ವದಂತಿಯ ಜೋಡಿಗಳಾದ ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಷನ್ - ಸಬಾ ಆಜಾದ್ ಮತ್ತು ಸುಸ್ಸಾನೆ ಖಾನ್ - ಅರ್ಸ್ಲಾನ್ ಗೋನಿ ಇತ್ತೀಚೆಗೆ ಗೋವಾದಲ್ಲಿ ಒಟ್ಟಿಗೆ ಸಮಯ ಕಳೆದಿದ್ದಾರೆ. ಹೃತಿಕ್ ರೋಷನ್ ಮತ್ತು ಸುಸ್ಸಾನೆ ಖಾನ್ ಅವರ ಹೊಸ ಪ್ರೇಮಿಗಳು ಎನ್ನಲಾದ ಸಬಾ ಆಜಾದ್, ಅರ್ಸ್ಲಾನ್ ಗೋನಿ ಅವರೊಂದಿಗೆ ಸಮಯ ಕಳೆದಿದ್ದು, ಈ ನಾಲ್ವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಖತ್ ಸೌಂಡ್ ಮಾಡ್ತಿವೆ.
ನಟಿ ಪೂಜಾ ಬೇಡಿ ಈ ಗೆಟ್-ಟುಗೆದರ್‌ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪಾರ್ಟಿಯಲ್ಲಿ ನಿರ್ದೇಶಕ ಅಭಿಷೇಕ್ ಕಪೂರ್ ಜೊತೆಗೆ ಸುಸ್ಸಾನೆ ಖಾನ್ ಅವರ ಸಹೋದರ ಫರಾಹ್ ಖಾನ್ ಅಲಿ ಮತ್ತು ಜಾಯೆದ್ ಖಾನ್ ಭಾಗವಹಿಸಿದ್ದರು. ಹೃತಿಕ್ ಮತ್ತು ಸುಸ್ಸಾನೆ ಒಟ್ಟಿಗೆ ಕಾಣಿಸಿಕೊಂಡಿಲ್ಲ.