ಕರ್ನಾಟಕ

karnataka

ETV Bharat / entertainment

ಸೈಕಲ್ ಜಾಥಾ ಮೂಲಕ 'ಹೊಂದಿಸಿ ಬರೆಯಿರಿ' ಪ್ರಮೋಷನ್..

'ಹೊಂದಿಸಿ ಬರೆಯಿರಿ' ಸಿನಿಮಾ ಟೀಂ ಸಾಮಾಜಿಕ ಕಳಕಳಿ ಮೆರೆಯುವ ಮೂಲಕ ಪ್ರಚಾರ ಕಾರ್ಯಕ್ಕೆ ಮುನ್ನುಡಿ ಬರೆದಿದೆ.

ಹೊಂದಿಸಿ ಬರೆಯಿರಿ
ಹೊಂದಿಸಿ ಬರೆಯಿರಿ

By

Published : Jun 9, 2022, 10:19 AM IST

ಸಿನಿಮಾ ಮಾಡೋದೇ ಒಂದು ಸವಾಲು. ಇನ್ನೂ ಸಿನಿಮಾವನ್ನು ಥಿಯೇಟರ್​ಗೆ ತಂದು ನಿಲ್ಲಿಸೋದು ಎಲ್ಲದಕ್ಕಿಂತ ದೊಡ್ಡ ಸವಾಲು. ಅದಕ್ಕಾಗಿ ಚಿತ್ರತಂಡಗಳು ನಾನಾ ಬಗೆಯಲ್ಲಿ ಪ್ರಮೋಷನ್ ಮಾಡ್ತವೆ. ಆದರೆ 'ಹೊಂದಿಸಿ ಬರೆಯಿರಿ' ಸಿನಿಮಾ ಟೀಂ ಸಾಮಾಜಿಕ ಕಳಕಳಿ ಮೆರೆಯುವ ಮೂಲಕ ಪ್ರಚಾರ ಕಾರ್ಯಕ್ಕೆ ಮುನ್ನುಡಿ ಬರೆದಿದೆ.

ಪರಿಸರ ದಿನದ ನಿಮಿತ್ತ ಬಿ ಎನ್ ಎಂಐಟಿ ಕಾಲೇಜುವತಿಯಿಂದ ಇತ್ತೀಚೆಗಷ್ಟೇ ಸೈಕಲ್ ಜಾಥಾದ ಮೂಲಕ ಪರಿಸರ ಜಾಗೃತಿ ಮೂಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ನಟರಾದ ಪ್ರವೀಣ್ ತೇಜ್, ನವೀನ್ ಶಂಕರ್, ನಟಿಯರಾದ ಐಶಾನಿ ಶೆಟ್ಟಿ, ಸಂಯುಕ್ತ ಹೊರನಾಡು, ಭಾವನಾ ರಾವ್, ಅರ್ಚನಾ ಜೋಯಿಸ್, ಅನಿರುದ್ಧ್ ಆಚಾರ್ಯ, ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಪರಿಸರ ಉಳಿವಿಗಾಗಿ ಬೈಸಿಕಲ್ ಚಲಾಯಿಸಿ ಜಾಗೃತಿ ಮೂಡಿಸಿದರು.

ಹೊಂದಿಸಿ ಬರೆಯಿರಿ

ಇತ್ತೀಚಿಗೆ ಹಮ್ಮಿಕೊಂಡಿದ್ದ, We Run for cause ಎಂಬ ಮ್ಯಾರಾಥಾನ್​ನಲ್ಲಿಯೂ ಹೊಂದಿಸಿ ಬರೆಯಿರಿ ಸಿನಿಮಾ ತಂಡ ಭಾಗಿಯಾಗಿತ್ತು. ಈ ಮೂಲಕ ಗ್ರಾಮೀಣ ಮಕ್ಕಳ ಶಿಕ್ಷಣಕ್ಕಾಗಿ ಹೊಂದಿಸಿ ಬರೆಯಿರಿ ಬಳಗ ಕೈ ಜೋಡಿಸಿದೆ. ಸದ್ಯ ಟೀಸರ್ ಮೂಲಕ ಈಗಾಗಲೇ ಹೊಸ ಭರವಸೆ ಹುಟ್ಟಿಸಿರುವ ಹೊಂದಿಸಿ ಬರೆಯಿರಿ ಸಿನಿಮಾದ ಮೊದಲ ಹಾಡು ಇದೇ ತಿಂಗಳ 24ಕ್ಕೆ ಬಿಡುಗಡೆಯಾಗಲಿದೆ.

