ಕರ್ನಾಟಕ

karnataka

ETV Bharat / entertainment

ನ್ಯಾಚುರಲ್ ಸ್ಟಾರ್ ನಾನಿಗೆ ಕಿಚ್ಚ ಸುದೀಪ್ ಸಾಥ್: 'ಹಾಯ್ ನಾನ್ನ' ಸಿನಿಮಾ ಸಾಂಗ್​ ರಿಲೀಸ್ - sudeep tweet

ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ 'ಹಾಯ್ ನಾನ್ನ' ಸಿನಿಮಾದ ಹೊಸ ಹಾಡು ಅನಾವರಣಗೊಂಡಿದೆ.

hi nanna cinema
ನ್ಯಾಚುರಲ್ ಸ್ಟಾರ್ ನಾನಿಗೆ ಕಿಚ್ಚ ಸುದೀಪ್ ಸಾಥ್

By ETV Bharat Karnataka Team

Published : Oct 7, 2023, 12:50 PM IST

'ದಸರಾ' ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆದ ಬಳಿಕ ನ್ಯಾಚುರಲ್ ಸ್ಟಾರ್ ನಾನಿ ನಟಿಸುತ್ತಿರುವ ಬಹುನಿರೀಕ್ಷಿತ ಚಿತ್ರ ಹಾಯ್ ನಾನ್ನ. ಟಾಲಿವುಡ್​ ಚಿತ್ರರಂಗದಲ್ಲಿ ಬಹುಬೇಡಿಕೆ ನಟನಾಗಿ, ನಿರ್ಮಾಪಕನಗಿ ಗುರುತಿಸಿಕೊಂಡಿರುವ ನಾನಿ ಮುಖ್ಯಭೂಮಿಕೆಯ 30ನೇ ಸಿನಿಮಾ ಇದು. ಟೀಸರ್ ಹಾಗೂ ಹಾಡಿನ ಮೂಲಕ ಚಿನಿಪ್ರಿಯರಲ್ಲಿ ನಿರೀಕ್ಷೆ ಹೆಚ್ಚಿಸಿತ್ತು. ಇದೀಗ ಹಾಯ್ ನಾನ್ನ ಸಿನಿಮಾದ ಎರಡನೇ ಹಾಡು ಬಿಡುಗಡೆ ಆಗಿದೆ.

'ಹಾಯ್ ನಾನ್ನ' ಸಿನಿಮಾ

ಈ ಹಿಂದೆ ರಿಲೀಸ್ ಆಗಿದ್ದ ’ವಿವರಣೆ ಬೇಕಿಲ್ಲ‘ ಎಂಬ ಹಾಡಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಇದೀಗ ಮಗಳಲ್ಲ ನೀ ನನ್ನ ಅಮ್ಮ ಎಂಬ ಕನ್ನಡ ಆವೃತ್ತಿಯ ಹಾಡನ್ನು ಕಿಚ್ಚ ಸುದೀಪ್ ಅವರು ಅನಾವರಣಗೊಳಿಸಿ, ನ್ಯಾಚುರಲ್ ಸ್ಟಾರ್ ನಾನಿ ಮತ್ತು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಮಗಳಲ್ಲ ನೀ ನನ್ನ ಅಮ್ಮ ಹಾಡು ಅಪ್ಪ ಮಗಳ ನಡುವಿನ ಬಾಂಧವ್ಯದ ಗೀತೆ. ತಂದೆ ಪಾತ್ರದಲ್ಲಿ ನಾನಿ ಹಾಗೂ ಮಗಳ ಪಾತ್ರದಲ್ಲಿ ಬೇಬಿ ಕಿಯಾರಾ ಖಾನ್ ನಟಿಸಿದ್ದಾರೆ. ಕವಿರಾಜ್ ಸಾಹಿತ್ಯ ಬರೆದಿರುವ ಹಾಡಿಗೆ ಹೇಶಮ್ ಅಬ್ದುಲ್ ವಹಾಬ್ ಟ್ಯೂನ್ ಹಾಕಿ ಹಾಡಿಗೆ ದನಿಯಾಗಿದ್ದಾರೆ.

