ಕರ್ನಾಟಕ

karnataka

ETV Bharat / entertainment

ಪರಿಣಿತಿ-ರಾಘವ್​ ಮದುವೆ: ವರನ ಮನೆಗೆ ವಿಶೇಷ ಶೃಂಗಾರ- ವಿಡಿಯೋ ನೋಡಿ! - ಪರಿಣಿತಿ ರಾಘವ್ ಮದುವೆ

ನಟಿ ಪರಿಣಿತಿ ಚೋಪ್ರಾ ಹಾಗು ಸಂಸದ ರಾಘವ್​ ಚಡ್ಡಾ ಮದುವೆಗೆ ಭರದ ಸಿದ್ಧತೆ ನಡೆಯುತ್ತಿದೆ.

Raghav Chadha Parineeti Chopra
ಪರಿಣಿತಿ ಚೋಪ್ರಾ ಹಾಗು ರಾಘವ್​ ಚಡ್ಡಾ

By ETV Bharat Karnataka Team

Published : Sep 19, 2023, 10:17 AM IST

Updated : Sep 19, 2023, 2:13 PM IST

ಬಾಲಿವುಡ್​ ಮತ್ತೊಂದು ಅದ್ಧೂರಿ ವಿವಾಹಕ್ಕೆ ಸಾಕ್ಷಿಯಾಗಲಿದೆ. ಗ್ಲೋಬಲ್ ಐಕಾನ್​​ ಪ್ರಿಯಾಂಕಾ ಚೋಪ್ರಾ ಸಂಬಂಧಿ, ನಟಿ ಪರಿಣಿತಿ ಚೋಪ್ರಾ ಅವರು ಆಪ್‌ ಸಂಸದ ರಾಘವ್​ ಚಡ್ಡಾ ಅವರೊಂದಿಗೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ರಾಯಲ್​ ವೆಡ್ಡಿಂಗ್​ಗೆ ದಿನಗಣನೆ ಆರಂಭವಾಗಿದೆ. ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ.

ವರದಿಗಳ ಪ್ರಕಾರ, ಸೆಪ್ಟೆಂಬರ್​​ 24 ರಂದು ರಾಜಸ್ಥಾನದ ಉದಯಪುರದಲ್ಲಿ ವಿವಾಹ ಶಾಸ್ತ್ರ ನೆರವೇರಲಿದೆ. ದೆಹಲಿಯಲ್ಲಿ ಕೆಲವು ಆಚರಣೆಗಳು ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ವಧು- ವರರ ನಿವಾಸಗಳು ಶೃಂಗಾರಗೊಳ್ಳುತ್ತಿವೆ.

ಭಾನುವಾರ ಪರಿಣಿತಿ ಚೋಪ್ರಾ ದೆಹಲಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಭಾವಿ ಪತಿ, ಆಮ್​ ಆದ್ಮಿ ಪಕ್ಷದ ಯುವ ನಾಯಕ​ ರಾಘವ್​ ಚಡ್ಡಾ, ಪರಿಣಿತಿಯನ್ನು ಕರೆದೊಯ್ಯಲು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಪಾಪರಾಜಿಗಳು ಶೇರ್ ಮಾಡಿದ್ದ ಏರ್​ಪೋರ್ಟ್​ ವಿಡಿಯೋ ಸಖತ್​ ವೈರಲ್ ಆಗಿತ್ತು.

ಬಳಿಕ ಪಾಪರಾಜಿಗಳು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದ ಕೆಲವು ವಿಡಿಯೋಗಳಲ್ಲಿ, ರಾಘವ್​ ಮನೆ ಬಳಿಯ ತಯಾರಿಯನ್ನು ತೋರಿಸಿತ್ತು. ದೆಹಲಿಯಲ್ಲಿರುವ ರಾಘವ್​​ ನಿವಾಸದ ಮುಂದೆ, ಮದುವೆ ಪೂರ್ವ ತಯಾರಿಗೆ ಬೇಕಾದ ವಸ್ತುಗಳನ್ನು ಇಳಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಸಿದ್ಧತೆಗಳು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.

