ಕರ್ನಾಟಕ

karnataka

ETV Bharat / entertainment

ಧಾರ್ಮಿಕ ನಂಬಿಕೆಗಳಿಗಾಗಿ ಪ್ರೀತಿ ತ್ಯಾಗ ಮಾಡಿದ ಆಸಿಮ್ ರಿಯಾಜ್ - ಹಿಮಾಂಶಿ ಖುರಾನಾ! - Asim Himanshi dating

ವಿವಿಧ ಧಾರ್ಮಿಕ ನಂಬಿಕೆಗಳ ಹಿನ್ನೆಲೆ ಆಸಿಮ್ ರಿಯಾಜ್ ಮತ್ತು ಹಿಮಾಂಶಿ ಖುರಾನಾ ತಮ್ಮ ಪ್ರೀತಿಯನ್ನು ತ್ಯಾಗ ಮಾಡಿದ್ದಾರೆ.

Asim Riaz - Himanshi Khurana
ಆಸಿಮ್ ರಿಯಾಜ್ - ಹಿಮಾಂಶಿ ಖುರಾನಾ

By ETV Bharat Karnataka Team

Published : Dec 7, 2023, 9:56 AM IST

ಜನಪ್ರಿಯ ಹಿಂದಿ ರಿಯಾಲಿಟಿ ಶೋ 'ಬಿಗ್ ಬಾಸ್' ಖ್ಯಾತಿಯ ಆಸಿಮ್ ರಿಯಾಜ್ ಅವರ ಪ್ರೇಮಸಂಬಂಧ ಇನ್ನು ಮುಂದುವರೆಯುವುದಿಲ್ಲ. ಆಸಿಮ್ ರಿಯಾಜ್ ಮತ್ತು ಹಿಮಾಂಶಿ ಖುರಾನಾ ಸದ್ಯ ರಿಲೇಶನ್​ಶಿಪ್​ನಲ್ಲಿಲ್ಲ. ಬುಧವಾರದಂದು ಹಿಮಾಂಶಿ ಖುರಾನಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಆಸಿಮ್ ರಿಯಾಜ್​​ ಜೊತೆಗಿನ ಸಂಬಂಧಕ್ಕೆ ಫುಲ್​ಸ್ಟಾಪ್​ ಇಡುತ್ತಿರುವುದಾಗಿ ಘೋಷಿಸಿದ್ದಾರೆ. "ವಿವಿಧ ಧಾರ್ಮಿಕ ನಂಬಿಕೆಗಳಿಗಾಗಿ ಪ್ರೀತಿಯನ್ನು ತ್ಯಾಗ ಮಾಡಿದ್ದೇವೆ" ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಹಿಮಾಂಶಿ ಖುರಾನಾ ಪೋಸ್ಟ್: ಸೋಷಿಯಲ್​ ಮೀಡಿಯಾ ಪೋಸ್ಟ್ ಶೇರ್ ಮಾಡಿರುವ ಹಿಮಾಂಶಿ ಖುರಾನಾ, "ಹೌದು, ನಾವಿನ್ನು ಒಟ್ಟಿಗೆ ಇರುವುದಿಲ್ಲ. ನಾವು ಒಟ್ಟಿಗೆ ಕಳೆದ ಎಲ್ಲಾ ಸಮಯವು ಸಹ ಅದ್ಭುತವೇ. ಆದರೆ ನಮ್ಮ ಈ ಸಂಬಂಧವೀಗ ಕೊನೆಗೊಂಡಿದೆ. ನಮ್ಮ ಸಂಬಂಧದ ಪ್ರಯಾಣ ಅದ್ಭುತವಾಗಿತ್ತು, ಆದರೀಗ ನಾವು ನಮ್ಮ ವಿಭಿನ್ನ ಜೀವನದಲ್ಲಿ ಮುಂದುವರಿಯುತ್ತಿದ್ದೇವೆ. ನಮ್ಮ ವಿಭಿನ್ನ ಧಾರ್ಮಿಕ ನಂಬಿಕೆಗಳಿಗಾಗಿ ನಾವು ನಮ್ಮ ಪ್ರೀತಿಯನ್ನು ತ್ಯಾಗ ಮಾಡುತ್ತಿದ್ದೇವೆ" ಎಂದು ಬರೆದುಕೊಂಡಿದ್ದಾರೆ. ಅಲ್ಲದೇ, ಪ್ರತಿಯೊಬ್ಬರೂ ತಮ್ಮ ಖಾಸಗಿತನವನ್ನು ಗೌರವಿಸುವಂತೆಯೂ ಕೇಳಿಕೊಂಡಿದ್ದಾರೆ. "ನಮ್ಮ ಗೌಪ್ಯತೆಯನ್ನು ಗೌರವಿಸಲು ನಾವು ನಿಮ್ಮಲ್ಲಿ ವಿನಂತಿಸುತ್ತಿದ್ದೇವೆ" ಎಂದು ಬರೆದುಕೊಂಡಿದ್ದಾರೆ.

