2022 ರ ದೀಪಾವಳಿ ಹಬ್ಬವನ್ನು ಬಾಲಿವುಡ್ ತಾರೆಯರು ಸಖತ್ ಆಗಿ ಆಚರಿಸಿ ಎಂಜಾಯ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬಾಲಿವುಡ್ ನಟಿ ಸಬಾ ಆಜಾದ್ ಅವರು ಗೆಳೆಯ ಹೃತಿಕ್ ರೋಷನ್ ಜತೆಗಿನ ಸೆಲ್ಫಿಯನ್ನು ಇನ್‌ಸ್ಟಾಗ್ರಾಮ್‌ಗೆ ತೇಲಿಬಿಟ್ಟು, ಅದಕ್ಕೆ "ದೀಪಾವಳಿ ಶುಭಾಶಯಗಳು" ಎಂದು ಶೀರ್ಷಿಕೆ ನೀಡಿದ್ದಾರೆ. ಹೃತಿಕ್ ಮತ್ತು ಸಬಾ ಒಟ್ಟಿಗೆ ನಗು ಹಂಚಿಕೊಂಡಿದ್ದು, ಬಿಳಿ ಬಟ್ಟೆಗಳಲ್ಲಿದ್ದಾರೆ.
ಹೃತಿಕ್, ಸಬಾ ಸಾಥ್ ಕಹೋ ನಾ ಪ್ಯಾರ್ ಹೈ:ಹೃತಿಕ್, ಸಬಾ ಅವರು ಬಹಳ ಸಮಯದಿಂದ ಆಗಾಗ್ಗೆ ವಿವಿಧ ಖಾಸಗಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಹಾಗೂ ಪ್ರೇಮಾಂಕುರ ಸಂಬಂಧದ ಬಗ್ಗೆ ಸುಳ್ಳು ವದಂತಿಗಳು ಇತ್ತೀಚೆಗೆ ಹರಿದಾಡುತ್ತಿದ್ದವು. ಆದರೆ ಅವರಿಬ್ಬರು ಫೆಬ್ರವರಿಯಲ್ಲಿ ಒಟ್ಟಿಗೆ ಔತಣಕೂಟದಲ್ಲಿ ಕಾಣಿಸಿಕೊಂಡಾಗ ಕಹೋ ನಾ ಪ್ಯಾರ್ ಹೈ ನಿಜವೆನಿಸಿತು. ನಂತರ, ಸಬಾ ಕೂಡ ಹೃತಿಕ್ ಕುಟುಂಬದೊಂದಿಗೆ ಗೆಟ್-ಟುಗೆದರ್‌ಗೆ ಸೇರಿಕೊಂಡಿದ್ದರು. ಇಬ್ಬರೂ ಕೈ ಕೈ ಹಿಡಿದು ತಿರುಗಾಡಿ ಡೇಟಿಂಗ್ ಮಾಡುತ್ತಿದ್ದು, ನಟ ಕರಣ್ ಜೋಹರ್ 50ನೇ ಹುಟ್ಟು ಹಬ್ಬದ ಬಳಿಕ ವದಂತಿಗಳಿಗೆ ತೆರೆಬಿದ್ದಿತ್ತು.
ಈ ನಡುವೆಯೂ ಹೃತಿಕ್ ಅವರು ಸೈಫ್ ಅಲಿ ಖಾನ್ ಮತ್ತು ರಾಧಿಕಾ ಆಪ್ಟೆ ಅವರೊಂದಿಗೆ ಆಕ್ಷನ್ ಥ್ರಿಲ್ಲರ್ ಚಿತ್ರ 'ವಿಕ್ರಮ್ ವೇದ' ಚಿತ್ರದಲ್ಲಿ ಕಾಣಿಸಿಕೊಂಡರು. ನಿರ್ದೇಶಕ ಪುಷ್ಕರ್-ಗಾಯತ್ರಿ ನಿರ್ದೇಶನದ 'ವಿಕ್ರಮ್ ವೇದ' ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಪಡೆಯಿತು. ಹೃತಿಕ್ ಅವರು ಆಕ್ಷನ್ ಥ್ರಿಲ್ಲರ್ ಚಿತ್ರ 'ಫೈಟರ್' ನಲ್ಲಿ ದೀಪಿಕಾ ಪಡುಕೋಣೆ ಮತ್ತು ಅನಿಲ್ ಕಪೂರ್ ಜತೆ ನಟಿಸಲಿದ್ದು, ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಲಿದ್ದಾರೆ. ದೀಪಿಕಾ ಮತ್ತು ಹೃತಿಕ್ ಅವರ ಮೊದಲ ಆನ್-ಸ್ಕ್ರೀನ್ ಸಹಯೋಗ ಚಿತ್ರದಲ್ಲಿದೆ.
ಸಬಾ ಬಹುಮುಖ ಪ್ರತಿಭೆಯ ನಟಿ:ಸಬಾ ನಟನೆಯ ಜತೆ ಗಾಯಕಿ ಕೂಡಾ. ಅವರು 'ಡಿಟೆಕ್ಟಿವ್ ಬ್ಯೋಮಕೇಶ್ ಬಕ್ಷಿ', 'ಶಾಂದಾರ್' ಮತ್ತು 'ಕಾರ್ವಾನ್'ನಂಥ ಬಾಲಿವುಡ್ ಚಲನಚಿತ್ರಗಳಲ್ಲಿ ನಟಿಸಿ,ಪ್ರೇಕ್ಷಕರ ಮನಸ್ಸನ್ನೇ ಕದ್ದಿದ್ದರು. ಸಬಾ ತನ್ನ ಮುಂದಿನ ಚಿತ್ರ 'ಸಾಂಗ್ಸ್ ಆಫ್ ಪ್ಯಾರಡೈಸ್' ಚಿತ್ರೀಕರಣವನ್ನು ಇತ್ತೀಚೆಗೆ ಮುಗಿಸಿದರು. ಅದರಲ್ಲಿ ಸೋನಿ ರಜ್ದನ್ ಇದ್ದಾರೆ. ಹೃತಿಕ್ ರೋಷನ್ ಮತ್ತು ಸಾಬಾ ಆಜಾದ್ ಬಗ್ಗೆ ಈ ಸಂಬಂಧ ಮದುವೆಯವರೆಗೂ ಹೋಗಲಿದೆ ಎಂದು ಹೇಳಲಾಗುತ್ತಿದೆ. ಹೌದು, ಹೃತಿಕ್ ಶೀಘ್ರದಲ್ಲೇ ಗೆಳತಿ ಸಬಾ ಆಜಾದ್ ಅವರನ್ನು ಮದುವೆಯಾಗಲಿದ್ದಾರೆ. ಹೃತಿಕ್ ಮತ್ತು ಸಬಾ ದೀಪಾವಳಿ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಪ್ರೀತಿಯನ್ನು ಖಚಿತಪಡಿಸಿದ್ದಾರೆ.