ಬಾಲಿವುಡ್ ನಟ ಹೃತಿಕ್ ರೋಷನ್ 2022ರ ನವೆಂಬರ್ನಲ್ಲಿ ತೆಗೆದ ಫೋಟೋವೊಂದನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ದೇಹವನ್ನು ಸ್ಥಿರವಾಗಿ ಕಾಪಾಡಿಕೊಳ್ಳುವ ಅವರ ಫಿಟ್ನೆಸ್ ಗುಟ್ಟನ್ನು ಬಹಿರಂಗಪಡಿಸುವ ಸುದೀರ್ಘ ಶೀರ್ಷಿಕೆಯ ಜೊತೆಗಿನ ಬೈಸಿಪ್ಸ್ ಪ್ರದರ್ಶಿಸುವ ಫೋಟೋ ಅಪ್ಲೋಡ್ ಮಾಡಿದ್ದಾರೆ. ಹಲವಾರು ತಿಂಗಳುಗಳ ಅವಧಿಯಲ್ಲಿ ಅವರು ತಮ್ಮ ದೇಹವನ್ನು ಸ್ಥಿರವಾಗಿರುವಂತೆ ನೋಡಿಕೊಂಡಿದ್ದಾರೆ. ಅದು ಹೇಗೆ ಸಾಧ್ಯವಾಯಿತು? ಎಂಬುದರ ಕುರಿತು ಹೇಳಿದ್ದಾರೆ.
ನಟ ಇನ್ಸ್ಟಾಗ್ರಾಮ್ನಲ್ಲಿ ಬೈಸಿಪ್ಸ್ ಪ್ರದರ್ಶಿಸುವ ಪೋಟೋವನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ. ಹೃತಿಕ್ ರೋಷನ್ ತಾಯಿ ಪಿಂಕಿ ರೋಷನ್ ಸೇರಿದಂತೆ ಅನೇಕರು ಸ್ಟೈಲಿಶ್ ಸ್ಟಾರ್ ಪೋಸ್ಟ್ಗೆ ಕಮೆಂಟ್ ಮಾಡುತ್ತಿದ್ದಾರೆ. ಚಿತ್ರದಲ್ಲಿ ಹೃತಿಕ್ ಶಕ್ತಿ ಪ್ರದರ್ಶಿಸುವುದನ್ನು ಕಾಣಬಹುದು. ಜೊತೆಗೆ ತಮ್ಮ ದೇಹವನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ಅನುಸರಿಸುವ ಕೆಲವು ಮಾರ್ಗಸೂಚಿಗಳನ್ನು ಫೋಟೋ ಕೆಳಗೆ ಬರೆದುಕೊಂಡಿದ್ದಾರೆ. ಪೌಷ್ಠಿಕ ಆಹಾರ ಮತ್ತು ನಿದ್ದೆ ಇವೆರಡು ಸರಿಯಾಗಿದ್ದರೆ ಮಾತ್ರ ನಮ್ಮ ದೇಹವನ್ನು ಸ್ಥಿರವಾಗಿ ಕಾಯ್ದಿರಿಸಲು ಸಾಧ್ಯ ಎಂದು ಹೇಳಿದ್ದಾರೆ.
"ನಾನು ಈ ಫೋಟೋವನ್ನು 2022ರ ನವೆಂಬರ್ನಲ್ಲಿ ತೆಗೆದುಕೊಂಡಿದ್ದೇನೆ. ಆದರೆ, ಸರಿಯಾದ ನಿದ್ರೆ ಮತ್ತು ಪೌಷ್ಠಿಕ ಆಹಾರದಿಂದ ಈ ದೇಹವನ್ನು ನಾನು ಇಂದಿಗೂ ಸ್ಥಿರವಾಗಿರಿಸಿದ್ದೇನೆ. ಕೆಲವರಿಗೆ ಆಹಾರ ಮತ್ತು ನಿದ್ರೆ ತಮಾಷೆಯೆನಿಸಬಹುದು. ಆದರೆ, ಇದು ನಿಮ್ಮ ಮನಸ್ಸನ್ನು ಶಾಂತವಾಗಿರಿಸಲು ಸಹಾಯಕವಾಗಿದೆ. ಜೊತೆಗೆ ವ್ಯಾಯಾಮ ಮಾಡುವುದು ಮತ್ತು ಜಿಮ್ಗೆ ಹೋಗುವುದು ಕೂಡ ಒಳ್ಳೆಯದು. ಅದರೊಂದಿಗೆ ಧ್ಯಾನ ಕೂಡ ನಮ್ಮ ಸಂತೋಷವನ್ನು ದುಪ್ಪಟ್ಟು ಮಾಡಲು ಸಹಕಾರಿಯಾಗುತ್ತದೆ. ಆದರೆ, ಇದೆಲ್ಲವೂ ನಿಮಗೆ ನೀರಸ ಎನಿಸಬಹುದು. ಈ ರೀತಿಯ ಪರಿಶ್ರಮದಿಂದ ವಿಸ್ಮಯ ಸಂಭವಿಸಬಹುದು" ಎಂದು ಬರೆದಿದ್ದಾರೆ.