ಕರ್ನಾಟಕ

karnataka

ETV Bharat / entertainment

ಕಡೆಗೂ ಫಿಕ್ಸ್​ ಆಯ್ತು ನಟ ಶಾಹಿದ್​ - ಕೃತಿ ಸಿನಿಮಾದ ಟೈಟಲ್​: ಪ್ರೇಮಿಗಳ ವಾರದಲ್ಲಿ ಚಿತ್ರ ಬಿಡುಗಡೆ - ಬಾಲಿವುಡ್​ ಸಿನಿಮಾ ಹೆಸರು

ಅಸಾಧ್ಯವಾದ ಪ್ರೇಮಕಥೆಯೊಂದನ್ನು ಹೇಳಲು ಹೊರಟ್ಟಿದ ಶಾಹಿದ್​ - ಕೃತಿ ಸಿನಿಮಾದ ಹೆಸರನ್ನು ಚಿತ್ರತಂಡ ಅಂತಿಮಗೊಳಿಸಿದೆ.

hahid Kapoor  Kriti Sanon impossible love story film title finalies
hahid Kapoor Kriti Sanon impossible love story film title finalies

By ETV Bharat Karnataka Team

Published : Jan 10, 2024, 3:57 PM IST

ಹೈದರಾಬಾದ್​: ನಟ ಶಾಹಿದ್​ ಕಪೂರ್​ ಮತ್ತು ಕೃತಿ ಸನೋನ್​ ಒಟ್ಟಾಗಿ ನಟಿಸುತ್ತಿರುವ ರೋಮ್ಯಾಂಟಿಕ್​ ಡ್ರಾಮಾ ಸಿನಿಮಾದ ಹೆಸರನ್ನು ಕಡೆಗೂ ಚಿತ್ರತಂಡ ಅಂತಿಮಗೊಳಿಸಿದೆ. ಅನ್​ಇಂಪಾಸಿಬಲ್​ ಲವ್​ ಸ್ಟೋರಿ (ಅಸಾಧ್ಯವಾದ ಪ್ರೇಮಕಥೆ) ಎನ್ನುವ ಮೂಲಕ ಸಿನಿ ಪ್ರಿಯರಿಗೆ ಕುತೂಹಲ ಮೂಡಿಸಿದ್ದ ಈ ಚಿತ್ರಕ್ಕೆ ಇದೀಗ 'ತೇರಿ ಬಾತೊ ಮೇ ಐಸಾ ಉಲ್ಜಾ ಜಿಯಾ' (ನಿನ್ನ ಮಾತಿನ ಮೋಡಿಗೆ ಸಿಲುಕಿದೆ) ಎಂಬ ಹೆಸರನ್ನು ಘೋಷಿಸಲಾಗಿದೆ.

ಅಮಿತ್​ ಜೋಶಿ ಮತ್ತು ಆರಾಧಾನ ಸಹ್​​ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದೀಗ ಚಿತ್ರತಂಡವೂ ಸೌಂಡ್​ ಟ್ರಾಕ್​ ಜೊತೆಗಿನ ಮೋಷನ್​ ಪೋಸ್ಟರ್​ ಮೂಲಕ ಚಿತ್ರದ ಟೈಟಲ್​ ಅನ್ನು ಪರಿಚಯಿಸಿದೆ. "ಪ್ರೇಮಿಗಳ ವಾರದಂದು ಫೆ. 9ರಂದು ಈ ಅಸಾಧ್ಯವಾದ ಪ್ರೇಮಕಥೆ 'ತೇರಿ ಬಾತೊ ಮೇ ಐಸಾ ಉಲ್ಜಾ ಜಿಯಾ' ಅನುಭವಿಸಿ" ಎಂದು ವಿಜನ್ ರ ಮ್ಯಾಡ್​ಡೊಕ್​ ಫಿಲ್ಮ್ಸ್​​ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಂಚಿಕೊಂಡಿದೆ.

