ಸ್ಯಾಂಡಲ್ವುಡ್ ಅಧ್ಯಕ್ಷ ಶರಣ್ ಅಭಿನಯನಯದ ಬಹುನಿರೀಕ್ಷಿತ ಚಿತ್ರ ಗುರು ಶಿಷ್ಯರು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಸದ್ಯ ಟೈಟಲ್ ಹಾಗೂ ಹಾಡುಗಳಿಂದ ಕನ್ನಡ ಚಿತ್ರರಂಗದಲ್ಲಿ ಟಾಕ್ ಆಗುತ್ತಿರುವ ಚಿತ್ರ ಇದಾಗಿದ್ದು, ಶಿಕ್ಷಕರ ದಿನಾಚರಣೆ ನಿಮಿತ್ತ ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಾಗಿದೆ.
ಮೂರುವರೇ ನಿಮಿಷದ ಟ್ರೈಲರ್ನಲ್ಲಿ ಶರಣ್ ದೈಹಿಕ ಶಿಕ್ಷಕ (PT Teacher)ನಾಗಿ ಕಾಣಿಸಿಕೊಂಡಿದ್ದಾರೆ. ತನ್ನ ಗುರುಗಳ ಮಾತಿನಂತೆ ಬೆಟ್ಟದಪುರು ಎಂಬ ಹಳ್ಳಿಯ ಶಾಲೆಯ ಶಿಕ್ಷಕನಾಗಿ ಬರುತ್ತಾರೆ. ಈ ಹಳ್ಳಿಯ ಮಕ್ಕಳ ಮುಂದೆ ಜೋಕರ್ ತರ ಕಾಣುವ ಶರಣ್, ಅಲ್ಲಿಯ ಶಿಷ್ಯಂದಿರ ಮುಂದೆ ಹೇಗೆ ಹೀರೋ ಆಗ್ತಾರೆ ಅನ್ನೋದು ಟ್ರೈಲರ್ನಲ್ಲಿ ತೋರಿಸಲಾಗಿದೆ. ಅಪ್ಪಟ ಹಳ್ಳಿಯ ಖೋ ಖೋ ಆಟದ ಸುತ್ತ ಈ ಸಿನಿಮಾದ ಕಥೆ ಒಳಗೊಂಡಿದ್ದು ಚಿತ್ರದ ಮೇಜರ್ ಹೈಲೆಟ್ಸ್.
ಶರಣ್ ಜೊತೆ ನಿಶ್ವಿಕಾ ನಾಯ್ಡು ಜೋಡಿಯಾಗಿದ್ದಾರೆ. ಜೊತೆಗೆ ಹಿರಿಯ ನಟ ದತ್ತಣ್ಣ, ಸುರೇಶ್ ಹೆಬ್ಳಿಕರ್ ಜೊತೆಗೆ ಶರಣ್ ಮಗ ಹೃದಯ್, ಪ್ರೇಮ್ ಮಗ ಏಕಾಂತ್, ಬುಲೆಟ್ ಪ್ರಕಾಶ್ ರಕ್ಷಕ್ ಮತ್ತು ರಂಜನ್ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಅಪೂರ್ವ ಕಾಸರವಳ್ಳಿ ಈ ಚಿತ್ರದಲ್ಲಿ ಊರಿನ ಗೌಡನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಜಡೇಶ್ ಕೆ ಹಂಪಿ ನಿರ್ದೇಶನ ಮಾಡಿದ್ದು, ಆರೂರು ಸುಧಾಕರ್ ಶೆಟ್ಟಿ ಕ್ಯಾಮರಾ ವರ್ಕ್ ಇದೆ. ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತ ನೀಡಿದ್ದು, ಮಾಸ್ತಿ ಮಂಜು ಸಂಭಾಷಣೆ ಬರೆದಿದ್ದಾರೆ. ಶರಣ್ ಅಭಿನಯದ ಜೊತೆಗೆ ನಿರ್ದೇಶಕ ತರುಣ್ ಸುಧೀರ್ ಜಂಟಿಯಾಗಿ ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ. ಸದ್ಯ ಟ್ರೈಲರ್ನಿಂದಲೇ ಭರವಸೆ ಹುಟ್ಟಿಸಿರೋ ಗುರು ಶಿಷ್ಯರು ಸಿನಿಮಾ ಇದೇ ಸೆಪ್ಟೆಂಬರ್ 23ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗಲು ಸಜ್ಜಾಗಿದೆ.
ಇದನ್ನೂ ಓದಿ:ಹಲವು ಕೌತುಕಗಳಿಂದ ಕೂಡಿರುವ ರಿಷಬ್ ಶೆಟ್ಟಿ ನಟನೆಯ ಕಾಂತಾರ ಚಿತ್ರದ ಟ್ರೈಲರ್