ಎರ್ನಾಕುಲಂ:ಮಾದಕತಾರೆ ಸನ್ನಿ ಲಿಯೋನ್ ವಿರುದ್ಧ ವಂಚನೆ ಪ್ರಕರಣಕ್ಕೆ ಕೇರಳ ಹೈ ಕೋರ್ಟ್ ತಡೆ ನೀಡಿದೆ. ಈ ಪ್ರಕರಣ ಸಂಬಂಧ ಕೇರಳ ಸರ್ಕಾರ ಮತ್ತು ಅಪರಾಧ ದಳಕ್ಕೆ ನೋಟಿಸ್ ನೀಡಿದೆ. ಈ ಅರ್ಜಿಯನ್ನು ಎರಡು ವಾರಗಳ ಬಳಿಕ ಪುರಸ್ಕರಿಸುವುದಾಗಿ ಕೋರ್ಟ್ ತಿಳಿಸಿದೆ.
ಎರ್ನಾಕುಲಂನ ವ್ಯಕ್ತಿಯೊಬ್ಬರು ಖ್ಯಾತ ಬಾಲಿವುಡ್ ನಟಿ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಸನ್ನಿ ಲಿಯೋನ್ ಕಾರ್ಯಕ್ರಮದಲ್ಲಿ ಭಾಗಿಯಾಗುವುದಾಗಿ ಹೇಳಿ ನನ್ನ ಬಳಿ 30 ಲಕ್ಷ ಹಣ ಪಡೆದಿದ್ದರು. ಬಳಿಕ ಅವರು ಮಾತಿಗೆ ತಪ್ಪಿದ್ದು, ಹಣ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.