ಕರ್ನಾಟಕ

karnataka

ETV Bharat / entertainment

'ರಾಜಹಂಸ' ಗೌರಿ ಶಂಕರ್ ಮುಂದಿನ ಸಿನಿಮಾದ ಫಸ್ಟ್​ ಲುಕ್​ ಟೈಟಲ್​ ಪೋಸ್ಟರ್ ನಾಳೆ ಬಿಡುಗಡೆ - ಈಟಿವಿ ಭಾರತ ಕನ್ನಡ

'ರಾಜಹಂಸ' ಖ್ಯಾತಿಯ ನಟ ಗೌರಿ ಶಂಕರ್​ ಅಭಿನಯದ ಮುಂಬರುವ ಚಿತ್ರದ ಫಸ್ಟ್​ ಲುಕ್​ ಟೈಟಲ್​ ಪೋಸ್ಟರ್ ನಾಳೆ ಬಿಡುಗಡೆಯಾಗಲಿದೆ.

Gowri shankar next movie title poster will be released on october 24th
'ರಾಜಹಂಸ' ಗೌರಿ ಶಂಕರ್ ಮುಂದಿನ ಸಿನಿಮಾದ ಫಸ್ಟ್​ ಲುಕ್​ ಟೈಟಲ್​ ಪೋಸ್ಟರ್ ನಾಳೆ ಬಿಡುಗಡೆ

By ETV Bharat Karnataka Team

Published : Oct 23, 2023, 1:09 PM IST

'ಜೋಕಾಲಿ', 'ರಾಜಹಂಸ' ಸಿನಿಮಾಗಳು ಕನ್ನಡ ಸಿನಿ ಪ್ರಿಯರಿಗೆ ನೆನಪಿರಬಹುದು. ಬಹುಶಃ ಈ ಚಿತ್ರದ ಹೆಸರನ್ನು ಮರೆತಿದ್ದರೂ 'ಚುಚ್ಚಿ ಚುಚ್ಚಿ ಕೊಂದೆಯಲ್ಲೇ..' ಎಂಬ ಹಾಡನ್ನು ಮಾತ್ರ ಮರೆಯಲು ಸಾಧ್ಯವಿಲ್ಲ. ಏಕೆಂದರೆ ಇದೇ ಹಾಡಿನಲ್ಲಿ ಗೌರಿ ಶಂಕರ್ ನಾಯಕನಾಗಿ ಮಿಂಚಿದ್ದರು. 'ರಾಜಹಂಸ' ಸಿನಿಮಾ ರಿಲೀಸ್ ಆಗಿ ಈಗಾಗಲೇ 5 ವರ್ಷಗಳ ಮೇಲಾಗಿದೆ. ಈಗ್ಯಾಕೆ ಈ ಸಿನಿಮಾ ಬಗ್ಗೆ ಅಂತೀರಾ? ಅದಕ್ಕೊಂದು ಕಾರಣವಿದೆ. ಗೌರಿ ಶಂಕರ್​ ಇದೀಗ ಮತ್ತೊಂದು ಸಿನಿಮಾದ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.

ಹೌದು, ಗೌರಿ ಶಂಕರ್​ ಅಭಿನಯದ 'ರಾಜಹಂಸ' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸದಭಿರುಚಿಯ ಕೌಟುಂಬಿಕ ಚಿತ್ರ ಇದಾಗಿತ್ತು. ಈ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿದ್ದವು. ಗೌರಿ ಶಂಕರ್ ಅಭಿನಯಕ್ಕೆ ಮೆಚ್ಚುಗೆಯ ಮಾತುಗಳು ಕೇಳಿ ಬಂದಿತ್ತು. ಇದೀಗ ಮತ್ತೊಂದು ಉತ್ತಮ ಸಿನಿಮಾ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.