'ಹಾಯ್ ನಾನ್ನ' ಸಿನಿಮಾ

ಹಾಯ್ ನಾನ್ನ ಸಿನಿಮಾಗೆ ಯುವ ನಿರ್ದೇಶಕ ಶೌರ್ಯುವ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಬಣ್ಣದ ಲೋಕದಲ್ಲಿ ನಿರ್ದೇಶಕನಾಗಿ ಇದು ಇವರ ಚೊಚ್ಚಲ ಚಿತ್ರ. ಎಮೋಷನಲ್ ಫ್ಯಾಮಿಲಿ ಎಂಟರ್​​ಟೈನ್ಮೆಂಟ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರ ಅಪ್ಪ - ಮಗಳ ಬಾಂಧವ್ಯದ ಸುತ್ತ ಹೆಣೆಯಲಾಗಿದೆ. ವಿಭಿನ್ನ ಕಥಾಹಂದರವನ್ನು ಈ ಚಿತ್ರ ಒಳಗೊಂಡಿದೆ. ನಾನಿ ಜೋಡಿಯಾಗಿ ಸೀತಾ ರಾಮಂ ಖ್ಯಾತಿಯ ಮೃಣಾಲ್ ಠಾಕೂರ್ ತೆರೆ ಹಂಚಿಕೊಂಡಿದ್ದಾರೆ.

ವೈರ ಎಂಟರ್​ಟೈನ್ಮೆಂಟ್ಸ್ ಬ್ಯಾನರ್ ಅಡಿ ಮೋಹನ್ ಚೆರುಕುರಿ, ಡಾ. ವಿಜೇಂದ್ರ ರೆಡ್ಡಿ ಹಾಗೂ ಮೂರ್ತಿ ಕಲಗಾರ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಸಾನು ಜಾನ್ ವರ್ಗೀಸ್ ಐಎಸ್​ಸಿ ಕ್ಯಾಮರಾ ವರ್ಕ್ ಚಿತ್ರಕ್ಕಿದೆ. ಹೇಶಮ್ ಅಬ್ದುಲ್ ವಹಾಬ್ ಸಂಗೀತ ನಿರ್ದೇಶನ, ಪ್ರವೀಣ್ ಆಂಥೋನಿ ಸಂಕಲನ ಚಿತ್ರಕ್ಕಿರಲಿದೆ.

ಇದನ್ನೂ ಓದಿ:ಸೌಂದರ್ಯದ ಸಿರಿ 'ಐಶ್ವರ್ಯಾ' ರೈ.. ಅಭಿಮಾನಿಗಳ ಹೃದಯ ಕದ್ದ ನಟಿಯ ಆಕರ್ಷಕ ಫೋಟೋಗಳು

ಇತ್ತೀಚಿನ ಹೆಚ್ಚಿನ ಸಿನಿಮಾಗಳು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ನಿರ್ಮಾಣ ಆಗುತ್ತಿದೆ. ಪಂಚಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ದಕ್ಷಿಣ ರಾಜ್ಯಗಳ ಜನರಿಗೆ ತಲುಪೋ ಸಲುವಾಗಿ ಒಂದೇ ಟೈಟಲ್ ಇರಲಿ ಎಂದು ಕನ್ನಡ, ತಮಿಳು, ಮಲಯಾಳಂ ಭಾಷೆಯಲ್ಲಿಯೂ 'ಹಾಯ್ ನಾನ್ನ' ಎಂದೇ ಶೀರ್ಷಿಕೆ ಇಡಲಾಗಿದೆ. ಮೆಗಾಸ್ಟಾರ್ ಚಿರಂಜೀವಿ ಆಶೀರ್ವಾದೊಂದಿಗೆ ಆರಂಭವಾಗಿರುವ ಈ ಸಿನಿಮಾ ಎಷ್ಟರ ಮಟ್ಟಿಗೆ ಗೆಲುವು ಸಾಧಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:ಪ್ರೀತಿಗೆ ಮತ್ತೊಂದು ಅವಕಾಶ: ಮಾಜಿ ಪ್ರೇಯಸಿ ಕೈ ಹಿಡಿಯಲಿದ್ದಾರೆ ಜನಪ್ರಿಯ ನಟ ವಿದ್ಯುತ್​ ಜಮ್ವಾಲ್​​

ABOUT THE AUTHOR

...view details