ಕರ್ನಾಟಕ

karnataka

ETV Bharat / entertainment

ಹಾರರ್ ಸಿನಿಮಾದಲ್ಲಿ ಪ್ರಿಯಾಂಕಾ ಉಪೇಂದ್ರ... 60 ಅಡಿ ಎತ್ತರದ ಕಟೌಟ್ ನಿಲ್ಲಿಸಿ​ 'ಕ್ಯಾಪ್ಚರ್' ಪೋಸ್ಟರ್ ಅನಾವರಣ - priyanka upendra

Horror movie 'Capture': 60 ಅಡಿ ಎತ್ತರದ ಕಟೌಟ್ ನಿಲ್ಲಿಸುವ ಮೂಲಕ ಹಾರರ್ ಸಿನಿಮಾ 'ಕ್ಯಾಪ್ಚರ್'ನ ಪೋಸ್ಟರ್ ಅನಾವರಣಗೊಳಿಸಲಾಗಿದೆ.

Horror movie Capture
ಕ್ಯಾಪ್ಚರ್ ಟೈಟಲ್ ಪೋಸ್ಟರ್

By ETV Bharat Karnataka Team

Published : Oct 18, 2023, 3:55 PM IST

ಕನ್ನಡ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಸಿನಿಮಾಗಳನ್ನು ಮಾಡುತ್ತಾ ತಮ್ಮದೇ ಬೇಡಿಕೆ ಹೊಂದಿರುವ ನಟಿ ಎಂದರೆ ಅದು ಪ್ರಿಯಾಂಕಾ ಉಪೇಂದ್ರ. ಈಗಾಗಲೇ ಹಾರರ್ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಪ್ರಿಯಾಂಕಾ ಇದೀಗ ಮತ್ತೊಂದು ಹಾರರ್ ಸಿನಿಮಾ ಮೂಲಕ ಅಭಿಮಾನಿಗಳೆದುರು ಬರಲು ಸಜ್ಜಾಗಿದ್ದಾರೆ. ಪ್ರಿಯಾಂಕಾ ಅವರ ಹೊಸ ಸಿನಿಮಾ ಟೈಟಲ್​ 'ಕ್ಯಾಪ್ಚರ್'.

60 ಅಡಿ ಎತ್ತರದ ಪೋಸ್ಟರ್ ಕಟೌಟ್: ಕ್ಯಾಪ್ಚರ್ ತಂಡ ಇತ್ತೀಚೆಗಷ್ಟೇ ಟೈಟಲ್ ಪೋಸ್ಟರ್ ಅನಾವರಣಗೊಳಿಸಿದೆ. ಅಭಿಮಾನಿಗಳ ಮಧ್ಯೆ ಕ್ಯಾಪ್ಚರ್ ಸಿನಿಮಾದ ಪೋಸ್ಟರ್ ಲಾಂಚ್ ಮಾಡಿದ್ದು ವಿಶೇಷವಾಗಿತ್ತು. ಸ್ಯಾಂಡಲ್‌ವುಡ್‌ನಲ್ಲೇ ಮೊದಲ ಬಾರಿಗೆ ನಾಯಕಿಯೊಬ್ಬರ ಪೋಸ್ಟರ್ ಅನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಅನಾವರಣಗೊಳಿಸಲಾಗಿದೆ. 60 ಅಡಿ ಎತ್ತರದ ಕಟೌಟ್ ನಿಲ್ಲಿಸುವ ಮೂಲಕ ಪೋಸ್ಟರ್ ಬಿಡುಗಡೆ ಮಾಡಿರುವುದು ಖುಷಿಯ ವಿಚಾರ. ಕನ್ನಡ ಸಿನಿಮಾರಂಗದಲ್ಲಿಯೇ ಇದೊಂದು ವಿನೂತನ ಪ್ರಯತ್ನ ಎಂದೇ ಹೇಳಬಹುದು.

ಕ್ಯಾಪ್ಚರ್ ಟೈಟಲ್ ಪೋಸ್ಟರ್ ಅನಾವರಣ ಸಮಾರಂಭ

ಚಿತ್ರತಂಡದ ಕುರಿತು.. ಈ ಕ್ಯಾಪ್ಚರ್​ ಸಿನಿಮಾಗೆ ಮಮ್ಮಿ, ದೇವಕಿ ಸಿನಿಮಾ ಖ್ಯಾತಿಯ ನಿರ್ದೇಶಕ ಲೋಹಿತ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರಿಯಾಂಕಾ ಹಾಗೂ ಲೋಹಿತ್ ಕಾಂಬಿನೇಷನ್‌ನ 3ನೇ ಸಿನಿಮಾ ಇದು. ರವಿರಾಜ್ ಅವರು ತಮ್ಮ ಶ್ರಿ ದುರ್ಗಪರಮೇಶ್ವರಿ ಪ್ರೊಡಕ್ಷನ್ ಮೂಲಕ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಬ್ಯಾನರ್‌ನಲ್ಲಿ ಮೂಡಿ ಬರುತ್ತಿರುವ ಚೊಚ್ಚಲ ಚಿತ್ರವಿದು. ರವಿರಾಜ್ ಅವರು ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ಅವರ ಸಹೋದರ.

