ನಟ ಶರಣ್ ಹಾಗೂ ನಿಶ್ವಿಕಾ ನಾಯ್ಡು ಮುಖ್ಯಭೂಮಿಕೆಯಲ್ಲಿ ನಟಿಸಿರುವ, ಜಡೇಶ್ ಕುಮಾರ್ ಹಂಪಿ ನಿರ್ದೇಶನದ ‘ಗುರು ಶಿಷ್ಯರು’ ಸಿನಿಮಾ ಜೀ -5 ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ನವೆಂಬರ್ 14ರಂದು ಮಕ್ಕಳ ದಿನಾಚರಣೆ ನಿಮಿತ್ತ ಸ್ಪೋರ್ಟ್ಸ್ ಡ್ರಾಮಾ ಕುರಿತಾದ ಗುರು ಶಿಷ್ಯರು ಸಿನಿಮಾವನ್ನು ನವೆಂಬರ್ 11ರಂದು ಜೀ 5ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಕೊಕ್ಕೊ ಆಟದ ಸುತ್ತ ಹೆಣೆಯಲಾದ ಕಥಾ ಹಂದರ ಹೊಂದಿರುವ ಈ ಸಿನೆಮಾ ಸೆಪ್ಟೆಂಬರ್ 23ರಂದು ರಾಜ್ಯಾದ್ಯಂತ ತೆರೆಕಂಡು ಅದ್ಭುತ ಯಶಸ್ಸು ಕಂಡಿತ್ತು.
ಸೂಪರ್ ಹಿಟ್ ಸಿನಿಮಾಗಳ ಮೂಲಕ ಜೀ 5 ಒಟಿಟಿ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತಿದೆ. ಹೊಚ್ಚ ಹೊಸ ಸಿನಿಮಾಗಳ ಜೊತೆ ಸಾಕಷ್ಟು ಕನ್ನಡ ಸಿನಿಮಾಗಳು ಇಲ್ಲಿ ಲಭ್ಯವಿದೆ. ಸತತ ನಾಲ್ಕು ವರ್ಷದಿಂದ ಉತ್ತಮ ಕಟೆಂಟ್ ಒಳಗೊಂಡ ಸಿನಿಮಾಗಳ ಮೂಲಕ ಕನ್ನಡ ಸಿನಿ ಪ್ರೇಮಿಗಳ ಮನ ಗೆಲ್ಲುತ್ತಿದೆ.
ಸೂಪರ್ ಹಿಟ್ ಸಿನಿಮಾಗಳಾದ ‘ವಿಕ್ರಾಂತ್ ರೋಣ’, ‘ಗಾಳಿಪಟ 2’ ಸಿನಿಮಾ ಕಡಿಮೆ ಅವಧಿಯಲ್ಲಿ ದಾಖಲೆ ವೀಕ್ಷಣೆ ಪಡೆದಿದ್ದು, ಜೀ 5 ಯಶಸ್ಸಿಗೆ ಸಾಕ್ಷಿ. ಇದೀಗ ಮತ್ತೊಂದು ಹಿಟ್ ಸಿನಿಮಾ ಜೀ5 ನಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಬಿಡುಗಡೆಯಾಗುತ್ತಿದೆ.