ಇದೇ ಮೊದಲ ಬಾರಿಗೆ ಕೃತಿ ಸನೋನ್​ ಮತ್ತು ಶಾಹಿದ್​ ಕಪೂರ್ ಈ ಚಿತ್ರದಲ್ಲಿ​ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಮ್ಯಾಡ್​ಡೊಕ್​ ಫಿಲ್ಮ್ಸ್​​ ನಿರ್ಮಾಣ ಮಾಡಿದೆ. ಈ ಹಿಂದೆ ಈ ಚಿತ್ರವನ್ನು 2023ರ ಡಿಸೆಂಬರ್​ 7ಕ್ಕೆ ಬಿಡುಗಡೆ ಮಾಡುವುದಾಗಿ ಚಿತ್ರ ತಂಡ ಘೋಷಿಸಿತು. ಆದರೆ, ಕಾರಣಾಂತರಗಳಿಂದ ಚಿತ್ರದ ಬಿಡುಗಡೆ ದಿನಾಂಕವನ್ನು 2024ರ ಫೆಬ್ರವರಿ 9ಕ್ಕೆ ಮುಂದೂಡಲಾಯಿತು. ಚಿತ್ರದಲ್ಲಿ ನಟ ಧರ್ಮೇಂದ್ರ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಯಂತ್ರ ಮಾನವರ ನಡುವಿನ ಪ್ರೇಮ ಕಥೆಯನ್ನು ಈ ಚಿತ್ರ ಹೊಂದಿದ್ದು, ಚಿತ್ರದಲ್ಲಿ ನಟ ಶಾಹಿದ್​ ವಿಜ್ಞಾನಿಯಾಗಿ, ನಟಿ ಕೃತಿ ರೋಬೊಟ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಯುವ ಜನರನ್ನು ಗುರಿಯಾಗಿಸಿಕೊಂಡು ಈ ಚಿತ್ರಕಥೆ ನಿರ್ಮಿಸಲಾಗಿದ್ದು, ಯುವ ಜನರನ್ನು ಸಿನಿಮಾ ಸೆಳೆಯಲಿದೆ ಎಂಬ ಲೆಕ್ಕಾಚಾರ ನಡೆಸಲಾಗಿದೆ.

ಇನ್ನು ನಟನೆ ವಿಷಯದಲ್ಲಿ ಇತ್ತೀಚಿಗೆ ನಟ ಶಾಹಿದ್​ 'ಬ್ಲಡಿ ಡ್ಯಾಡಿ' ಎಂಬ ಆ್ಯಕ್ಷನ್​ ಥ್ರಿಲ್ಲರ್​ ಚಿತ್ರದಲ್ಲಿ ಮಿಂಚಿದ್ದರು. ನಟಿ ಕೃತಿ ಸನೋನ್​ ನಟ ಪ್ರಭಾಸ್​ ಜೊತೆಗೆ 'ಆದಿಪುರುಷ್'​ನಲ್ಲಿ ಕಾಣಿಸಿಕೊಂಡಿದ್ದರು. ನಟಿ ಕೃತಿ ಸದ್ಯ 'ದಿ ಕ್ರ್ಯೂ' ಚಿತ್ರದಲ್ಲಿ ಟಬು, ದಿಲ್ಜಿತ್​​ ದೊಸಂಜ ಮತ್ತು ಕರೀನಾ ಕಪೂರ್​ ಜೊತೆ ನಟಿಸುತ್ತಿದ್ದಾರೆ. ಅಲ್ಲದೇ ನಟಿ ಕಾಜೋಲ್​ ಜೊತೆಗೆ 'ದೊ ಪತ್ತಿ' ಚಿತ್ರದ ಶೂಟಿಂಗ್​ ಅನ್ನು ಮುಗಿಸಿದ್ದಾರೆ.

ಇದನ್ನೂ ಓದಿ: ಬಾಲಿವುಡ್​ ಗ್ರೀಕ್​ ಗಾಡ್​​ ಹೃತಿಕ್​ 50ನೇ ಜನ್ಮದಿನ ಸಂಭ್ರಮ; ಇಲ್ಲಿದೆ ನಟನ ಮುಂಬರುವ ಸಿನಿಮಾಗಳ ಪಟ್ಟಿ

ABOUT THE AUTHOR

...view details