'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ'.ಇತ್ತೀಚೆಗೆಕನ್ನಡ ಚಿತ್ರರಂಗದಲ್ಲಿ ಉತ್ತಮ, ವಿಭಿನ್ನ ಕಥಾಹಂದರವುಳ್ಳ ಸಿನಿಮಾಗಳು ಮೂಡಿ ಬರುತ್ತಿವೆ. ಪ್ರೇಕ್ಷಕರ ಅಭಿರುಚಿ ಬದಲಾಗುತ್ತಿದೆ. ಇದಕ್ಕನುಗುಣವಾಗಿ ಸಿನಿಪ್ರಿಯರು ಮೆಚ್ಚುವಂಥ ಚಿತ್ರಗಳನ್ನು ಸ್ಯಾಂಡಲ್ವುಡ್ನಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಆ ಪೈಕಿ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಕೂಡ ಒಂದು. ಸಖತ್ ಟೈಟಲ್, ಯೂತ್ಫುಲ್ ಕಂಟೆಂಟ್, ವಿಭಿನ್ನ ಪ್ರಚಾರ ತಂತ್ರ, ಬಹುತಾರಾಗಣ, ಕನ್ನಡ ನಟರ ಬೆಂಬಲ ಹೀಗೆ.. ನಾನಾ ವಿಚಾರಗಳಿಂದ ಸುದ್ದಿಯಲ್ಲಿರುವ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರದ ಟ್ರೇಲರ್ ಸೋಮವಾರ ರಿಲೀಸ್ ಆಗಿದೆ.
ಟ್ರೇಲರ್ ಹಂಚಿಕೊಂಡ ರಿಷಬ್ ಶೆಟ್ಟಿ: ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಚಿತ್ರದ ಟ್ರೇಲರ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. 'ನಾನು ಮತ್ತು ನನ್ ಜೂನಿಯರ್ಸ್ ಸೇರಿ ಬರುತ್ತಿದ್ದೇವೆ, ಇದೇ ಜುಲೈ 21ಕ್ಕೆ, ಚಿತ್ರ ಮಂದಿರದಲ್ಲಿ ಸಿಗೋಣ' ಎಂದು ಅವರು ಬರೆದುಕೊಂಡಿದ್ದಾರೆ. ಸುಮಾರು 4 ನಿಮಿಷದ ಟ್ರೇಲರ್ ಪ್ರೇಕ್ಷಕರ ಕುತೂಹಲ ಕೆರಳಿಸುವಂತಿದೆ. ಹಾಸ್ಟೆಲ್ ಕಥೆ- ವ್ಯಥೆ, ಯುವಕರ ಪರಿಸ್ಥಿತಿಯ ಸಣ್ಣ ತುಣುಕು ಇಲ್ಲಿದೆ. ಟ್ರೇಲರ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ:ಅದ್ಧೂರಿಯಾಗಿ ಸೆಟ್ಟೇರಿದ 'ಡಬಲ್ ಇಸ್ಮಾರ್ಟ್': ರಾಮ್ ಪೋತಿನೇನಿ- ಪುರಿ ಜಗನ್ನಾಥ್ ಕಾಂಬೋದಲ್ಲಿ ಮತ್ತೊಂದು ಸಿನಿಮಾ
ಸಿನಿಮಾ ಜುಲೈ 21ಕ್ಕೆ ತೆರೆಗೆ: ಯೂತ್ಫುಲ್ ಕಂಟೆಂಟ್ ಮೂಲಕ ಸಿನಿಪ್ರಿಯರಲ್ಲಿ ಅದರಲ್ಲೂ ವಿಶೇಷವಾಗಿ ಯುವ ಮನಸ್ಸುಗಳಲ್ಲಿ ಕುತೂಹಲ ಮೂಡಿಸಿದ್ದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಟ್ರೇಲರ್ ಅನಾವರಣಗೊಂಡು ಸಿನಿಮಾ ರಿಲೀಸ್ ಕಾಯುವಿಕೆಯನ್ನು ದೂರಗೊಳಿಸಿದೆ. ಹಾಗಾಗಿ, ಸಿನಿಮಾ ನೋಡಲು ಇನ್ನೇನು ಹೆಚ್ಚು ಕಾಯಬೇಕೆಂದಿಲ್ಲ. ಮುಂದಿನ 10 ದಿನಗಳಲ್ಲಿ ಅಂದರೆ ಜುಲೈ 21ಕ್ಕೆ ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ. ಹೊಸ ಪ್ರಚಾರದ ಮೂಲಕ ಗಮನ ಸೆಳೆಯುತ್ತಿರುವ ಚಿತ್ರ ಎಷ್ಟರ ಮಟ್ಟಿಗೆ ಯಶಸ್ಸು ಕಾಣಲಿದೆ? ಅನ್ನೋದನ್ನು ಕಾದು ನೋಡಬೇಕು.
ಇದನ್ನೂ ಓದಿ:ಆಡು ಸ್ವಾಮಿಯ ಮಹಿಮೆ ಸಾರುವ 'ಆಡೇ ನಮ್ God' ಅಂತಿದ್ದಾರೆ ಹಿರಿಯ ನಿರ್ದೇಶಕ ಪಿ.ಎಚ್ ವಿಶ್ವನಾಥ್
ಚಿತ್ರತಂಡ ಹೀಗಿದೆ..: ನಿತಿನ್ ಕೃಷ್ಣಮೂರ್ತಿ ಅವರು ಈ ಚಿತ್ರಕ್ಕೆ ಕಥೆ ಬರೆದು, ನಿರ್ದೇಶನವನ್ನೂ ಮಾಡಿದ್ದಾರೆ. ವರುಣ್ ಸ್ಟುಡಿಯೋಸ್, ಗುಲ್ ಮೋಹರ್ ಫಿಲ್ಮ್ಸ್ ಬ್ಯಾನರ್‌ನಡಿ ಪ್ರಜ್ವಲ್ ಬಿ.ಪಿ, ವರುಣ್ ಕುಮಾರ್ ಗೌಡ, ಅರವಿಂದ್ ಕೆ. ಕಶ್ಯಪ್ ನಿತಿನ್ ಕೃಷ್ಣಮೂರ್ತಿ ಸೇರಿ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ನಿರ್ಮಾಣ ಮಾಡಿದ್ದಾರೆ. ರಕ್ಷಿತ್ ಶೆಟ್ಟಿ ತಮ್ಮದೇ ಪರಂವಃ ಪಿಕ್ಚರ್ಸ್ ಮೂಲಕ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಮೋಹಕತಾರೆ ರಮ್ಯಾ ಸೇರಿದಂತೆ ಕೆಲ ಕನ್ನಡ ನಟರು ಚಿತ್ರದಲ್ಲಿ ವಿಶೇಷ ಪಾತ್ರ ವಹಿಸುವ ಮೂಲಕ ಹೊಸಬರ ಚಿತ್ರಕ್ಕೆ ಪ್ರೋತ್ಸಾಹ ನೀಡಿದ್ದಾರೆ.