ಟಾಲಿವುಡ್ನ ಯಂಗ್ ಹೀರೋ ತೇಜ್ ಸಜ್ಜಾ ನಾಯಕ ನಟನಾಗಿ ಕಾಣಿಸಿಕೊಂಡಿರುವ, ಪ್ರಶಾಂತ್ ವರ್ಮಾ ಆ್ಯಕ್ಷನ್ ಕಟ್ ಹೇಳಿರುವ ಪ್ಯಾನ್ ಇಂಡಿಯಾ ಚಿತ್ರ 'ಹನುಮಾನ್' ಇದೇ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗುತ್ತಿದೆ. ಟ್ರೇಲರ್ನಿಂದಲೇ ಸಖತ್ ಸದ್ದು ಮಾಡಿರುವ ಚಿತ್ರ ಇದಾಗಿದ್ದು ಅಭಿಮಾನಿಗಳಲ್ಲಿ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ನಟ ತೇಜ್ ಸಜ್ಜಾ, ನಾಯಕಿ ಅಮೃತಾ ಅಯ್ಯರ್ ಸೇರಿದಂತೆ ಪ್ರಚಾರದಲ್ಲಿ ತೊಡಗಿರುವ ಇಡೀ ಚಿತ್ರ ತಂಡ ಇಂದು ಬೆಂಗಳೂರಿಗೆ ಸಹ ಆಗಮಿಸಿತ್ತು.
ಚಿತ್ರದ ಕುರಿತು ಮೊದಲು ಮಾತನಾಡಿದ ನಾಯಕ ತೇಜ್ ಸಜ್ಜಾ, ಇದು ಹನುಮಾನ್ ದೇವರ ಬಗ್ಗೆ ಇರುವ ಸಿನಿಮಾವಲ್ಲ. ಇದು ಒಬ್ಬ ಸಾಮಾನ್ಯ ವ್ಯಕ್ತಿಗೆ ಸೂಪರ್ ಪವರ್ ಬಂದ್ರೆ ಏನಾಗುತ್ತದೆ ಅನ್ನೋದನ್ನು ಹೇಳಲು ಹೊರಟಿರುವ ಚಿತ್ರವಿದು. ವ್ಯಕ್ತಿ ಸೂಪರ್ ಹೀರೋ ಆಗುವುದು ಸೇರಿದಂತೆ, ಕಾಮಿಡಿ, ಆ್ಯಕ್ಷನ್, ಪ್ರೀತಿ ಎಲ್ಲವೂ ಈ ಚಿತ್ರದಲ್ಲಿ ಅಡಗಿದೆ. ಮೊದಲ ಶಾಟ್ನಲ್ಲಿ ನಿಮಗೆ ಗೂಸ್ ಬಂಪ್ಸ್ ಮೂಮೆಂಟ್ ಬರುತ್ತದೆ ಎಂದು ಚಿತ್ರದ ಕೆಲವು ಸ್ವಾರಸ್ಯಕರ ಸನ್ನಿವೇಶಗಳನ್ನು ಬಿಚ್ಚಿಟ್ಟಿರು.
ನಾಯಕಿ ಅಮೃತಾ ಅಯ್ಯರ್ ಮಾತನಾಡಿ, ಹನುಮಾನ್ ನಮ್ಮ ದೇವರು. ಇದೊಂದು ಫ್ಯಾಂಟಸಿ ಮೂವೀ. ಇದು ಹನುಮಾನ್ ಬಗ್ಗೆ ಅಲ್ಲ. ಒಂದು ಹುಡುಗನಿಗೆ ಹನುಮಾನ್ ಪವರ್ ಬಂದಾಗ ಏನಾಗುತ್ತದೆ ಅನ್ನೋದು ಚಿತ್ರದ ಕಥಾ ಹಂದರ. ಚಿತ್ರದ ಕಂಟೆಂಟ್ ತುಂಬಾ ಚೆನ್ನಾಗಿದೆ. ಈ ತರ ಸಿನಿಮಾ ಥಿಯೇಟರ್ನಲ್ಲಿ ನೋಡಬೇಕು. ಪ್ರಶಾಂತ್ ಸರ್ ಕ್ರಿಯೇಟಿವ್ ಆಗಿ ಡೈರೆಕ್ಟ್ ಮಾಡಿದ್ದಾರೆ. ಕನ್ನಡದಲ್ಲಿ ಕೆಆರ್ಜಿ ರಿಲೀಸ್ ಮಾಡುತ್ತಿದೆ ಎಂದರು.