ಕರ್ನಾಟಕ

karnataka

ETV Bharat / entertainment

ಎರಡನೇ ಮಗುವಿನ ನಿರೀಕ್ಷೆಯಲ್ಲಿ ಗುರ್ಮೀತ್ ಚೌಧರಿ ಡೆಬಿನಾ ಬೊನ್ನರ್ಜಿ ದಂಪತಿ - ಡೆಬಿನಾ ಬೊನ್ನರ್ಜಿ

ನಟಿ ಡೆಬಿನಾ ಬೊನ್ನರ್ಜಿ ಎರಡನೇ ಗರ್ಭಧಾರಣೆ ಕುರಿತು ಬಹಿರಂಗಪಡಿಸಿದ್ದಾರೆ.

Debina Bonnerjee Gurmeet Choudhary announce second pregnancy
ಎರಡನೇ ಮಗುವಿನ ನಿರೀಕ್ಷೆಯಲ್ಲಿ ಗುರ್ಮೀತ್ ಚೌಧರಿ ಡೆಬಿನಾ ಬೊನ್ನರ್ಜಿ ದಂಪತಿ

By

Published : Aug 16, 2022, 12:40 PM IST

ನಟ ಗುರ್ಮೀತ್ ಚೌಧರಿ ಮತ್ತು ನಟಿ ಡೆಬಿನಾ ಬೊನ್ನರ್ಜಿ ದಂಪತಿ ತಮ್ಮ ಎರಡನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. 2011ರಲ್ಲಿ ವಿವಾಹವಾಗಿದ್ದ ಈ ಜೋಡಿ ಇದೀಗ ಸದ್ಯದಲ್ಲೇ ಎರಡನೇ ಮಗುವಿಗೆ ಪೋಷಕರಾಗುವ ಬಗ್ಗೆ ಘೋಷಿಸಿದ್ದಾರೆ. ಸೀಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಗುರ್ಮೀತ್ ಚೌಧರಿ ಡೆಬಿನಾ ಬೊನ್ನರ್ಜಿ ದಂಪತಿ

ಈ ಜೋಡಿ ಇನ್​ಸ್ಟಾಗ್ರಾಮ್​ನಲ್ಲಿ ತಮ್ಮ ಕುಟುಂಬದ ಸುಂದರ ಫೋಟೋ ಶೇರ್​ ಮಾಡಿದ್ದಾರೆ. ಪೋಸ್ಟ್​​ನಲ್ಲಿ, ಈ ಗರ್ಭಧಾರಣೆಯು ಯೋಜಿತವಲ್ಲ ಎಂದು ನಟಿ ಡೆಬಿನಾ ಬೊನ್ನರ್ಜಿ ಒಪ್ಪಿಕೊಂಡಿದ್ದಾರೆ. ಕೆಲವು ವಿಷಯಗಳು ದೈವಿಕವಾಗಿ ಯೋಜಿತವಾಗಿರುತ್ತದೆ, ಯಾವುದನ್ನೂ ಬದಲಾಯಿಸಲು ಸಾಧ್ಯವಿಲ್ಲ. ಇದು ಒಂದು ಆಶೀರ್ವಾದ, ಈ ಆಶೀರ್ವಾದ ನಮ್ಮನ್ನು ಪೂರ್ಣಗೊಳಿಸಲು ಶೀಘ್ರದಲ್ಲೇ ಬರಲಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಹೊಂಬಾಳೆ ಫಿಲಂಸ್​ ಬಹುನಿರೀಕ್ಷಿತ ಸಲಾರ್ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್

ಈ ದಂಪತಿಗ ತಮ್ಮ ಮೊದಲ ಮಗು ಲಿಯಾನಾಅನ್ನು ಏಪ್ರಿಲ್‌ನಲ್ಲಿ ಸ್ವಾಗತಿಸಿದ್ದರು. ಇದೀಗ ಮತ್ತೆ ಶುಭ ಸುದ್ದಿ ಶೇರ್ ಮಾಡಿದ್ದು, ಚಿತ್ರರಂಗದರು ಶುಭಾಶಯ ಕೋರಿದ್ದಾರೆ.

ABOUT THE AUTHOR

...view details