ಹಿಮಾಂಶಿ ಖುರಾನಾ, ಪಂಜಾಬಿ ಸಿಖ್ ಕುಟುಂಬಕ್ಕೆ ಸೇರಿದವರು. ಅಸಿಮ್ ರಿಯಾಜ್ ಮುಸ್ಲಿಂ ಧರ್ಮಕ್ಕೆ ಸೇರಿದವರು,​ ಜಮ್ಮು ಮೂಲದವರು. 'ಬಿಗ್ ಬಾಸ್ 13' ರಲ್ಲಿ ಇಬ್ಬರೂ ಭೇಟಿಯಾದರು, ಪರಸ್ಪರ ಪ್ರೀತಿಸಲು ಆರಂಭಿಸಿದರು. 'ಬಿಗ್ ಬಾಸ್' ನಿಂದ ಹೊರಬಂದ ನಂತರವೂ ಲವ್​ಬರ್ಡ್ಸ್​​​​ನಂತೆ ಗುರುತಿಸಿಕೊಂಡಿದ್ದರು. ಇಬ್ಬರೂ ಹಲವು ಲವ್​ ಸಾಂಗ್ಸ್​​​ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:ನಟ ಶ್ರೀಮುರಳಿ ಬರ್ತ್​​​ಡೇಯಂದು 'ಬಘೀರ' ಟೀಸರ್ ಬಿಡುಗಡೆ

ಸಾಮಾಜಿಕ ಮಾಧ್ಯಮದಲ್ಲಿ ಕಂಚಿಕೊಳ್ಳಲಾದ ಮತ್ತೊಂದು ಪೋಸ್ಟ್‌ನಲ್ಲಿ, "ನಾವು ಪ್ರಯತ್ನಿಸಿದ್ದು, ಪರಿಹಾರ ಕಂಡುಹಿಡಿಯಲಾಗಲಿಲ್ಲ. ನೀವಿನ್ನೂ ಒಬ್ಬರನ್ನೊಬ್ಬರು ಪ್ರೀತಿಸುತ್ತೀರಿ, ಆದರೆ ಅದೃಷ್ಟ ಸಾಥ್​ ನೀಡಲಿಲ್ಲ. ದ್ವೇಷವಿಲ್ಲ, ಪ್ರೀತಿ ಮಾತ್ರ. ಅದನ್ನು ಪ್ರಬುದ್ಧ ನಿರ್ಧಾರ ಎಂದು ಕರೆಯಲಾಗುತ್ತದೆ'' ಎಂದು ಹಿಮಾಂಶಿ ಖುರಾನಾ ಬರೆದುಕೊಂಡಿದ್ದಾರೆ. ಆದಾಗ್ಯೂ, ಅಸಿಮ್ ರಿಯಾಜ್​​ ಸಾಮಾಜಿಕ ಮಾಧ್ಯಮದಲ್ಲಿ ತಾವು ಬೇರೆಯಾಗುತ್ತಿರುವ ಬಗ್ಗೆ ಇನ್ನೂ ಘೋಷಿಸಿಲ್ಲ.

ಇದನ್ನೂ ಓದಿ:ಮೋಹನ್‌ಲಾಲ್ ಮಖ್ಯಭೂಮಿಕೆಯ 'ಮಲೈಕೋಟೈ ವಾಲಿಬನ್‌' ಟೀಸರ್ ನೋಡಿ

'ಬಿಗ್ ಬಾಸ್' ಒಂದು ಜನಪ್ರಿಯ ಕಿರುತೆರೆ ಕಾರ್ಯಕ್ರಮ. ಈ ಕಾರ್ಯಕ್ರಮದ ಮೂಲಕ ತಾರೆಯರು ತಮ್ಮ ಜನಪ್ರಿಯತೆ ಜೊತೆಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಾರೆ. ಹಲವು ಭಾಷೆಗಳಲ್ಲಿ ಕಾರ್ಯಕ್ರಮ ಪ್ರಸಾರವಾಗುತ್ತದೆ. ಇದೇ ಬಿಗ್​​ ಬಾಸ್​ ಮನೆಯಲ್ಲಿ ಹಲವು ಜೋಡಿಗಳ ಪ್ರೇಮಾಂಕುರವಾಗಿದೆ. ಅವುಗಳ ಪೈಕಿ ಕೆಲವು ಯಶಸ್ವಿಯಾಗಿದೆ. ಹೀಗೆ ಹಿಂದಿ ಬಿಗ್​ ಬಾಸ್​ ಮನೆಯಲ್ಲಿ ಹಿಮಾಂಶಿ ಖುರಾನಾ ಮತ್ತು ಅಸಿಮ್ ರಿಯಾಜ್​​ ಭೇಟಿಯಾಗಿ ಪ್ರೀತಿಯಲ್ಲಿದ್ದರು. ಇದೀಗ ತಮ್ಮ ಪ್ರೀತಿ ತ್ಯಾಗ ಮಾಡಿರುವುದಾಗಿ ಘೋಷಿಸಿದ್ದಾರೆ.

ABOUT THE AUTHOR

...view details