ಉಪೇಂದ್ರ, ಪ್ರಜ್ವಲ್ ದೇವರಾಜ್ ಸಾಥ್: ಕ್ಯಾಪ್ಚರ್ ಸಿನಿಮಾದ ಟೈಟಲ್ ಪೋಸ್ಟರ್ ಅನ್ನು ವಿಭಿನ್ನವಾಗಿ ಲಾಂಚ್ ಮಾಡಲಾಯಿತು. ವೀರೇಶ್ ಚಿತ್ರಮಂದಿರದ ಮುಂಭಾಗದಲ್ಲಿ ಪ್ರಿಯಾಂಕಾ ಉಪೇಂದ್ರ ಅವರ 60 ಅಡಿ ಕೌಟೌಟ್ ಪೋಸ್ಟರ್ ನಿಲ್ಲಿಸುವ ಮೂಲಕ ಸಿನಿಮಾದ ಟೈಟಲ್ ಪೋಸ್ಟರ್ ರಿವೀಲ್ ಮಾಡಲಾಯಿತು. ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಪೋಸ್ಟರ್ ಲಾಂಚ್ ಮಾಡಿದರು.

ಇದನ್ನೂ ಓದಿ:ನಾಳೆ ಲಿಯೋ ಬಿಡುಗಡೆ: ಆದರೆ ವಿಜಯ್​​ ಅಭಿಮಾನಿಗಳಿಗಿದೆ ಬೇಸರದ ಸಂಗತಿ! ಏನದು?

ಕ್ಯಾಪ್ಚರ್ ಬಗ್ಗೆ ಹೇಳುವುದಾದರೆ, ಹಾರರ್ ಅಂದಮೇಲೆ ಭಯ, ಕುತೂಹಲ, ಟ್ವಿಸ್ಟ್‌ಗಳು ಇದ್ದೇ ಇರುತ್ತೆ. ಇದೆಲ್ಲದರ ಜೊತೆಗೆ ಈ ಸಿನಿಮಾ ಒಂದು ವಿಭಿನ್ನ ಅನುಭವ ನೀಡಲಿದೆ. ಏಕೆಂದರೆ ಸಂಪೂರ್ಣ ಸಿನಿಮಾದ ಶೂಟಿಂಗ್​ ಅನ್ನು ಸಿಸಿಟಿವಿ ಕಾನ್ಸೆಪ್ಟ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ. ವಿಶ್ವದಲ್ಲಿಯೇ ಮೊದಲ ಬಾರಿಗೆ ಈ ರೀತಿಯ ಪ್ರಯತ್ನ ಮಾಡಲಾಗಿದೆ.

ಇದನ್ನೂ ಓದಿ:'ಘೋಸ್ಟ್​​ನಲ್ಲಿ ಕೆಜಿಎಫ್ ನಿರೀಕ್ಷಿಸಬೇಡಿ': ಸಿನಿಮಾ, ರಜನಿಕಾಂತ್, ಮೋಹನ್​ ಲಾಲ್​ ಬಗ್ಗೆ ಶಿವಣ್ಣ ಹೇಳಿದ್ದಿಷ್ಟು!

ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸಿ ಟೈಟಲ್ ಪೋಸ್ಟರ್ ಮೂಲಕ ಸದ್ದು ಮಾಡುತ್ತಿರುವ 'ಕ್ಯಾಪ್ಚರ್' ಚಿತ್ರಮಂದಿರದ ಅಂಗಳಕ್ಕೆ ಬರಲು ಎದುರು ನೋಡುತ್ತಿದೆ. ಚಿತ್ರಕ್ಕೆ ಎಸ್ ಪಾಂಡಿಕುಮಾರ್ ಕ್ಯಾಮರಾ ವರ್ಕ್ ಮಾಡಿದ್ದು, ರವಿಚಂದ್ರನ್ ಅವರ ಸಂಕಲನವಿದೆ. ಪ್ರಿಯಾಂಕಾ ಉಪೇಂದ್ರ ಅವರ ಜೊತೆಗೆ ಇನ್ನೂ ಸಾಕಷ್ಟು ಸ್ಟಾರ್ ಕಲಾವಿದರು ಸಿನಿಮಾದಲ್ಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಸಿನಿಮಾ ಮುಂದಿನ ತಿಂಗಳು ನವೆಂಬರ್‌ನಲ್ಲಿ ತೆರೆಗೆ ಬರಲಿದೆ. ಪ್ರಿಯಾಂಕಾ ಮತ್ತು ಲೋಹಿತ್ ಕಾಂಬಿನೇಷನ್‌ನ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ABOUT THE AUTHOR

...view details