ಕರ್ನಾಟಕ

karnataka

ETV Bharat / entertainment

ದರ್ಶನ್ ಜತೆ ₹1,500 ಸಾವಿರ ಕೋಟಿ ಕಲೆಕ್ಷನ್‌ ಮಾಡುವ ಸಿನಿಮಾ ಮಾಡುತ್ತೇನೆ : ರಾಜೇಂದ್ರಸಿಂಗ್ ಬಾಬು - ದರ್ಶನ್ ಜೊತೆ ರಾಜೇಂದ್ರಸಿಂಗ್ ಬಾಬು ಸಿನಿಮಾ

ನಾವು ಕೂಡ ನಟ ದರ್ಶನ್ ಜೊತೆ ಒಂದು ಸಿನಿಮಾ ಮಾಡಲಿದ್ದೇವೆ. ಅದು 1500 ಕೋಟಿ ಕಲೆಕ್ಷನ್‌ ಮಾಡಲಿದೆ. ದರ್ಶನ್ ಕೂಡ ಈ ಚಿತ್ರದ ಕಥೆಯನ್ನ ಒಪ್ಪಿಕೊಂಡಿದ್ದು, ಹೊರ ದೇಶಗಳಲ್ಲಿ ಚಿತ್ರೀಕರಣ ಮಾಡಲಿದ್ದೇವೆ‌ ಎಂದು ನಿರ್ದೇಶಕ ಎಸ್. ವಿ ರಾಜೇಂದ್ರಸಿಂಗ್ ಬಾಬು ತಿಳಿಸಿದ್ದಾರೆ..

Darshan-Rajendra Singh Babu
ದರ್ಶನ್-ರಾಜೇಂದ್ರಸಿಂಗ್ ಬಾಬು

By

Published : May 25, 2022, 1:34 PM IST

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುವುದರ ಜೊತೆಗೆ ಸಿನಿಮಾಗಳು 1,000 ಸಾವಿರ ಕೋಟಿ ಕಲೆಕ್ಷನ್‌ ಮಾಡುವ ಮಟ್ಟಿಗೆ ಕನ್ನಡ ಚಿತ್ರರಂಗ ಬೆಳೆದಿದೆ ಎಂದು ನಿರ್ದೇಶಕ ಎಸ್. ವಿ ರಾಜೇಂದ್ರಸಿಂಗ್ ಬಾಬು ಮೆಚ್ಚುಗೆ ವ್ಯಕ್ತಪಡಿಸಿದರು. ವೀರಕಂಬಳ ಸಿನಿಮಾ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವ ವೇಳೆ, ಕೆಜಿಎಫ್ ಚಿತ್ರತಂಡದ ಬಗ್ಗೆ ಕೊಂಡಾಡಿದರು.

ನಾವು ಕೂಡ ನಟ ದರ್ಶನ್ ಜೊತೆ ಒಂದು ಸಿನಿಮಾ ಮಾಡಲಿದ್ದೇವೆ. ಅದು 1500 ಕೋಟಿ ಕಲೆಕ್ಷನ್‌ ಮಾಡಲಿದೆ. ದರ್ಶನ್ ಕೂಡ ಈ ಚಿತ್ರದ ಕಥೆಯನ್ನ ಒಪ್ಪಿಕೊಂಡಿದ್ದು, ಹೊರ ದೇಶಗಳಲ್ಲಿ ಚಿತ್ರೀಕರಣ ಮಾಡಲಿದ್ದೇವೆ‌. ವೀರ ಕಂಬಳ ಮತ್ತು ದರ್ಶನ್ ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳ ಚಿತ್ರೀಕರಣ ಮುಗಿದ ಮೇಲೆ ಈ ಸಿನಿಮಾದ ಚಿತ್ರೀಕರಣ ಆರಂಭಿಸುತ್ತೇವೆ ಎಂದರು.

ಇದನ್ನೂ ಓದಿ:ದುಬೈ, ಲಂಡನ್​ನಲ್ಲಿ ವೀರ ಕಂಬಳ ಚಿತ್ರದ ಪ್ರೀಮಿಯರ್ ಶೋ ನಡೆಸಲು ಸಿದ್ಧತೆ

ನಿರ್ದೇಶಕ ಎಸ್.ವಿ ರಾಜೇಂದ್ರಸಿಂಗ್ ಬಾಬು ಹಾಗೂ ದರ್ಶನ್ ಕಾಂಬಿನೇಷನ್​ನಲ್ಲಿ ಈ ಹಿಂದೆ ಸೆಟ್ಟೇರಿದ ರಾಜ ವೀರಮದಕರಿ ಚಿತ್ರದ ಸುದ್ದಿಯಿಲ್ಲ. ಇದ್ರ ನಡುವೆ ಇದೀಗ ದರ್ಶನ್ ಜೊತೆ 1,500 ಸಾವಿರ ಕೋಟಿ ಕಲೆಕ್ಷನ್‌ ಮಾಡುವ ಸಿನಿಮಾ ಮಾಡುತ್ತೇನೆ ಎಂದಿರೋದು ಅಚ್ಚರಿಯೇ ಸರಿ.

ABOUT THE AUTHOR

...view details