ಕರ್ನಾಟಕ

karnataka

ETV Bharat / entertainment

ಆಲಿಯಾ ಭಟ್-ರಣಬೀರ್ ಕಪೂರ್​ ಮದುವೆಗೆ ಮುಹೂರ್ತ ಫಿಕ್ಸ್​ ? - ಆಲಿಯಾ ಭಟ್ ಮತ್ತು ರಣಬೀರ್ ಕಪೂರ್​ ಮದುವೆಗೆ ಡೇಟ್ ಫಿಕ್ಸ್

1980 ರಲ್ಲಿ ದಿವಂಗತ ತಾರೆ ರಿಷಿ ಕಪೂರ್ ಮತ್ತು ಹಿರಿಯ ನಟಿ ನೀತು ಕಪೂರ್ ಅವರ ವಿವಾಹ ಸಮಾರಂಭ ನಡೆದಂತೆ ಮುಂಬೈನ ಚೆಂಬೂರ್‌ನಲ್ಲಿರುವ ಆರ್‌ಕೆ ಮನೆಯಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ ಎಂದು ಹೇಳಲಾಗುತ್ತಿದೆ.

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್​ ಮದುವೆಗೆ ಡೇಟ್ ಫಿಕ್ಸ್
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್​ ಮದುವೆಗೆ ಡೇಟ್ ಫಿಕ್ಸ್

By

Published : Apr 5, 2022, 5:45 PM IST

ಮುಂಬೈ: ಬಾಲಿವುಡ್​ನಲ್ಲಿ ಸದ್ಯ ಸದ್ದು ಮಾಡುತ್ತಿರುವ​ ಸೆಲೆಬ್ರೆಟಿ ಜೋಡಿಗಳಲ್ಲಿ ಆಲಿಯಾ ಭಟ್​-ರಣಬೀರ್​ ಜೋಡಿ ಕೂಡ ಒಂದು. ಬಾಲಿವುಡ್‌ನ ಪ್ರೀತಿಪಾತ್ರ ಜೋಡಿಗಳಲ್ಲಿ ಒಂದಾದ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್‌ಗೆ ಮದುವೆ ದಿನಾಂಕ ಫಿಕ್ಸ್​ ಆಗಿದೆ. ಸುಮಾರು ನಾಲ್ಕು ವರ್ಷಗಳಿಂದ ಡೇಟಿಂಗ್ ಮಾಡುತ್ತಿರುವ ರಣಬೀರ್ ಮತ್ತು ಆಲಿಯಾ ಈ ಏಪ್ರಿಲ್‌ನಲ್ಲಿ ತಮ್ಮ ಮದುವೆಗೆ ಸಜ್ಜಾಗುತ್ತಿದ್ದಾರೆ ಎಂದು ವರದಿಯಾಗಿದೆ.

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್​ ಮದುವೆಗೆ ಡೇಟ್ ಫಿಕ್ಸ್?

1980 ರಲ್ಲಿ ದಿವಂಗತ ತಾರೆ ರಿಷಿ ಕಪೂರ್ ಮತ್ತು ಹಿರಿಯ ನಟಿ ನೀತು ಕಪೂರ್ ಅವರ ವಿವಾಹ ಸಮಾರಂಭ ನಡೆದಂತೆ ಮುಂಬೈನ ಚೆಂಬೂರ್‌ನಲ್ಲಿರುವ ಆರ್‌ಕೆ ಮನೆಯಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ ಎಂದು ಹೇಳಲಾಗುತ್ತಿದೆ. ಈ ಜೋಡಿಯು ಆಪ್ತ ಕುಟುಂಬ ಸದಸ್ಯರು ಮತ್ತು ಸ್ನೇಹಿತರನ್ನು ಮಾತ್ರ ಆಹ್ವಾನಿಸುತ್ತಾರೆ. ಹಾಗೆಯೇ ರಣಬೀರ್ ಅವರ ಬ್ಯಾಚುಲರ್ ಪಾರ್ಟಿಯ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ಇದರಲ್ಲಿ ಅರ್ಜುನ್ ಕಪೂರ್ ಮತ್ತು ಅಯಾನ್ ಮುಖರ್ಜಿ ಅತಿಥಿಗಳ ಪಟ್ಟಿಯಲ್ಲಿದ್ದಾರೆ ಎನ್ನಲಾಗ್ತಿದೆ.

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್​ ಮದುವೆಗೆ ಡೇಟ್ ಫಿಕ್ಸ್

ಇದನ್ನೂ ಓದಿ:ಕಸದ ರಾಶಿಯಲ್ಲಿ ಭಿಕ್ಷುಕನ ಶವ ಪತ್ತೆ.. ಅರ್ಧ ದೇಹ ಕಿತ್ತು ತಿಂದ ಬೀದಿ ನಾಯಿಗಳು

ಈ ಜೋಡಿ 'ಬ್ರಹ್ಮಾಸ್ತ್ರ' ಚಿತ್ರದ ಸೆಟ್‌ನಲ್ಲಿ ಪ್ರೀತಿಯಲ್ಲಿ ಬಿದ್ದಿದ್ದರು. 2018 ರಲ್ಲಿ ಸೋನಮ್ ಕಪೂರ್ ಅವರ ಆರತಕ್ಷತೆಯಲ್ಲಿ ಇಬ್ಬರೂ ಜೋಡಿಯಾಗಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದರು. 2020 ರಲ್ಲಿ ರಿಷಿ ಕಪೂರ್ ಅವರ ಅಂತ್ಯಕ್ರಿಯೆಯ ವೇಳೆ ಆಲಿಯಾ ಕೂಡ ಉಪಸ್ಥಿತರಿದ್ದರು. ದಂಪತಿ ಸಂತೋಷ ಮತ್ತು ದುಃಖದಲ್ಲಿ ಪರಸ್ಪರ ಇರುವುದನ್ನು ನೋಡಿದ ರಣಬೀರ್ ಮತ್ತು ಆಲಿಯಾ ಅವರ ಅಭಿಮಾನಿಗಳು ಅವರಿಬ್ಬರ ವಿವಾಹದ ಸಂಭ್ರಮವನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ.

For All Latest Updates

TAGGED:

ABOUT THE AUTHOR

...view details