ಕರ್ನಾಟಕ

karnataka

ETV Bharat / entertainment

ಪ್ರೇಮಿಗಳ ದಿನ: ಮತ್ತೆ ಮದುವೆಯಾಗಲಿರುವ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ - ನತಾಶಾ ಸ್ಟಾಂಕೋವಿಕ್

ಇಂದು ಪತ್ನಿ ನತಾಶಾ ಸ್ಟಾಂಕೋವಿಕ್ ಅವರೊಂದಿಗೆ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮರುಮದುವೆ ಆಗಲಿದ್ದಾರೆ.

Hardik Pandya remarriage
ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮರುಮದುವೆ

By

Published : Feb 14, 2023, 12:51 PM IST

ಇಂದು ಪ್ರೇಮಿಗಳ ದಿನದ ಸಂಭ್ರಮ ಮನೆ ಮಾಡಿದೆ. ಪ್ರೇಮಿಗಳ ದಿನವನ್ನು ತಮ್ಮದೇ ಆದ ರೀತಿಯಲ್ಲಿ ಆಚರಿಸುವವರು ಒಂದೆಡೆಯಾದರೆ, ಅದನ್ನು ವಿರೋಧಿಸುವವರು ಮತ್ತೊಂದೆಡೆ. ವಿರೋಧ ಇದ್ದರೂ ಯಾವುದೇ ಆಚರಣೆಗಳು ಸಂಪೂರ್ಣವಾಗಿ ನಿಂತಿಲ್ಲ. ಅದರಂತೆ ಈ ದಿನವನ್ನು ಇಷ್ಟಪಡುವವರು ತಮ್ಮದೇ ಶೈಲಿಯಲ್ಲಿ ಆಚರಣೆ ಮಾಡುತ್ತಿದ್ದಾರೆ. ಈ ಸಾಲಿಗೆ ಭಾರತ ತಂಡದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಕೂಡ ಸೇರಿದ್ದಾರೆ.

ಹೌದು, ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಹಾರ್ದಿಕ್ ಪಾಂಡ್ಯ ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಆದರೆ ಹಾರ್ದಿಕ್ ಪಾಂಡ್ಯ ಅವರು ಮತ್ತೆ ಮದುವೆಯಾಗಲು ಬಯಸಿದ್ದು ಏಕೆ ಎಂಬ ಪ್ರಶ್ನೆ ಈಗ ಎದ್ದಿದೆ. ಫೆಬ್ರವರಿ 14, ಮಂಗಳವಾರ ಪ್ರೇಮಿಗಳ ದಿನ. ಈ ವಿಶೇಷ ದಿನದಂದು ಹಾರ್ದಿಕ್ ಪಾಂಡ್ಯ ರಾಜಸ್ಥಾನದ ಉದಯಪುರದಲ್ಲಿ ಮರುಮದುವೆ ಆಗಲಿದ್ದಾರೆ.

ಹಾರ್ದಿಕ್ ಪಾಂಡ್ಯ ಮರುಮದುವೆ:ಪ್ರೇಮಿಗಳ ದಿನದಂದು ಹೆಚ್ಚಿನ ಪ್ರಣಯ ಪಕ್ಷಿಗಳು ಪರಸ್ಪರ ಉಡುಗೊರೆಗಳನ್ನು ನೀಡುವ ಮೂಲಕ ವಿಶೇಷ ಆಚರಣೆಗಳನ್ನು ಮಾಡುತ್ತಾರೆ. ಇಲ್ಲವೇ ಪರಸ್ಪರ ಉತ್ತಮ ಕ್ಷಣ ಕಳೆಯುತ್ತಾರೆ. ಈ ದಿನವನ್ನು ಹೇಗೆ ವಿಶೇಷವಾಗಿ ಆಚರಿಸಬೇಕು ಎಂದು ಮೊದಲೇ ಯೋಜಿಸುತ್ತಾರೆ. ಈಗ ಹಾರ್ದಿಕ್ ಪಾಂಡ್ಯ ತಮ್ಮ ಪತ್ನಿ ನತಾಶಾ ಸ್ಟಾಂಕೋವಿಕ್ ಜೊತೆ ಪ್ರೇಮಿಗಳ ದಿನವನ್ನು ಹೇಗೆ ಆಚರಿಸುತ್ತಾರೆ ಎಂಬ ಬಗ್ಗೆ ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಪತ್ನಿ ನತಾಶಾ ಸ್ಟಾಂಕೋವಿಕ್ ಅವರನ್ನು ಮರು ಮದುವೆ ಆಗುವ ಮೂಲಕ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಈ ದಿನವನ್ನು ವಿಶೇಷವಾಗಿಸಲಿದ್ದಾರೆ.

