ಸಿನಿಮಾ ನಟರು ತಮ್ಮ ಕ್ರೇಜ್ಗೆ ತಕ್ಕಂತೆ ಸಂಭಾವನೆ ಪಡೆಯುತ್ತಾರೆ. ಸಾಮಾನ್ಯವಾಗಿ ನಾಯಕ ನಟರಿಗೆ ಸ್ಪಲ್ಪ ಹೆಚ್ಚೇ ದುಡ್ಡು ಸಿಗುತ್ತದೆ. ಆದರೆ ನಾಯಕಿಯರಿಗೆ ಸಿಗುವ ಸಂಭಾವನೆ ಕೊಂಚ ಕಡಿಮೆಯೇ. ಇನ್ನು ಹಾಸ್ಯ ಕಲಾವಿದರ ಬಗ್ಗೆ ಹೇಳಬೇಕೆಂದಿಲ್ಲ. ಅವರು ಮತ್ತೂ ಕಡಿಮೆ ಸಂಖ್ಯೆಯಲ್ಲಿ ಹಣ ಪಡೆದುಕೊಳ್ಳುತ್ತಾರೆ. ಆದರೆ ಒಬ್ಬ ಕಾಮಿಡಿಯನ್ ಒಂದೇ ಸಿನಿಮಾಗೆ ಭಾರತೀಯ ಎಲ್ಲಾ ನಟ- ನಟಿಯರಿಗಿಂತ ಹೆಚ್ಚು ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ.
ಹೌದು, ಹಾಲಿವುಡ್ ತಾರೆಯರು ಭಾರತೀಯ ಸಿನಿಮಾ ನಟರಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಾರೆ ಎಂಬುದು ನಮಗೆಲ್ಲರಿಗೂ ಈಗಾಗಲೇ ತಿಳಿದಿದೆ. ಆದರೆ ವಿಶ್ವದಾದ್ಯಂತ ಭಾರತೀಯ ಸಿನಿಮಾಗಳಿಗೆ ಹೆಚ್ಚುತ್ತಿರುವ ಕ್ರೇಜ್ನಿಂದಾಗಿ ಶಾರುಖ್ ಖಾನ್, ಅಮೀರ್ ಖಾನ್, ಪ್ರಭಾಸ್, ದಳಪತಿ ವಿಜಯ್, ರಜನಿಕಾಂತ್ ಇವರಂತಹ ನಟರು ಈ ಅಂತರವನ್ನು ಕಡಿಮೆ ಮಾಡಿದ್ದಾರೆ. ಒಂದು ಕಾಲದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಅಮೀರ್ ಖಾನ್ ಮುಂಚೂಣಿಯಲ್ಲಿದ್ದರು.
ಆದರೆ ಈ ವಿಚಾರವನ್ನು ಹಾಲಿವುಡ್ಗೆ ಹೋಲಿಸಿದರೆ, ನಮ್ಮ ದೇಶದ ಚಿತ್ರರಂಗದ ನಟರ ಸಂಭಾವನೆ ಇನ್ನೂ ಕಡಿಮೆ. ಹಾಸ್ಯ ನಟರದ್ದು ಮತ್ತೂ ಕಡಿಮೆ. ಆದರೆ ಇಲ್ಲೊಬ್ಬ ಹಾಸ್ಯನಟ ಭಾರತೀಯ ಚಿತ್ರರಂಗದ ಎಲ್ಲಾ ಸ್ಟಾರ್ ನಟರಿಗಿಂತಲೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ. ಅವರು ಹಾಲಿವುಡ್ ಹಾಸ್ಯನಟ 'ಜಿಮ್ ಕ್ಯಾರಿ'. ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಹಾಸ್ಯ ನಟರ ಸಾಲಿನಲ್ಲಿ ಇವರು ಮೊದಲಿಗರಾಗಿದ್ದಾರೆ.
ನಂ.1 ಹಾಸ್ಯನಟ:2008 ರಲ್ಲಿ ಜಿಮ್ ಕ್ಯಾರಿ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಹಾಸ್ಯನಟರಾದರು. ಎರಡು ದಶಕಗಳಿಂದ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಹಾಸ್ಯನಟ ಎಂದು ಗುರುತಿಸಿಕೊಂಡಿದ್ದಾರೆ. 1990ರ ದಶಕದಲ್ಲಿ 'ದಿ ಮಾಸ್ಕ್' ಮತ್ತು 'ಲೈಯರ್ ಲೈಯರ್'ನಂತಹ ಚಿತ್ರಗಳು ಯಶಸ್ವಿಯಾದವು. ಅವುಗಳು ಮಿಲಿಯನ್ ಡಾಲರ್ ಲೆಕ್ಕಾಚಾರದಲ್ಲಿ ಕಲೆಕ್ಷನ್ ಮಾಡಿತು. ಜಿಮ್ ಕ್ಯಾರಿ ಅವರು ಬ್ರೂಸ್ ಆಲ್ಮೈಟಿ ಚಿತ್ರದ ಮೂಲಕ ಹಾಲಿವುಡ್ಗೆ ಪಾದಾರ್ಪಣೆ ಮಾಡಿದರು.