ಕರ್ನಾಟಕ

karnataka

ETV Bharat / entertainment

ಮುಂದಿನ ಸಂಕ್ರಾಂತಿಗೆ 'ಗುಂಟೂರು ಕಾರಂ' ತೆರೆಗೆ: ಸಿನಿಮಾದ ಮತ್ತೊಂದು ಹೊಸ ಅಪ್ಡೇಟ್ ಗೊತ್ತೇ? - Mahesh Babu

Guntur Kaaram: 'ಗುಂಟೂರು ಕಾರಂ' ಚಿತ್ರದ ಮೊದಲ ಹಾಡು ನವೆಂಬರ್​ ಮೊದಲ ವಾರ ಬಿಡುಗಡೆ ಆಗಲಿದೆ.

Gunturu Kaaram first song release soon
ಗುಂಟೂರು ಕಾರಂ ಮೊದಲ ಹಾಡು ಶೀಘ್ರದಲ್ಲೇ ರಿಲೀಸ್​

By ETV Bharat Karnataka Team

Published : Oct 29, 2023, 11:03 AM IST

Updated : Oct 29, 2023, 12:00 PM IST

ಸೌತ್​​ ಸೂಪರ್‌ ಸ್ಟಾರ್ ಮಹೇಶ್ ಬಾಬು ಹಾಗೂ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಶನ್​ನ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಗುಂಟೂರು ಕಾರಂ'. 2024 ರ ಸಂಕ್ರಾಂತಿ ಸಂದರ್ಭದಲ್ಲಿ ಚಿತ್ರ ತೆರೆಗಪ್ಪಳಿಸಲಿದೆ. ಚಿತ್ರತಂಡ ಯಾವಾಗ ಪ್ರಚಾರ ಪ್ರಾರಂಭಿಸಲಿದೆ?, ಅಪ್ಡೇಟ್ಸ್ ಎಂದು ಕೊಡಲಿದೆ? ಎಂದು ಸಿನಿಪ್ರಿಯರು ಕಾಯುತ್ತಿದ್ದು, ಚಿತ್ರದ ಮೊದಲ ಹಾಡಿನ ಬಿಡುಗಡೆ ದಿನಾಂಕದ ಸುದ್ದಿ ಸೋಷಿಯಲ್​ ಮೀಡಿಯಾಗಳಲ್ಲಿ ಸಖತ್​ ಸದ್ದು ಮಾಡುತ್ತಿದೆ.