ಹಾರ್ದಿಕ್ ಪಾಂಡ್ಯ ಕುಟುಂಬ

ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಸರ್ಬಿಯಾದ ನೃತ್ಯಗಾರ್ತಿ ನತಾಶಾ ಸ್ಟಾಂಕೋವಿಕ್ ಅವರೊಂದಿಗೆ 2020ರ ಜನವರಿ 1ರಂದು ನಿಶ್ಚಿತಾರ್ಥ ಮಾಡಿಕೊಂಡರು. ಎಂಗೇಜ್​ಮೆಂಟ್​ ಫೋಟೋಗಳನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ನಂತರ, 2020ರ ಮೇ 31 ರಂದು ರಿಜಿಸ್ಟರ್ ವಿವಾಹವಾದರು. ಜುಲೈ 30ರಂದು, ನತಾಶಾ ಅವರು ಪುತ್ರನಿಗೆ ಜನ್ಮ ನೀಡಿದ್ದಾರೆ. ಅಗಸ್ತ್ಯ ಪಾಂಡ್ಯ ಮಗುವಿನ ಹೆಸರು. ಅಷ್ಟೇ ಅಲ್ಲ, ಹಾರ್ದಿಕ್ ಪಾಂಡ್ಯ ಕೆಲ ತಿಂಗಳ ನಂತರ ಮತ್ತೆ ತಂದೆಯಾಗಲಿದ್ದಾರೆ. ಇಂದು, ಈ ಪ್ರೇಮಿಗಳ ದಿನದಂದು, ಹಾರ್ದಿಕ್ ಪಾಂಡ್ಯ ತಮ್ಮ ಪತ್ನಿ ನತಾಶಾ ಅವರೊಂದಿಗೆ ಮರುಮದುವೆ ಆಗಲಿದ್ದಾರೆ. ಹಾರ್ದಿಕ್-ನತಾಶಾ ಅವರ ಈ ಮದುವೆ ರಾಜಸ್ಥಾನದ ಉದಯಪುರದಲ್ಲಿ ಸಂಪೂರ್ಣ ಸಂಪ್ರದಾಯಗಳೊಂದಿಗೆ ನಡೆಯಲಿದೆ.

ಇದನ್ನೂ ಓದಿ:ಪ್ರೇಮಿಗಳ ದಿನಕ್ಕೆ ಉಡುಗೊರೆ ನೀಡಿದ 'ಡ್ರೀಮ್​ ಗರ್ಲ್​ 2' ಚಿತ್ರತಂಡ; ಏನಿದು ಪಠಾಣ್​ ಟ್ವಿಸ್ಟ್?

ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಮದುವೆ ಸಂಭ್ರಮದಲ್ಲಿದ್ದಾರೆ, ಕೋವಿಡ್, ಲಾಕ್‌ಡೌನ್ ಇತ್ತು ಎಂದು ಈ ಹಿಂದೆ ರಿಜಿಸ್ಟರ್ ಮ್ಯಾರೆಜ್​ ಆಗಿದ್ದಾರೆ ಎಂದು ನಂಬಲಾಗಿದೆ. ಇದೀಗ ಇಬ್ಬರೂ ಅದ್ಧೂರಿಯಾಗಿ ಹಸೆಮಣೆ ಏರಲಿದ್ದಾರೆ. ಎರಡೂವರೆ ವರ್ಷದ ಅಗಸ್ತ್ಯ ಪಾಂಡ್ಯ ಕೂಡ ಪೋಷಕರ ಮದುವೆಯಲ್ಲಿ ಭಾಗಿಯಾಗಲಿದ್ದಾನೆ. ನಿನ್ನೆಯೇ ಆರಂಭವಾಗಿರುವ ಈ ವಿವಾಹ ಮಹೋತ್ಸವ ಫೆಬ್ರವರಿ 16ರವರೆಗೆ ನಡೆಯಲಿದ್ದು, ಅರಿಶಿನ, ಮೆಹಂದಿ, ಸಂಗೀತ ಕಾರ್ಯಕ್ರಮಗಳು ನಡೆಯಲಿವೆ ಎನ್ನುವ ಮಾಹಿತಿ ಇದೆ. ಈ ಅದ್ಧೂರಿ ಸಮಾರಂಭದಲ್ಲಿ, ಹಾರ್ದಿಕ್-ನತಾಶಾ ಅವರ ಸಂಬಂಧಿಗಳು, ಸ್ನೇಹಿತರು ಮತ್ತು ಕ್ರಿಕೆಟಿಗರು ಸೇರಿದಂತೆ ಬಾಲಿವುಡ್ ತಾರೆಯರು ಸಹ ಭಾಗವಹಿಸಲಿದ್ದಾರೆ.

ಇದನ್ನೂ ಓದಿ:ವರಾಹರೂಪಂ ಕೃತಿಸ್ವಾಮ್ಯ ಉಲ್ಲಂಘನೆ ಪ್ರಕರಣ; ರಿಷಬ್ ಶೆಟ್ಟಿ, ವಿಜಯ್ ಕಿರಗಂದೂರು ಹೇಳಿಕೆ ದಾಖಲಿಸಿಕೊಂಡ ಕೇರಳ ಪೊಲೀಸರು

ABOUT THE AUTHOR

...view details