ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಚಿತ್ರಗಳ ಸಾಲಿಗೆ ದಿಯಾ ಮತ್ತು ಲವ್ ಮಾಕ್ಟೇಲ್ ನಿಲ್ಲುತ್ತದೆ. 2020ರಲ್ಲಿ ಬಿಡುಗಡೆ ಆದ ಎರಡು ಸಿನಿಮಾಗಳು ಅಭಿಮಾಗಳಿಗೆ ಇಷ್ಟವಾದವು. ಈಗ ದಿಯಾದ ಆದಿ ಮತ್ತು ಲವ್ ಮಾಕ್ಟೇಲ್ನ ನಿಧಿಮಾ ಫಾರ್ ರಿಜಿಸ್ಟ್ರೇಷನ್ ಎಂಬ ಸಿನಿಮಾದಲ್ಲಿ ನಾಯಕ ನಾಯಕಿ ಕಾಣಿಸಿಕೊಳ್ಳುತ್ತಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರೋ ಫಾರ್ ರಿಜಿಸ್ಟ್ರೇಷನ್ ಚಿತ್ರದ ಹಾಡುಗಳಿಗೆ ಡಿಮ್ಯಾಂಡ್ ಹೆಚ್ಚಿಸಿಕೊಂಡಿದೆ.
ಕ್ಯೂಟ್ ಲವ್ ಸ್ಟೋರಿ ಜೊತೆಗೆ ಫ್ಯಾಮಿಲಿ ಕಥೆ ಆಧರಿಸಿರೋ ಫಾರ್ ರಿಜಿಸ್ಟ್ರೇಷನ್ ಚಿತ್ರದ ಆಡಿಯೋ ಹಕ್ಕನ್ನು 30 ಲಕ್ಷ ರೂಪಾಯಿ ಮೊತ್ತ ಕೊಟ್ಟು ಪ್ರತಿಷ್ಟಿತ ಝೇಂಕಾರ್ ಮ್ಯೂಸಿಕ್ ಸಂಸ್ಥೆ ಖರೀದಿಸಿದೆ. ಈ ಚಿತ್ರದಲ್ಲಿ ಆರು ಹಾಡಿಗಳಿದ್ದು, ಆರ್.ಕೆ.ಹರೀಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಬಹದ್ದೂರ್ ಚೇತನ್ ಕುಮಾರ್, ಕವಿರಾಜ್ ಹಾಗೂ ನಾಗಾರ್ಜುನ ಶರ್ಮ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಹಾಡುಗಳು ವಿಜಯ್ ಪ್ರಕಾಶ್, ಚಂದನ್ ಶೆಟ್ಟಿ ಹಾಗೂ ವಾಸುಕಿ ವೈಭವ್ ಧ್ವನಿಯಲ್ಲಿ ಮುದ್ದಾಗಿ ಮೂಡಿಬಂದಿದೆ.
ಬೆಂಗಳೂರು, ಉಡುಪಿ, ಮಂಗಳೂರು ಹಾಗೂ ಸಕಲೇಶಪುರದಲ್ಲಿ ಸುಂದರ ತಾಣಗಳಲ್ಲಿ ಈ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಪೃಥ್ವಿ ಅಂಬರ್ ಹಾಗೂ ಮಿಲನ ನಾಗರಾಜ್ ಅಲ್ಲದೇ ರವಿಶಂಕರ್, ಬಾಬು ಹಿರಣ್ಣಯ್ಯ, ಸ್ವಾತಿ, ಸುಧಾ ಬೆಳವಾಡಿ, ತಬಲನಾಣಿ, ರಮೇಶ್ ಭಟ್, ಸಿಹಿಕಹಿ ಚಂದ್ರು ಮುಂತಾದವರು ಈ ಚಿತ್ರದ ತಾರಾಗಣವಾಗಿದೆ. ಒಂದೇ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದ್ದು, ಉಳಿದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯ ಡಬ್ಬಿಂಗ್ ಕಾರ್ಯದಲ್ಲಿ ಸಿನಿಮಾ ತಂಡ ಬ್ಯುಸಿಯಾಗಿದೆ.
ನವೀನ್ ದ್ವಾರಕನಾಥ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಚಿತ್ರಕ್ಕೆ ಎನ್. ನವೀನ್ ರಾವ್ ಹಣ ಹೂಡುತ್ತಿದ್ದಾರೆ. ಅಭಿಷೇಕ್ ಕಲ್ಲತ್ತಿ- ಅಭಿಷೇಕ್ ಕಾಸರಗೋಡು ಛಾಯಾಗ್ರಹಣ ಹಾಗೂ ಮನು ಶೆಡ್ಗಾರ್ ಅವರ ಸಂಕಲನವಿದೆ. ಸದ್ಯ ಚಿತ್ರದ ಟೈಟಲ್ನಿಂದ ಗಮನ ಸೆಳೆಯುತ್ತಿರೋ ಫಾರ್ ರಿಜಿಸ್ಟ್ರೇಷನ್ ಚಿತ್ರತಂಡ ಟ್ರೈಲರ್ ಲಾಂಚ್ ಮಾಡಿ ಬಿಡುಗಡೆ ಮಾಡುವ ತವಕದಲ್ಲಿದೆ.
ಫಾರ್ ರಿಜಿಸ್ಟರೇಷನ್ ಚಿತ್ರದ ಹಾಡುಗಳಿಗೆ ಡಿಮ್ಯಾಂಡ್ ಇದನ್ನೂ ಓದಿ :ಗುಡ್ಬೈ ಸಿನಿಮಾ: ಅಮಿತಾಭ್ ಬಚ್ಚನ್ ಜೊತೆ ಕೆಲಸ ಮಾಡಿದ ಅನುಭವ ಹಂಚಿಕೊಂಡ ರಶ್ಮಿಕಾ