ಡಾಲಿ ಧನಂಜಯ್ ಸ್ಯಾಂಡಲ್ವುಡ್ನಲ್ಲಿ ಸದ್ಯ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟ ಅಂದ್ರೆ ತಪ್ಪಾಗಲ್ಲ ನೋಡಿ. ಈಗಾಗಲೇ ತಮ್ಮ ವಿಭಿನ್ನ ಪಾತ್ರಗಳಿಂದ ಮನೆ ಮಾತಾಗಿರುವ ಧನಂಜಯ್ ಅವರ ಸಿನಿ ಜರ್ನಿಯ ಸಿಲ್ವರ್ ಜೂಬ್ಲಿ ಸಂಭ್ರಮ ಬಹಳ ಜೋರಾಗಿದೆ. ಹೌದು, ಡಾಲಿ ಧನಂಜಯ್ ಅಭಿನಯದ 25ನೇ ಸಿನಿಮಾ 'ಗುರುದೇವ್ ಹೊಯ್ಸಳ' ಗೆಲ್ಲುವ ಭರವಸೆ ಹೆಚ್ಚಿಸಿದ್ದು, ಈ ಚಿತ್ರದಲ್ಲಿ ಡಾಲಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈವರೆಗೂ ಕಾಣಿಸಿಕೊಂಡಿರದ ಪಾತ್ರದಲ್ಲಿ ಡಾಲಿ ಧನಂಜಯ್ ತೆರೆ ಮೇಲೆ ಅಬ್ಬರಿಸಲಿದ್ದಾರೆ.
ಈಗಾಗಲೇ ಸಿನಿಮಾದ ಹಾಡುಗಳು, ಟೀಸರ್ ಬಿಡುಗಡೆ ಆಗಿದ್ದು, ಚಿತ್ರರಂಗದಲ್ಲಿ ಭಾರೀ ಸದ್ದು ಮಾಡುತ್ತಿದೆ. ನಿರೀಕ್ಷೆ ಹೆಚ್ಚಿಸುತ್ತಲೇ ಇರುವ ಗುರುದೇವ್ ಹೊಯ್ಸಳ ಸಿನಿಮಾ ರಿಲೀಸ್ಗೆ ಇನ್ನೇನು ಕೆಲವೇ ಕೆಲ ದಿನಗಳು ಬಾಕಿ ಇದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಹೀಗಿರುವಾಗ ಚಿತ್ರತಂಡ ಟ್ರೇಲರ್ ಯಾವಾಗ ಬಿಡುಗಡೆ ಮಾಡುತ್ತಾರೆ ಎನ್ನುವ ಪ್ರಶ್ನೆಗೆ ಬ್ರೇಕ್ ಬಿದ್ದಿದೆ.
ಮಾರ್ಚ್ 20ಕ್ಕೆ ಟ್ರೇಲರ್ ಬಿಡುಗಡೆ:ಹೌದು, ಹೊಯ್ಸಳ ಟ್ರೇಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಮಾರ್ಚ್ 20, ಸಂಜೆ 7.29 ನಿಮಿಷಕ್ಕೆ "ಗುರುದೇವ್ ಹೊಯ್ಸಳ" ಚಿತ್ರದ ಟ್ರೇಲರ್ ಅನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. "ಗುರುದೇವ್ ಹೊಯ್ಸಳ" ಚಿತ್ರದ ನಾಯಕ ನಟ ಪ್ರಾಮಾಣಿಕ ಅಧಿಕಾರಿನಾ? ನಟರಾಕ್ಷಸನ ರೀತಿ ಭಯಂಕರ ಖಡಕ್ ಅಧಿಕಾರಿನಾ? ಇಲ್ಲಾ ಎನ್ಕೌಂಟರ್ ಸ್ಪೆಷಲಿಸ್ಟಾ? ಈ ಎಲ್ಲ ಪ್ರಶ್ನೆಗಳು ಸಿನಿ ಪ್ರೇಕ್ಷಕರನ್ನು ಕಾಡುತ್ತಿದ್ದು, ಟ್ರೇಲರ್ನಲ್ಲಿ ಈ ಎಲ್ಲಾ ಪ್ರಶ್ನೆಗೆ ಉತ್ತರ ಸಿಗುತ್ತಾ ಎಂದು ಕಾಯಬೇಕಿದೆ.