ಬಾಲಿವುಡ್ ಸ್ಟೈಲಿಶ್ ಐಕಾನ್ ಹೃತಿಕ್ ರೋಷನ್ ಮತ್ತು ಬಹುಬೇಡಿಕೆ ನಟಿಯಾಗಿ ಮಿಂಚಿದ್ದ ಪ್ರೀತಿ ಜಿಂಟಾ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ 'ಕೋಯಿ... ಮಿಲ್ ಗಯಾ' ನಿಮಗೆ ನೆನಪಿದೆಯೇ? ಮರೆಯೋದು ಹೇಗೆ ತಾನೆ ಸಾಧ್ಯ ಹೇಳಿ?. ಸದಾ ನೆನಪಿನಲ್ಲಿ ಉಳಿಯುವ ಸಿನಿಮಾವಿದು. ವಿಶ್ವಾದ್ಯಂತ ಸದ್ದು ಮಾಡಿದ್ದ ಚಿತ್ರ. ಜಗತ್ತಿನೆಲ್ಲೆಡೆ ಅಬ್ಬರ ಸೃಷ್ಟಿಸಿದ್ದ 'ಕಹೋ ನಾ ಪ್ಯಾರ್ ಹೈ' ಚಿತ್ರದ ನಂತರ ಹೃತಿಕ್ ರೋಷನ್ ಸಿನಿ ವೃತ್ತಿಜೀವನದ ಎರಡನೇ ಚಿತ್ರವಿದು.
ಈ ಸೂಪರ್ ಹಿಟ್ ಸಿನಿಮಾವನ್ನು ಸೂಪರ್ ಸ್ಟಾರ್ ಹೃತಿಕ್ ರೋಷನ್ ಅವರ ತಂದೆ ರಾಕೇಶ್ ರೋಷನ್ ನಿರ್ದೇಶಿಸಿದ್ದಾರೆ. ಇಂದಿಗೂ ಜನರು 'ಕೋಯಿ...ಮಿಲ್ ಗಯಾ' ಚಿತ್ರದ ಡೈಲಾಗ್ಸ್, ಕಥೆ, ದೃಶ್ಯಗಳನ್ನು ಮೆಲುಕು ಹಾಕುತ್ತಾರೆ. 2003ರ ಆಗಸ್ಟ್ 8 ರಂದು ತೆರೆಕಂಡಿದ್ದ ಈ ಸಿನಿಮಾ 20 ವರ್ಷಗಳನ್ನು ಪೂರೈಸುತ್ತಿದೆ. ಈ ಹಿನ್ನೆಲೆ ಚಿತ್ರಮಂದಿರಗಳಲ್ಲಿ 'ಕೋಯಿ... ಮಿಲ್ ಗಯಾ' ಮರು ಬಿಡುಗಡೆ ಆಗಿದೆ.
20 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಹೃತಿಕ್ ರೋಷನ್ ಅವರ ಬ್ಲಾಕ್ಬಸ್ಟರ್ ಸಿನಿಮಾ ಮತ್ತೊಮ್ಮೆ ಅಭಿಮಾನಿಗಳಿಗೆ ಥಿಯೇಟರ್ನಲ್ಲಿ ದರ್ಶನ ಕೊಟ್ಟಿದೆ. ಹೌದು, ಇಂದು (ಆಗಸ್ಟ್ 4, ಶುಕ್ರವಾರ) ದೇಶಾದ್ಯಂತ ಸಿನಿಮಾ ಮರು ಬಿಡುಗಡೆ ಆಗಿದೆ. ರೀ ರಿಲೀಸ್ಗೂ ಮುನ್ನ ಹೃತಿಕ್ ರೋಷನ್ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನಿಸಿಕೆಗಳನ್ನು ಹೇಳಿಕೊಂಡು, ಸಂತಸ ವ್ಯಕ್ತಪಡಿಸಿದ್ದಾರೆ.