ಹೈದರಾಬಾದ್: ತಮ್ಮ ಹೊಸ ಗರ್ಲ್ಫ್ರೆಂಡ್ ಸಬಾ ಆಜಾದ್ ಹುಟ್ಟುಹಬ್ಬಕ್ಕೆ ಬಾಲಿವುಡ್ ನಟ ಹೃತಿಕ್ ರೋಷನ್ ವಿಶ್ ಮಾಡಿದ್ದಾರೆ. ಇಂದು (ಮಂಗಳವಾರ) 37ನೇ ವಸಂತಕ್ಕೆ ಕಾಲಿಟ್ಟ ಸಬಾಗೆ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ರೀತಿಯಲ್ಲಿ ಬರೆಯುವ ಮೂಲಕ ಶುಭಾಶಯ ತಿಳಿಸಿದ್ದಾರೆ. ಪ್ರತಿಯಾಗಿ ಸಬಾ ಧನ್ಯವಾದ ಹೇಳಿದ್ದಾರೆ.
ಮೈಕ್‌ನೊಂದಿಗೆ ಪೋಸ್ ನೀಡುತ್ತಿರುವ ಸಾಬಾ ಆಜಾದ್ ಫೋಟೋ ಹಂಚಿಕೊಂಡಿರುವ ಹೃತಿಕ್, "ನಿಮ್ಮ ಲಯ, ನಿಮ್ಮ ಧ್ವನಿ, ನಿಮ್ಮ ಅನುಗ್ರಹ, ನಿಮ್ಮ ಹೃದಯ, ನಿಮ್ಮ ಅದ್ಭುತ ಮನಸ್ಸು, ಹುಚ್ಚು ಹಿಡಿಸುವ ನಿಮ್ಮ ಚಮತ್ಕಾರದ ಹಾಡುಗಳಿಗೆ ಧನ್ಯವಾದಗಳು ಎಂದು ಮಳೆಬಿಲ್ಲು ಮತ್ತು ಹೃದಯದ ಎಮೋಜಿಗಳೊಂದಿಗೆ ಬಣ್ಣ ಬಣ್ಣದ ಮಾತುಗಳಿಂದ ಹೊಗಳಿದ್ದಾರೆ. ಶೀರ್ಷಿಕೆಯಲ್ಲಿ ಇಂದಿನ ದಿನಾಂಕವನ್ನು ಸಹ ಅವರು ಉಲ್ಲೇಖಿಸಿದ್ದಾರೆ. ಫೋಟೋದಲ್ಲಿ ತಾರೆ ಸಾಬಾ ಕ್ಯಾಶುಯಲ್ ಉಡುಪು ಧರಿಸಿರುವುದನ್ನು ಕಾಣಬಹುದು.
ಹೃತಿಕ್ ರೋಷನ್ ಅವರ ಈ ಪೋಸ್ಟ್ ಅನ್ನು ಗಮನಿಸಿದ ಅವರ ಸೋದರ ಸಂಬಂಧಿ ಪಶ್ಮಿನಾ ರೋಷನ್, ಸಬಾ ಆಜಾದ್ ಅವರನ್ನು ಟ್ಯಾಗ್ ಮಾಡಿ "ಅಯ್ಯೋ, ಜನ್ಮದಿನದ ಶುಭಾಶಯಗಳು ಸಬ್ಜಿ" ಎಂದು ಬರೆದಿದ್ದಾರೆ. ಇವರಷ್ಟೇ ಅಲ್ಲದೆ ಹೃತಿಕ್ ಅಭಿಮಾನಿಗಳು ಹೃದಯ ಮತ್ತು ಫೈರ್ ಎಮೋಜಿಗಳ ಮೂಲಕ ತಮ್ಮ ಪ್ರೀತಿಯನ್ನು ಸುರಿದ್ದಾರೆ.