ಖ್ಯಾತ ಚಲನಚಿತ್ರ ನಿರ್ಮಾಪಕ ಮಣಿರತ್ನಂ ಅವರ ಚಿತ್ರ ಪೊನ್ನಿಯಿನ್ ಸೆಲ್ವನ್ ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಮೊದಲ ಭಾಗವು ಸೆಪ್ಟೆಂಬರ್ 2022 ರಲ್ಲಿ ಬಿಡುಗಡೆಯಾಗಿದ್ದು, ಪ್ರೇಕ್ಷಕರು ಆ ಸಿನಿಮಾವನ್ನು ಮೆಚ್ಚಿದ್ದರು. ಈಗ ಸಿನಿಮಾ ಅಭಿಮಾನಿಗಳು ಪೊನ್ನಿಯಿನ್ ಸೆಲ್ವನ್ 2ಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಸಿನಿಮಾ ಪ್ರಚಾರದಲ್ಲಿ ಚಿತ್ರತಂಡ ತೊಡಗಿಸಿಕೊಂಡಿದ್ದು, ಈ ಮಧ್ಯೆ ಚಿತ್ರದ ನಿರ್ದೇಶಕ ಮಣಿರತ್ನಂ ಅವರು ಹೇಳಿಕೆಯೊಂದನ್ನು ನೀಡಿದ್ದು, ಆ ಹೇಳಿಕೆ ಸಂಚಲನ ಮೂಡಿಸಿದೆ. ಇತ್ತೀಚೆಗೆ, ಪೊನ್ನಿಯಿನ್ ಸೆಲ್ವನ್ 2 ರ ನಿರ್ದೇಶಕರು ಹಿಂದಿ ಚಿತ್ರರಂಗವು ತನ್ನನ್ನು ಬಾಲಿವುಡ್ ಎಂದು ಕರೆಯುವುದನ್ನು ನಿಲ್ಲಿಸಲಿ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.
ಹಿರಿಯ ಚಲನಚಿತ್ರ ನಿರ್ಮಾಪಕ ಮಣಿರತ್ನಂ ಅವರ ಮುಂದಿನ ಚಿತ್ರ ಪೊನ್ನಿಯಿನ್ ಸೆಲ್ವನ್ 2 ಬಿಡುಗಡೆಗೆ ಸಜ್ಜಾಗುತ್ತಿದೆ. ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಸಿಐಐ ಸೌತ್ ಮೀಡಿಯಾ ಮತ್ತು ಎಂಟರ್‌ಟೈನ್‌ಮೆಂಟ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಹಿಂದಿ ಚಲನಚಿತ್ರೋದ್ಯಮವು ಬಾಲಿವುಡ್ ಪದವನ್ನು ಬಳಸುವುದನ್ನು ತಡೆಯಬೇಕು ಎಂದು ಹೇಳಿದರು. ಇದರೊಂದಿಗೆ, ಇತರ ಭಾರತೀಯ ಭಾಷೆಗಳ ಚಿತ್ರಗಳು ತಮ್ಮ ಅರ್ಹತೆಯನ್ನು ಪಡೆಯಬಹುದು. ಹಿಂದಿ ಚಿತ್ರರಂಗ ತನ್ನನ್ನು ತಾನು ಬಾಲಿವುಡ್ ಎಂದು ಕರೆಯುವುದನ್ನು ನಿಲ್ಲಿಸಿದರೆ, ಜನರು ಭಾರತೀಯ ಸಿನಿಮಾ ಎಂದ್ರೆ ಬಾಲಿವುಡ್ ಎಂದು ಗುರುತಿಸುವುದನ್ನು ನಿಲ್ಲಿಸುತ್ತಾರೆ ಎಂದು ಮಣಿರತ್ನಂ ಹೇಳಿದ್ದಾರೆ.
ಕೆಜಿಎಫ್, ಪುಷ್ಪ, ಆರ್‌ಆರ್‌ಆರ್ ಹಾಗೂ ಕಾಂತಾರ ಸಿನಿಮಾ ಬಿಡುಗಡೆ ನಂತರ ಈ ಚಿತ್ರಗಳು ವಿಶ್ವದ ಚಿತ್ರರಂಗದ ಮೇಲೆ ಯಾವ ರೀತಿ ಪ್ರಭಾವ ಬೀರಿದೆ ಎಂಬುದರ ಕುರಿತು ಮಾತನಾಡಿದ ಅವರು, ನಾನು ಬಾಲಿವುಡ್, ಕಾಲಿವುಡ್ ಎಂದು ಯಾವುದೇ ಚಿತ್ರರಂಗವನ್ನು ಪ್ರತ್ಯೇಕ ಮಾಡಿ ನೋಡಲು ಇಷ್ಟಪಡುವುದಿಲ್ಲ. ಭಾರತೀಯ ಚಿತ್ರರಂಗ ಎಂದರೆ ಅದು ಎಲ್ಲಾ ಭಾಷೆಗಳ ಸಿನಿಮಾ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಮ್ಮ ಜನರ ಹಾಗೂ ನಮ್ಮ ನೆಲದ ಕಥೆಗಳನ್ನು ಹೇಳುವ ಮೂಲಕ ದಕ್ಷಿಣ ಚಿತ್ರರಂಗ ಇಂದು ವಿಶ್ವಾದ್ಯಂತ ಸಾಕಷ್ಟು ಪ್ರಭಾವ ಬೀರುತ್ತಿದೆ ಎಂದು ಮಣಿರತ್ನಂ ಹೇಳಿದರು.