ಬಾಲಿವುಡ್ ನಟಿ ಹಿನಾ ಖಾನ್ ಅವರ ಇತ್ತೀಚಿನ ಪೋಸ್ಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿತ್ತು. ದ್ರೋಹ (betrayal) ಎಂದು ಸೂಚಿಸಿದ್ದ ಆ ಪೋಸ್ಟ್ನಿಂದಾಗಿ ಹಿನಾ ಖಾನ್ ಲವ್ ಲೈಫ್ ಸರಿಯಿಲ್ಲ ಎಂದು ವರದಿ ಆಗಿತ್ತು. ಹಿನಾ ಮತ್ತು ಗೆಳೆಯ ರಾಕಿ ಜೈಸ್ವಾಲ್ ಅವರ 13 ವರ್ಷಗಳ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಆಗಿತ್ತು. ಇದೀಗ ಹಿನಾ ಖಾನ್ ಹೊಸ ಪೋಸ್ಟ್ ಆ ಊಹಾಪೋಹಗಳಿಗೆ ಫುಲ್ ಸ್ಟಾಪ್ ಇಟ್ಟಿದೆ.
'ಷಡ್ಯಂತ್ರ' (Shadyantra) ಚಿತ್ರದ ಟೀಸರ್ ಅನ್ನು ಹಿನಾ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ "ನಾನು ಸುಳ್ಳು, ಮೋಸದ ಜಾಲದಲ್ಲಿ ಸಿಕ್ಕಿಬಿದ್ದಿದ್ದೇನೆ. ಈ ಷಡ್ಯಂತ್ರವನ್ನು ಯಾರು ರಚಿಸಿದರು?" ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ ನೋಡುತ್ತಿದ್ದರೆ, ನಟಿ ಈ ಮೊದಲು ಹಂಚಿಕೊಂಡಿದ್ದ ದ್ರೋಹ (betrayal) ಪೋಸ್ಟ್ ಈ 'ಷಡ್ಯಂತ್ರ' ಚಿತ್ರಕ್ಕೆ ಸಂಬಂಧಿಸಿದ್ದು ಎಂಬುದು ಸ್ಪಷ್ಟವಾಗುತ್ತಿದೆ.