುದ್ದಿ ಪ್ರಸಾರ ಮಾಡುವುದು ತಪ್ಪು. ಘಟನೆಗೆ ಸಂಬಂಧಿಸಿದ ವ್ಯಕ್ತಿಯನ್ನು ಫೋನ್​ ಮೂಲಕ ಸಂಪರ್ಕಿಸಿ ಆ ಬಗ್ಗೆ ಮಾಹಿತಿ ತೆಗೆದುಕೊಂಡು ಸುದ್ದಿ ಪ್ರಸಾರ ಮಾಡಿದರೆ ಉತ್ತಮ. ಸದ್ಯ ನಡೆದ ಘಟನೆಗೂ ನನಗೂ ಸಂಬಂಧ ಇಲ್ಲ. - ನ್ಯೂರಾನ್ ಚಿತ್ರದ ನಟ ಯುವ

''ಆರೋಪಿಗಳು ಮಾತುಕತೆಯಂತೆ ಗೊತ್ತುಪಡಿಸಿದ‌ ಯುವತಿಯರನ್ನು ಕಳುಹಿಸದೆ ಬೇರೆ ಯುವತಿಯರನ್ನು‌ ಕಳುಹಿಸುತ್ತಿದ್ದರು. ಗ್ರಾಹಕರು‌ ಪ್ರಶ್ನಿಸಿದರೆ ಬೆದರಿಕೆ ಹಾಕಿ ಹೆಚ್ಚು ಹಣ ವಸೂಲಿ ಮಾಡುತ್ತಿದ್ದರು. ವೇಶ್ಯಾವಾಟಿಕೆ ಜಾಲದಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡಿರುವ ಆರೋಪಿಗಳು ಮಹಿಳೆಯರ ಫೇಕ್ ಐಡಿ ಕ್ರಿಯೆಟ್ ಹಾಗೂ ಸರ್ವೀಸ್ ನೀಡುವುದಕ್ಕೆ‌ ಪ್ರತ್ಯೇಕ ತಂಡ ರಚಿಸಿ ಸಂಘಟಿತವಾಗಿ ಕೃತ್ಯದಲ್ಲಿ ಭಾಗಿಯಾಗುತ್ತಿದ್ದರು. ಸುದ್ದುಗುಂಟೆಪಾಳ್ಯ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿ ಹಲವು ಮಂದಿ ಗ್ರಾಹಕರನ್ನು ಹೆದರಿಸಿ ಹಣ ವಸೂಲಿ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ'' ಎಂದು ಆಗ್ನೇಯ ವಿಭಾಗದ ಡಿಸಿಪಿ‌ ಸಿ.ಕೆ.ಬಾಬಾ ಅವರು ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದರು.

ಇದನ್ನೂ ಓದಿ:ಸಹಪಾಠಿ ಮೇಲೆ ಹಲ್ಲೆ ಆರೋಪ: ಬಿಜೆಪಿ ತೆಲಂಗಾಣ ಅಧ್ಯಕ್ಷ ಬಂಡಿ ಸಂಜಯ್ ಪುತ್ರನ ವಿರುದ್ಧ ಪ್ರಕರಣ

Last Updated : Jan 18, 2023, 2:59 PM IST

ABOUT THE AUTHOR

...view details