ಕರ್ನಾಟಕ

karnataka

ETV Bharat / entertainment

ಹೆಡ್​ ಬುಷ್ ಪ್ರಚಾರ: ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿ ಸೈಕಲ್ ರ‍್ಯಾಲಿ ಮಾಡಿದ ಡಾಲಿ & ಟೀಮ್ - dolly dhananjay cycle rally

ನಟ ರಾಕ್ಷಸ ಡಾಲಿ ಧನಂಜಯ್ ಅಭಿನಯದ ಹೆಡ್​ ಬುಷ್ ಸಿನಿಮಾ ಪ್ರಚಾರ ಜೋರಾಗಿದೆ.

head bush movie promotions
ಹೆಡ್​ ಬುಷ್ ಪ್ರಚಾರ

By

Published : Oct 13, 2022, 7:22 PM IST

ಬೆಂಗಳೂರು ಅಂಡರ್ ವರ್ಲ್ಡ್‌ ಡಾನ್ ಆಗಿ ಮರೆದ ಜಯರಾಜ್ ಕುರಿತ ಸಿನಿಮಾ ಹೆಡ್ ಬುಷ್‌ ಸಿನಿಮಾ ಪ್ರಚಾರ ಜೋರಾಗಿ ನಡೆಯುತ್ತಿದೆ. ಇಂದು ನಟ ರಾಕ್ಷಸ ಡಾಲಿ ಧನಂಜಯ್ ಸೈಕಲ್ ರ‍್ಯಾಲಿ ಮಾಡುವ ಮೂಲಕ ಹೆಡ್ ಬುಷ್ ಪ್ರಮೋಷನ್ ಮಾಡಿದ್ದಾರೆ. ಡಾಲಿಗೆ ಈ ಸಿನಿಮಾದಲ್ಲಿ ನಟಿಸಿರುವ ರಘು ಮುಖರ್ಜಿ ಹಾಗೂ ಬಾಲು ನಾಗೇಂದ್ರ ಸಾಥ್ ನೀಡಿದ್ದಾರೆ.

ಹೆಡ್​ ಬುಷ್ ಪ್ರಚಾರ

ಸೈಕಲ್ ರ‍್ಯಾಲಿಗೂ ಮುನ್ನ ಧನಂಜಯ್ ಹಾಗು ರಘು ಮುಖರ್ಜಿ ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್, ರಾಜ್​ಕುಮಾರ್, ಪಾರ್ವತಮ್ಮ ರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ರಾಜ್​​ಕುಮಾರ್ ಸಮಾಧಿ ಬಳಿಯಿಂದ ಮಾಗಡಿ ರಸ್ತೆಯ ವಿರೇಶ್ ಚಿತ್ರಮಂದಿರದವರೆಗೂ ಧನಂಜಯ್, ರಘು ಮುಖರ್ಜಿ ಹಾಗು ಹೆಡ್ ಬುಷ್ ಚಿತ್ರತಂಡ ಸೈಕಲ್ ರ‍್ಯಾಲಿ ಮಾಡಿ ಗಮನ ಸೆಳೆಯಿತು.

ಹೆಡ್​ ಬುಷ್ ಪ್ರಚಾರ

ಬರಹಗಾರ ಅಗ್ನಿ ಶ್ರೀಧರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರವನ್ನು ಶೂನ್ಯ ನಿರ್ದೇಶಿಸುತ್ತಿದ್ದಾರೆ. 1970 ರ ಬೆಂಗಳೂರಿನ ಭೂಗತ ಜಗತ್ತನ್ನು ಶೂನ್ಯ ಈ ಚಿತ್ರದಲ್ಲಿ ತೋರಿಸಿದ್ದಾರೆ. ಡಾಲಿ ಧನಂಜಯ್, ಪಾಯಲ್ ರಜ್​​ಪೂತ್, ಕ್ರೇಜಿಸ್ಟಾರ್ ರವಿಚಂದ್ರನ್, ಲೂಸ್ ಮಾದ ಯೋಗಿ, ವಸಿಷ್ಠ ಎನ್ ಸಿಂಹ, ಡೈನಾಮಿಕ್ ಸ್ಟಾರ್ ದೇವರಾಜ್, ಶೃತಿ ಹರಿಹರನ್, ರಘು ಮುಖರ್ಜಿ, ಬಾಲು ನಾಗೇಂದ್ರ ಮುಂತಾದ ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ.

ಇದನ್ನೂ ಓದಿ:ಹೆಡ್ ಬುಶ್ ಪ್ರೀ ರಿಲೀಸ್ ಇವೆಂಟ್.. ಮೋಹಕ ತಾರೆ, ಡಿಂಪಲ್ ಕ್ವೀನ್ ಸಾಥ್

ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನಿರ್ದೇಶನವಿದೆ. ಸುನೋಜ್ ವೇಲಾಯಧನ್ ಅವರ ಛಾಯಾಗ್ರಹಣವಿರುವ ಈ ಚಿತ್ರದ ಕಲಾ ನಿರ್ದೇಶಕರು ಬಾದಲ್ ನಂಜುಂಡಸ್ವಾಮಿ. ಡಾಲಿ ಪಿಕ್ಚರ್ಸ್ ಹಾಗೂ ಸೋಮಣ್ಣ ಟಾಕೀಸ್ ಲಾಂಛನದಲ್ಲಿ ಡಾಲಿ ಧನಂಜಯ್ ಹಾಗೂ ರಾಮ್ಕೊ ಸೋಮಣ್ಣ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಇದೇ ಅಕ್ಟೋಬರ್ 21ಕ್ಕೆ ಹೆಡ್​ ಬುಷ್ ಸಿನಿಮಾ ತೆರೆಗೆ ಬರಲಿದೆ.

ABOUT THE AUTHOR

...view details