ವಿವಾಹಪೂರ್ವ ಶಾಸ್ತ್ರ ನೆರವೇರಿಸಲು ಪರಿಣಿತಿ ಮತ್ತು ರಾಘವ್​ ಕುಟುಂಬಸ್ಥರು ದೆಹಲಿಯಲ್ಲಿದ್ದಾರೆ. ಮದುವೆಗೆ ಉದಯಪುರಕ್ಕೆ ತೆರಳುವ ಮುನ್ನ ಕುಟುಂಬಸ್ಥರು ಮನರಂಜನೆಗಾಗಿ ಫ್ಯಾಮಿಲಿ ಕ್ರಿಕೆಟ್​ ಪಂದ್ಯಾವಳಿ ಕೂಡ ಆಯೋಜಿಸಲಿದ್ದಾರೆ. ವಧು-ವರರಿಗೆ ಕ್ರಿಕೆಟ್​ ಕುರಿತು ಆಸಕ್ತಿ ಇದೆ. ಕೆಲ ಸಮಯದ ಹಿಂದೆ ಇಬ್ಬರೂ ಒಟ್ಟಿಗೆ ಐಪಿಎಲ್​ ಪಂದ್ಯಾವಳಿ ವೀಕ್ಷಿಸಿ ಸಂಭ್ರಮಿಸಿದ್ದರು.

ಇದನ್ನೂ ಓದಿ:'ತೋತಾಪುರಿ 2' ಟ್ರೇಲರ್ ಬಿಡುಗಡೆಗೊಳಿಸಿದ ಶಿವ ರಾಜ್‌ಕುಮಾರ್: ಜಗ್ಗೇಶ್-ಡಾಲಿ ಜುಗಲ್​ಬಂದಿಗೆ ಏನಂದ್ರು?

ಮದುವೆಗಾಗಿ ಪರಿಣಿತಿ ಚೋಪ್ರಾ ತಾವು ಒಪ್ಪಿಕೊಂಡಿರುವ ಎಲ್ಲಾ ಕೆಲಸಗಳನ್ನು ಈಗಾಗಲೇ ಪೂರ್ಣಗೊಳಿಸಿದ್ದಾರೆ. ದೆಹಲಿಯಲ್ಲಿ ಪ್ರೀ ವೆಡ್ಡಿಂಗ್​ ಸೆಲೆಬ್ರೇಶನ್​​ ಪೂರ್ಣಗೊಳಿಸಿ, ಅದ್ಧೂರಿ ವಿವಾಹಕ್ಕೆ ಉದಯಪುರಕ್ಕೆ ಪ್ರಯಾಣಿಸಲಿದ್ದಾರೆ. ಸೆಪ್ಟೆಂಬರ್​ 23 ರಂದು ಮದುವೆಪೂರ್ವದ ಶಾಸ್ತ್ರ, ಸಮಾರಂಭಗಳು ನಡೆಯಲಿವೆ. ಸೆ. 24 ರಂದು ಹಾರ ಬದಲಾಯಿಸಿಕೊಳ್ಳಲಿದ್ದಾರೆ. ತಾಜ್​ ಲೇಕ್​ ಪ್ಯಾಲೆಸ್​, ಲೀಲಾ ಪ್ಯಾಲೆಸ್​ಗಳಲ್ಲಿ ಸೆಪ್ಟೆಂಬರ್​ 23 ಮತ್ತು 24ರ ಸಮಾರಂಭಗಳು ನೆರವೇರಲಿದೆ. ಅದ್ಧೂರಿ ಮದುವೆಯ ಫೋಟೋ, ವಿಡಿಯೋ ವೀಕ್ಷಿಸಲು ಅಭಿಮಾನಿಗಳು ಕಾತರರಾಗಿದ್ದಾರೆ.

ಇದನ್ನೂ ಓದಿ:ಹೊಸಬರ 'ಕೆಂದಾವರೆ' ಸಿನಿಮಾಗೆ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಸಾಥ್​

ಇನ್ನೂ ನಟಿ ಪರಿಣಿತಿ ಚೋಪ್ರಾ ಅವರ 'ಮಿಷನ್ ರಾಣಿಗಂಜ್​​: ದಿ ಗ್ರೇಟ್​​​ ಭಾರತ್​ ರೆಸ್ಕ್ಯೂ' ಚಿತ್ರ ತೆರೆಕಾಣಲು ಸಜ್ಜಾಗಿದೆ. ಟಿನು ಸುರೇಶ್​​ ನಿರ್ದೇಶನದ ಈ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ ಪ್ರಮುಖ ಪಾತ್ರ ವಹಿಸಿದ್ದಾರೆ, ನೈಜ ಘಟನೆಗಳನ್ನು ಆಧರಿಸಿರುವ ಸಿನಿಮಾ ಅ. 6ರಂದು ಥಿಯೇಟರ್​ಗಳಲ್ಲಿ ಬಿಡುಗಡೆ ಆಗಲಿದೆ. ನಟಿಯ ಕೊನೆಯ ಸಿನಿಮಾ ಕೋಡ್​ ನೇಮ್:​ ತಿರಂಗಾ.

Last Updated : Sep 19, 2023, 2:13 PM IST

ABOUT THE AUTHOR

...view details