ವಿಭಿನ್ನ ಸಿನಿಮಾಗಳ ಮೂಲಕ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿರುವ ನಟ ಸುಧೀರ್ ಬಾಬು. ತಮ್ಮ ಉತ್ತಮ ಅಭಿನಯದಿಂದ ಪ್ರೇಕ್ಷಕರ ಮನಗೆದ್ದಿದ್ದಾರೆ. ಹೆಚ್ಚಾಗಿ ಲವರ್ ಬಾಯ್, ಕ್ಯೂಟ್ ಇಮೇಜ್ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಸುಧೀರ್ ಬಾಬು ಈ ಬಾರಿ ಪಕ್ಕಾ ಮಾಸ್ ಅವತಾರದಲ್ಲಿ ಸಿನಿಪ್ರೇಮಿಗಳೆದುರು ಬರುತ್ತಿದ್ದಾರೆ. ಅಲ್ಲದೇ ಇದೇ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಸಿನಿಮಾವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಸುಧೀರ್ ಬಾಬು ಮುಖ್ಯಭೂಮಿಕೆಯ ಚೊಚ್ಚಲ ಪ್ಯಾನ್ ಇಂಡಿಯಾ ಸಿನಿಮಾ ''ಹರೋಮ್ ಹರ''. ಫಸ್ಟ್ ಲುಕ್ ಮೂಲಕ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿದ್ದ ಚಿತ್ರತಂಡ, ಪಂಚ ಭಾಷೆಗಳಲ್ಲಿ ಟೀಸರ್ ಅನ್ನೂ ಸಹ ಅನಾವರಣಗೊಳಿಸಿದೆ.
ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ''ಹರೋಮ್ ಹರ' ಟೀಸರ್ ಬಿಡುಗಡೆ ಆಗಿದೆ. ಪಂಚ ಭಾಷೆಗಳ ಸೂಪರ್ ಸ್ಟಾರ್ಸ್ ಆಯಾ ಭಾಷೆಗಳಲ್ಲಿ ಟೀಸರ್ ರಿಲೀಸ್ ಮಾಡಿದ್ದಾರೆ. ತೆಲುಗಿನಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್, ಕನ್ನಡದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಮಲಯಾಳಂನಲ್ಲಿ ಜನಪ್ರಿಯ ನಟ ಮಮ್ಮುಟ್ಟಿ, ತಮಿಳಿನಲ್ಲಿ ಸ್ಟಾರ್ ಹೀರೋ ವಿಜಯ್ ಸೇತುಪತಿ ಹಾಗೂ ಹಿಂದಿ ಭಾಷೆಯಲ್ಲಿ ಫಿಟ್ನೆಸ್ ಐಕಾನ್ ಟೈಗರ್ ಶ್ರಾಫ್ ಅವರು ಸುಧೀರ್ ಬಾಬು ಸಿನಿಮಾದ ಟೀಸರ್ ರಿವೀಲ್ ಮಾಡಿದ್ದಾರೆ. ಈ ಚಿತ್ರಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಸಾಥ್ ನೀಡಿದ್ದು, ತಮ್ಮ ಸೋಷಿಯಲ್ ಮೀಡಿಯಾದಲ್ಲಿ ''ಹರೋಮ್ ಹರ'' ಟೀಸರ್ ಶೇರ್ ಮಾಡಿದ್ದಾರೆ.
ಇದನ್ನೂ ಓದಿ:ರಾಜಮೌಳಿ ಪಾದ ಸ್ಪರ್ಶಿಸಿದ ರಣ್‌ಬೀರ್ ಕಪೂರ್; ಬಾಲಿವುಡ್ ನಟನ ಕೊಂಡಾಡಿದ ಮಹೇಶ್ ಬಾಬು