ಲಂಡನ್ (ಯುನೈಟೆಡ್ ಕಿಂಗ್‌ಡಮ್): 'ಹ್ಯಾರಿ ಪಾಟರ್' ಚಲನಚಿತ್ರ ಸಿರೀಸ್ನ ಹಾಫ್ ಜಿಯೆಂಟ್ ರೂಬಿಯಸ್ ಹ್ಯಾಗ್ರಿಡ್ ಪಾತ್ರ ಹಾಗೂ ಹಲವಾರು ಹಾಲಿವುಡ್ ಸಿನಿಮಾಗಳ ಮೂಲಕ ಸಾಕಷ್ಟು ಹೆಸರು ಮಾಡಿದ್ದ ಸ್ಕಾಟಿಷ್ ನಟ, ಹಾಸ್ಯನಟ ಮತ್ತು ಬರಹಗಾರ ರಾಬಿ ಕಾಲ್ಟ್ರೇನ್ ಅವರ ತಮ್ಮ 72ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ ಎಂದು ಅವರ ಏಜೆಂಟ್ ತಿಳಿಸಿದ್ದಾರೆ.
ಹ್ಯಾರಿ ಪಾಟರ್ನ ಹ್ಯಾಗ್ರಿಡ್ ರಾಬಿ ಕಾಲ್ಟ್ರೇನ್ ನಿಧನ - ಹಾಫ್ ಜಿಯೆಂಟ್ ರೂಬಿಯಸ್ ಹ್ಯಾಗ್ರಿಡ್ ಪಾತ್ರ
1990ರಲ್ಲಿ ಮೊದಲ ಬಾರಿಗೆ ಕಾಲ್ಟ್ರೇನ್ ಕ್ರ್ಯಾಕರ್ ಸಿರೀಸ್ನಲ್ಲಿ ಡಿಟೆಕ್ಟಿವ್ ಪಾತ್ರ ಮಾಡಿ ಮೆಚ್ಚುಗೆ ಗಳಿಸಿದ್ದರು. ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲದೇ ಟಿವಿ ಹಾಗೂ ವೆಬ್ ಸಿರೀಸ್ಗಳಲ್ಲೂ ರಾಬಿ ನಟಿಸಿದ್ದರು.
![ಹ್ಯಾರಿ ಪಾಟರ್ನ ಹ್ಯಾಗ್ರಿಡ್ ರಾಬಿ ಕಾಲ್ಟ್ರೇನ್ ನಿಧನ harry potters hagrid robbie coltrane passes away](https://etvbharatimages.akamaized.net/etvbharat/prod-images/768-512-16651313-thumbnail-3x2-hhh.jpg)
ಕಾಲ್ಟ್ರೇನ್ ಅವರು 'ಹ್ಯಾರಿ ಪಾಟರ್' ನ ಪ್ರತಿ ಸರಣಿಯಲ್ಲೂ ಕಾಣಿಸಿಕೊಂಡಿದ್ದರು. 2001 ರಲ್ಲಿ 'ಫಿಲಾಸಫರ್ಸ್ ಸ್ಟೋನ್' ನಿಂದ 2011 ರಲ್ಲಿ 'ಡೆತ್ಲಿ ಹ್ಯಾಲೋಸ್ ಭಾಗ 2' ವರೆಗೆ ಜೆ.ಕೆ. ರೌಲಿಂಗ್ ಅವರ ಪುಸ್ತಕ ಸರಣಿಗೆ ಜೀವ ತುಂಬಿದ್ದರು. 1990ರಲ್ಲಿ ಮೊದಲ ಬಾರಿಗೆ ಕಾಲ್ಟ್ರೇನ್ ಕ್ರ್ಯಾಕರ್ ಸಿರೀಸ್ನಲ್ಲಿ ಡಿಟೆಕ್ಟಿವ್ ಪಾತ್ರ ಮಾಡಿ ಮೆಚ್ಚುಗೆ ಗಳಿಸಿದ್ದರು. ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲದೇ ಟಿವಿ ಹಾಗೂ ವೆಬ್ ಸಿರೀಸ್ಗಳಲ್ಲೂ ರಾಬಿ ನಟಿಸಿದ್ದರು. ರಾಬಿ ಜೇಮ್ಸ್ ಬಾಂಡ್ ಚಿತ್ರದಲ್ಲೂ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ:ಹಿರಿಯ ನಟ ಲೋಹಿತಾಶ್ವಗೆ ಹೃದಯಾಘಾತ.. ಆರೋಗ್ಯ ಸ್ಥಿತಿ ಬಗ್ಗೆ ಪುತ್ರ ಶರತ್ ಮಾಹಿತಿ