ನಟ ರಿಷಬ್ ಶೆಟ್ಟಿ ಅಭಿನಯಿಸಿ ನಿರ್ದೇಶಿಸಿರುವ 'ಕಾಂತಾರ' ಸಿನಿಮಾದ ಹಿಂದಿ ಅವತರಣಿಕೆ ಇಂದು ಸುಮಾರು 2,500ಕ್ಕೂ ಹೆಚ್ಚು ಪರದೆಗಳಲ್ಲಿ ಬಿಡುಗಡೆ ಅಗಿ ಪರಭಾಷೆಯ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.
ಹೌದು, ಹಿಂದಿ ಭಾಷೆಗೆ ಕಾಂತಾರ ಸಿನಿಮಾ ಡಬ್ ಆಗಿದೆ. ಇಂದಿನಿಂದ ಹಿಂದಿ ವರ್ಷನ್ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ಮೂಲಕ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಗೆ ಭರ್ಜರಿ ಲಾಭ ಆಗಿದೆ. ನಟ ರಿಷಬ್ ಶೆಟ್ಟಿ ಅವರ ಡಿಮ್ಯಾಂಡ್ ಕೂಡ ಹೆಚ್ಚಾಗಿದೆ.
ಕನ್ನಡದ ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಫಿಲ್ಮ್ಸ್ ದೇಶಾದ್ಯಂತ ಕಾಂತಾರ ಮೂಲಕ ಧೂಳೆಬ್ಬಿಸುತ್ತಿದ್ದಾರೆ. ಇದೊಂದು ಅಸಾಧಾರಣ ಸಿನಿಮಾ. ಚಿತ್ರದ ಭಾಗವಾಗಿರುವ ಪ್ರತಿಯೊಬ್ಬರಿಗೂ ಅಭಿನಂದನೆಗಳು. ರಿಷಬ್ ಶೆಟ್ಟಿ ನಿಜವಾಗಿಯೂ ಸ್ಫೂರ್ತಿ ಎಂದು ಟಾಲಿವುಡ್ ನಟ ರಾಣಾ ದಗ್ಗುಬಾಟಿ ಟ್ವೀಟ್ ಮಾಡಿದ್ದಾರೆ.