ಕಾಲೇಜು ಫ್ರೊಫೆಸರ್ ಆಗಿದ್ದ ರಾಮೇನಹಳ್ಳಿ ಜಗನ್ನಾಥ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದು, ವಿದ್ಯಾರ್ಥಿ ಜೀವನ, ಕಾಲೇಜು ನಂತರದ ಜೀವನದ ಏರಿಳಿತದ 12 ವರುಷಗಳ ಸುದೀರ್ಘ ಕಥಾಹಂದರ ಸಿನಿಮಾದಲ್ಲಿದೆ. ಸಿನಿಮಾದಲ್ಲಿ ಪ್ರವೀಣ್ ತೇಜ್, ನವೀನ್ ಶಂಕರ್, ಶ್ರೀಮಹದೇವ್, ಭಾವನಾರಾವ್ ಸಂಯುಕ್ತ ಹೊರನಾಡು, ಐಶಾನಿ ಶೆಟ್ಟಿ, ಅರ್ಚನಾ ಜೋಯಿಸ್, ಅನಿರುದ್ದ್ ಆಚಾರ್ಯ ಸೇರಿದಂತೆ ಹಲವು ಪ್ರತಿಭೆಗಳು ನಟಿಸಿದ್ದಾರೆ.

ಈಗಾಗಲೇ ಹೊಂದಿಸಿ ಬರೆಯಿರಿ ಸಿನಿಮಾದ ಶೂಟಿಂಗ್ ಪೂರ್ಣವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಾಗುತ್ತಿವೆ. ಟಗರು ಖ್ಯಾತಿಯ ಮಾಸ್ತಿ, ಪೊಗರು ಖ್ಯಾತಿಯ ಪ್ರಶಾಂತ್ ರಾಜಪ್ಪ ಹಾಗೂ ಜಗನ್ನಾಥ್ ಸೇರಿದಂತೆ ಮೂವರು ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. 'ಗುಳ್ಟು' ಚಿತ್ರಕ್ಕೆ ಸಿನಿಮಾಟೋಗ್ರಫಿ ಮಾಡಿದ್ದ ಶಾಂತಿ ಸಾಗರ್‌ ಈ ಚಿತ್ರಕ್ಕೆ ಕ್ಯಾಮರಾ ಹಿಡಿದಿದ್ದಾರೆ. ಜೋ ಕೋಸ್ಟ ಸಂಗೀತ, ಕೆ ಕಲ್ಯಾಣ್, ಹೃದಯಶಿವ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ದೊಡ್ಡ ತಾರಾಬಳಗವೇ ನಟಿಸಿರುವ ಹೊಂದಿಸಿ ಬರೆಯಿರಿ ಸಿನಿಮಾವನ್ನು ಸಂಡೇ ಸಿನಿಮಾಸ್ ಬ್ಯಾನರ್ ಅಡಿ ರಾಮೇನಹಳ್ಳಿ ಜಗನ್ನಾಥ್ ಹಾಗೂ ಸ್ನೇಹಿತರು ನಿರ್ಮಾಣ ಮಾಡಿದ್ದಾರೆ.

(ಇದನ್ನೂ ಓದಿ: ಮುಂಬೈ ಏರ್​ಪೋರ್ಟ್​​ನಲ್ಲಿ ಸಿಂಪಲ್​​ ಆಗಿ ಕಾಣಿಸಿಕೊಂಡ ವಿರುಷ್ಕಾ..)

ABOUT THE AUTHOR

...view details