ನಿರ್ದೇಶಕರಿಗೆ ಬರ್ತ್​​ಡೇ ಗಿಫ್ಟ್​: ಮೊದಲ ಹಾಡು ದಸರಾ ವೇಳೆ ಬಿಡುಗಡೆಯಾಗುವ ನಿರೀಕ್ಷೆ ಇತ್ತು. ಆದಾಗ್ಯೂ ಇತ್ತೀಚಿನ ಸುದ್ದಿ ಪ್ರಕಾರ, ಗುಂಟೂರು ಕಾರಂನ ಮೊದಲ ಹಾಡು ನಿರ್ದೇಶಕ ತ್ರಿವಿಕ್ರಮ್‌ ಶ್ರೀನಿವಾಸ್​ ಹುಟ್ಟುಹಬ್ಬದಂದು ಬಿಡುಗಡೆಯಾಗಲಿದೆ. ನವೆಂಬರ್ 7ರಂದು ನಿರ್ದೇಶಕರು ತಮ್ಮ 52ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಅಂದು ಚಿತ್ರದ ಮೊದಲ ಹಾಡನ್ನು ಅನಾವರಣಗೊಳಿಸಲು ಚಿತ್ರತಯಾರಕರು ಯೋಜಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಡಿಸೆಂಬರ್​ಗೆ ಶೂಟಿಂಗ್​ ಕಂಪ್ಲೀಟ್​:SSMB28ರ ಚಿತ್ರೀಕರಣ ನಾನಾ ಕಾರಣಗಳಿಂದ ವಿಳಂಬವಾಗುತ್ತಾ ಬಂತು. ಅಂತಿಮವಾಗಿ, ಡಿಸೆಂಬರ್ ಮೊದಲ ವಾರದೊಳಗೆ ಶೂಟಿಂಗ್​​ ಪೂರ್ಣಗೊಳಿಸುವ ಗುರಿಯನ್ನು ಚಿತ್ರತಂಡ ಹೊಂದಿದೆ. ಮಹೇಶ್ ಬಾಬು ಅವರ ಅಪಾರ ಸಂಖ್ಯೆಯ ಅಭಿಮಾನಿಗಳು 'ಗುಂಟೂರು ಕಾರಂ' ವೀಕ್ಷಣೆಗೆ ಎದುರು ನೋಡುತ್ತಿದ್ದಾರೆ. ಏಕೆಂದರೆ ಇದು ಯಶಸ್ವಿ ನಟ-ನಿರ್ದೇಶಕ ಜೋಡಿ ಮಹೇಶ್ ಬಾಬು ಮತ್ತು ತ್ರಿವಿಕ್ರಮ್ ಶ್ರೀನಿವಾಸ್ ಕಾಂಬೋದ ಬಹುನಿರೀಕ್ಷಿತ ಚಿತ್ರ. ಕೊನೆಯದಾಗಿ 2010ರಲ್ಲಿ ಮೂಡಿಬಂದ ಖಲೇಜಾ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. 2005ರಲ್ಲಿ ಬಂದ ಅಥಡು ಸಿನಿಮಾದಲ್ಲಿ ಮೊದಲ ಬಾರಿಗೆ ಸಹಕರಿಸಿದ್ದರು. ದಿ ಮೋಸ್ಟ್ ಎಕ್ಸ್​​ಪೆಕ್ಟೆಡ್​​​ ಆ್ಯಕ್ಷನ್ ಪ್ಯಾಕ್ಡ್ ಸಿನಿಮಾದಲ್ಲಿ ಮಹೇಶ್​​ ಬಾಬು ಜೊತೆ ಜಯರಾಮ್, ಶ್ರೀಲೀಲಾ, ಮೀನಾಕ್ಷಿ ಚೌಧರಿ, ಜಗಪತಿ ಬಾಬು ಮತ್ತು ರಮ್ಯಾ ಕೃಷ್ಣ ಸೇರಿದಂತೆ ಹಲವರು ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:ಅಪ್ಪು ಪುಣ್ಯಸ್ಮರಣೆ: ಪತ್ನಿ, ಪುತ್ರಿ ಸೇರಿ ರಾಜ್​ ಕುಟುಂಬಸ್ಥರಿಂದ ಸಮಾಧಿಗೆ ಪೂಜೆ ಸಲ್ಲಿಕೆ

ಆರಂಭದಲ್ಲಿ ಚಿತ್ರಕ್ಕೆ ಬಹುಭಾಷಾ ನಟಿ ಪೂಜಾ ಹೆಗ್ಡೆ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿತ್ತು. ಆದ್ರೆ ಶೂಟಿಂಗ್​​ಗೆ ಡೇಟ್ಸ್ ಕೊರತೆ ಹಿನ್ನೆಲೆಯಲ್ಲಿ ನಟಿ ಪ್ರಾಜೆಕ್ಟ್​​​ನಿಂದ ದೂರ ಸರಿಯಬೇಕಾಯಿತು. ಪರಿಣಾಮ, ಕನ್ನಡತಿ ಶ್ರೀಲೀಲಾ ಮೈನ್​ ಲೀಡ್​ ರೋಲ್ ಆರಿಸಿಕೊಂಡರೆ, ಮೀನಾಕ್ಷಿ ಚೌಧರಿ ಎರಡನೇ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶ್ರೀಲೀಲಾ ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಇದು ನಟಿಯ ಮುಂದಿನ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಚಿತ್ರೀಕರಣ ಬಹುತೇಕ ಕೊನೆ ಹಂತಕ್ಕೆ ತಲುಪಿದೆ. ಎಸ್. ಥಮನ್ ಸಂಗೀತ ಸಂಯೋಜನೆ, ರವಿ ಕೆ.ಚಂದ್ರನ್ ಅವರ ಕ್ಯಾಮರಾ ವರ್ಕ್ ಚಿತ್ರಕ್ಕಿದೆ. ಮುಂದಿನ ವರ್ಷ ಜನವರಿ 12 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದ್ದು ಅಭಿಮಾನಿಗಳು ಉತ್ಸಾಹ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಕಪ್ಪು ಸೀರೆಯಲ್ಲಿ ಹಾಲ್ಗೆನ್ನೆ ಸುಂದರಿ, ಬೆಳದಿಂಗಳಂಥ ರೂಪರಾಶಿ! ತಮನ್ನಾ ಭಾಟಿಯಾ ಫೋಟೋಗಳನ್ನು ನೋಡಿ..

Last Updated : Oct 29, 2023, 12:00 PM IST

ABOUT THE AUTHOR

...view details