'ರಾಜಹಂಸ' ಗೌರಿ ಶಂಕರ್ ಮುಂದಿನ ಸಿನಿಮಾದ ಫಸ್ಟ್​ ಲುಕ್​ ಟೈಟಲ್​ ಪೋಸ್ಟರ್ ನಾಳೆ ಬಿಡುಗಡೆ

ಕೆಲವು ವರ್ಷ ಸಿನಿ ರಂಗದಿಂದ ಗ್ಯಾಪ್​ ತೆಗೆದುಕೊಂಡಿದ್ದ ಗೌರಿ ಶಂಕರ್​ ಹಳ್ಳಿ ಸೊಗಡಿನ ಸಿನಿಮಾ ಮೂಲಕ ಮಿಂಚಲು ಸಜ್ಜಾಗಿದ್ದಾರೆ. ಕನ್ನಡ ಚಿತ್ರರಂದಲ್ಲಿ ವಿನೂತನ ಸಿನಿಮಾಗಳಿಗೇನು ಬರವಿಲ್ಲ. ಇದೀಗ ಗೌರಿ ಶಂಕರ್ ಅವರ ಜನಮನ ಸಿನಿಮಾ ಸಂಸ್ಥೆಯಿಂದ ಮತ್ತೊಂದು ಹಳ್ಳಿ ಸೊಗಡಿನ ಚಿತ್ರ ರಿಲೀಸ್‌ಗೆ ಸಜ್ಜಾಗಿದೆ. ಗೌರಿ ಶಂಕರ್​ ಅವರೇ ನಟಿಸಿ, ನಿರ್ಮಾಣ ಮಾಡಿರುವ ಈ ಹೊಸ ಸಿನಿಮಾದ ಫಸ್ಟ್​ ಲುಕ್​ ಟೈಟಲ್​ ಪೋಸ್ಟರ್​ ಅಕ್ಟೋಬರ್​ 24 ರಂದು ರಿಲೀಸ್​ ಆಗಲಿದೆ.

ಇದನ್ನೂ ಓದಿ:ರಾಜ್ಯ ಪ್ರಶಸ್ತಿ ವಿಜೇತ ರಘು ಕೋವಿ ನಿರ್ದೇಶನದ ಚೊಚ್ಚಲ ಚಿತ್ರದಲ್ಲಿ ಬಹುಭಾಷಾ ನಟ ಬಾಬಿ ಸಿಂಹ

ನಾಳೆ ಬೆಳಗ್ಗೆ 11.11 ಕ್ಕೆ ಸರಿಯಾಗಿ ಸಿನಿಮಾದ ಶೀರ್ಷಿಕೆ ಜೊತೆಗೆ ಮೊದಲ ನೋಟ ರಿವೀಲ್​ ಆಗಲಿದೆ. ಅಭಿಮಾನಿಗಳು ಕಾತರರಾಗಿದ್ದಾರೆ. ಈ ಕುರಿತು ಮಾತನಾಡಿದ ಗೌರಿ ಶಂಕರ್, 'ಇದೊಂದು ಅಪ್ಪಟ ಹಳ್ಳಿ ಸೊಗಡಿನ ಸಿನಿಮಾವಾಗಿದೆ. ಇದುವರೆಗೂ ಯಾರು ನೋಡಿರದ, ಮಾಡಿರದ ಸಬ್ಜೆಕ್ಟ್ ಇದಾಗಿದ್ದು, ಖಂಡಿತವಾಗಿಯೂ ಕನ್ನಡ ಚಿತ್ರ ಪ್ರಿಯರಿಗೆ ಇಷ್ಟವಾಗುತ್ತದೆ' ಎಂದು ಭರವಸೆ ವ್ಯಕ್ತಪಡಿಸಿದರು.

ಈಗಾಗಲೇ ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಇದೀಗ ಫಸ್ಟ್ ಲುಕ್ ಪೋಸ್ಟರ್ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿರುವ ಸಿನಿಮಾ ತಂಡ ಸಿಕ್ಕಾಪಟ್ಟೆ ಎಕ್ಸಾಯಿಟ್ ಆಗಿದ್ದಾರೆ. ಅಂದಹಾಗೆ, ಸಿನಿಮಾ ಹೇಗಿರಲಿದೆ? ಯಾವ ಸಬ್ಜೆಕ್ಟ್ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ? ಎಂದು ಗೊತ್ತಾಗಬೇಕಾದರೆ, ಸಿನಿಮಾ ಬಿಡುಗಡೆಯವರೆಗೂ ಕಾಯಬೇಕಿದೆ.

ಇದನ್ನೂ ಓದಿ:'ಪರ್ವ' ಕಾದಂಬರಿ ಸಿನಿಮಾವಾಗಿ ತೆರೆಗೆ; ಸಾಹಿತಿ ಎಸ್.ಎಲ್.ಭೈರಪ್ಪ ಹೇಳಿದ್ದೇನು?

ABOUT THE AUTHOR

...view details